ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಂಜಾನ್ ಎಂದರೆ ಚಿಕ್ಕಮಕ್ಕಳಿಗೆ ಉಪವಾಸದ ಪರಿಚಯ ಮಾಡಿಕೊಡುವ ಸಮಯ, ಪವಿತ್ರ ತಿಂಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಉಪವಾಸಗಳನ್ನು ಆಚರಿಸಬೇಕು ಎಂದು ಮಕ್ಕಳ ಭಕ್ತಿಯಾಗಿರುತ್ತದೆ. ಅದೇ ರೀತಿಯಾಗಿ ಪಟ್ಟಣದ ಚಾಂದ ತಾರಾ ಗಲ್ಲಿಯ ನಿವಾಸಿ ಅಲ್ತಾಫ್ ಕಮಲಾಪೂರ ಅವರ 7 ವರ್ಷ ಮಗಳಾದ ಅಲೀನಾ ಕಮಲಾಪೂರ ರೋಜಾ (ರಂಜಾನ ಉಪವಾಸ) ವ್ರತವನ್ನು ಮಾಡಿದ್ದಾರೆ. ಮಗು ಉಪವಾಸ ವ್ರತ ಮಾಡಿದ್ದಕ್ಕೆ ಸಂಬಂಧಿಕರು ಶುಭಾಶಯಗಳನ್ನು ತಿಳಿಸಿದ್ದಾರೆ.

