Subscribe to Updates
Get the latest creative news from FooBar about art, design and business.
Author: editor.udayarashmi@gmail.com
S* ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಖಡಕ್ ಸೂಚನೆ B*ಮಾದಕ ದ್ರವ್ಯ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾದಕ ದ್ರವ್ಯಗಳ ಕಡಿವಾಣಕ್ಕೆ ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿಯೊಂದಿಗೆ ಮಾದಕ ದ್ರವ್ಯ ಸೇವಿಸುವವರನ್ನು ಪರೀಕ್ಷೆಗೊಳಪಡಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಕಡಿವಾಣಕ್ಕಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಜನರ ಆರೋಗ್ಯ ಮೇಲೆ ಬೀರುವ ದುಷ್ಪರಿಣಾಮಗಳ ಜಾಗೃತಿ ಜೊತೆಗೆ ಮಾದಕ ವಸ್ತು- ದ್ರವ್ಯ ಸೇವನೆಗೊಳಗಾದವರಿಗೆ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು. ಇದರಿಂದ ಜನರಲ್ಲಿ ಅತಿಯಾಗಿ ಜಾಗೃತಿ ಮೂಡುವುದರೊಂದಿಗೆ ಭಯದಿಂದ ಮಾದಕ ವಸ್ತುಗಳ ಬಳಕೆ ಪ್ರಮಾಣ ತಗ್ಗಲು ಸಹಕಾರಿಯಾಗಲಿರುವುದರಿಂದ ಮಾದಕ ದ್ರವ್ಯ ಸೇವನೆಗೊಳಗಾದವರನ್ನು ಪರೀಕ್ಷೆಗೆ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಅಕ್ರಮ…
ಉದಯರಶ್ಮಿ ದಿನಪತ್ರಿಕೆ ವರದಿ: ಸಂಪದಾ ಹಿರೇಮಠಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ನೂರಾರು ದೇವ,ದೇವತೆಗಳ ಪಲ್ಲಕ್ಕಿಗಳ ಮಹಾಪೂರವೇ ಇಲ್ಲಿ ಹರಿದು ಬಂದಿತು. ಅವು ಕೃಷ್ಣಾ ನದಿ ತೀರದತ್ತ ಲಗ್ಗೆಯಿರಿಸಿ ಭಕ್ತಿ ಭಾವರಸಗಳ ಪರಿಮಳ ಬೀರಿದವು. ಎಲ್ಲೆಲ್ಲೂ ಪಲ್ಲಕ್ಕಿಗಳ ಕಲರವ. ಅರಿಷಿಣ ಭಂಡಾರಮಯದಲ್ಲಿ ಮೊಳಗಿ ಮಿನುಗಿದವು. ಕೃಷ್ಣೆಯ ಪವಿತ್ರ ಜಲ ಸಿಂಚನದಲ್ಲಿ ದೈವ ಪಲ್ಲಕ್ಕಿಗಳ ಪುಣ್ಯಸ್ನಾನ ಜೋರಾಗಿತ್ತು. ದೇವರ ಉತ್ಸವ ಮೂತಿ೯, ಪಲ್ಲಕ್ಕಿಗಳ ಶುದ್ಧೀಕರಣ ಕಾಯಕ ಭಕ್ತಿ ಪರಾಕಾಷ್ಠೆಯಲ್ಲಿ ಸಾಗಿತ್ತು.ಕೃಷ್ಣಾ ನದಿತೀರದ ದಂಡೆಯಲ್ಲಿಂದು ಯುಗಾದಿ ಅಮವಾಸ್ಯೆ ನಿಮಿತ್ಯ ಶುಕ್ರವಾರ ಕಂಡುಬಂದ ವಿಶೇಷ ದೃಶ್ಯಗಳಿವು.ಊರ ತುಂಬೆಲ್ಲಾ ಡೊಳ್ಳಿನ ನಿನಾದ. ಸಹಸ್ರಾರು ಜನರು ಪಲ್ಲಕ್ಕಿಯಲ್ಲಿ ದೇವರುಗಳ ಮೂರ್ತಿ ತರುತ್ತಿರುವ ದೃಶ್ಯ, ಪಲ್ಲಕ್ಕಿಗಳ ಸ್ನಾನ, ಗುಂಪಾಗಿ ಅಡುಗೆ ಮಾಡಿ, ನೈವೇದ್ಯ ಮಾಡುತ್ತಿರುವ ದೃಶ್ಯ ಝೇಂಕಾರ ಕಂಡುಬಂದಿತು. ಭಾರತೀಯ ಸಂಸ್ಕೃತಿ, ಪ್ರಕೃತಿ, ಪ್ರಕಾರ ಯುಗಾದಿ ಹಿಂದೂಗಳಿಗೆ ವಷಾ೯ರಂಭದ ಮೊದಲ ಹಬ್ಬ. ಧಾಮಿ೯ಕ ಚೌಕಟ್ಟಿನಲ್ಲಿ ವಿಶೇಷ ಮಹತ್ವ ಹೊಂದಿರುವ ಈ ದಿನ ಹೊಸ ವರ್ಷಕ್ಕೆ ಮುನ್ನುಡಿ ಬರೆದಿದೆ. ಹಾಗಾಗಿ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ…
ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ಸಮಾಜದ ಶಾಸಕರೊಬ್ಬರಿಗೆ ಅನ್ಯಾಯವಾಗಿದೆ, ಅದರ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ, ಆದರೆ ವಿನಾಕಾರಣ ಕೆಲವರು ನಮ್ಮ ಸಮಾಜದ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ, ನಮ್ಮ ಸಮಾಜದ ಒಗ್ಗಟ್ಟು, ಪ್ರಗತಿ ಸಹಿಸಿಕೊಳ್ಳದೇ ಹೊಟ್ಟೆಕಿಚ್ಚಿನಿಂದ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯವಾದರೆ ನಾನು ಆತನ ನ್ಯಾಯದ ಪರವಾಗಿ ನಿಲ್ಲುವೆ, ಎಲ್ಲ ಸಮಾಜದ ಶ್ರೀಗಳು ಸಹ ತಮ್ಮ ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದ್ದು ಇದೆ, ಅದರಂತೆ ಪಂಚಮಸಾಲಿ ಹೋರಾಟ, ಉತ್ತರ ಕರ್ನಾಟಕ ಪ್ರಗತಿ ಕಳಕಳಿ ಹೊಂದಿರುವ ಜನಪರ ನಾಯಕ ಯತ್ನಾಳ ಅವರ ಬೆನ್ನಿಗೆ ನಿಂತಿದ್ದೇನೆ, ಉಚ್ಛಾಟನೆ ಮಾಡಿರುವುದನ್ನು ಖಂಡಿಸಿದ್ದೇನೆ ಎಂದರು.ಕಾರಣವಿಲ್ಲದೇ ಒಬ್ಬ ಪ್ರಭಾವಿ ನಾಯಕನನ್ನು ಉಚ್ಛಾಟನೆ ಮಾಡಿರುವುದು ಸಮಸ್ತ ಪಂಚಮಸಾಲಿ ಸಮಾಜದ ಜನರ ಭಾವನೆಗಳಿಗೆ ನೋವು ತರಿಸಿದೆ ಎಂದರು.ಪಂಚಮಸಾಲಿ ಸಮಾಜ…
2025-26ನೇ ಸಾಲಿನ ಆಯ-ವ್ಯಯ ಬಜೆಟ್ ಮಂಡಿಸಿದ ಪೌರಾಯುಕ್ತೆ ಜ್ಯೋತಿ ಗಿರೀಶ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ದೇಸಾಯಿ ವೃತ್ತವನ್ನು 40 ಲಕ್ಷ ರೂಗಳಲ್ಲಿ ಅಭಿವೃದ್ಧಿಪಡಿಸಿ ಟ್ರಾಪಿಕ್ ಸಿಗ್ನಲ್ ದೀಪಗಳನ್ನು ಅಳವಡಿಸಲಾಗುವುದು ಎಂದು ಪೌರಾಯುಕ್ತ ಜ್ಯೋತಿ ಗಿರೀಶ ತಿಳಿಸಿದರು.ನಗರದ ನಗರಸಭೆಯ ಸಭಾ ಭವನದಲ್ಲಿ 2025-26ನೇ ಸಾಲಿನ ಆಯ-ವ್ಯಯ ಬಜೆಟ್ ಸಭೆಯಲ್ಲಿ ಅವರು ಮಾಹಿತಿ ನೀಡಿದರು. 34.84 ಕೋಟಿ ರೂ ನಿರೀಕ್ಷಿತ ಸ್ವೀಕೃತಿಯಾಗಲಿದೆ, 34.78 ಕೋಟಿ ರೂ ನಿರೀಕ್ಷಿತ ಪಾವತಿಯಾಗಲಿದೆ ಒಟ್ಟು 6.60 ಲಕ್ಷ ರೂ ಉಳಿತಾಯ ವಾಗಲಿದೆ ಎಂದು ಬಜೆಟ್ ಮಂಡಿಸಿದರು.ನಾಡಿನ ಒಳಗಡೆ ಕಾಡು ಎಂಬ ಶೀರ್ಷಿಕೆ ಅಡಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಡು ಬೆಳೆಸುವುದಕ್ಕೆ 20 ಲಕ್ಷ, ಶಿವಾಜಿ ವೃತ್ತ ಅಭಿವೃದ್ಧಿಗೆ 15 ಲಕ್ಷ, ಟಿಪ್ಪು ಸುಲ್ತಾನ ಸರ್ಕಲ್ ಅಭಿವೃದ್ದಿ ಹಾಗೂ ಟ್ರಾಪಿಕ್ ಸಿಗ್ನಲ್ ದೀಪ ಅಳವಡಿಕೆಗೆ 15 ಲಕ್ಷ, ಪರಶುರಾಮ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ, ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 40 ಲಕ್ಷ, ಮುಸ್ಲಿಂ ಸ್ಮಶಾನ ಅಭಿವೃದ್ಧಿಗೆ 20 ಲಕ್ಷ ರೂ,…
ಬಿರುಬೇಸಿಗೆಯಲ್ಲಿ ನೀರಿನ ಬವಣೆ | ದಿನದಿಂದ ದಿನಕ್ಕೆ ಬತ್ತುತ್ತಿರುವ ಶ್ರಮಬಿಂದು ಸಾಗರ ಬ್ಯಾರೇಜ್ | ಜನಸಾಮಾನ್ಯರಲ್ಲಿ ಆತಂಕ! ಉದಯರಶ್ಮಿ ದಿನಪತ್ರಿಕೆ ವರದಿ: ಎಸ್.ಎಮ್.ಇಟ್ಟಿಜಮಖಂಡಿ: ತಾಲೂಕಿನ ನೀರಿನ ಮೂಲಗಳಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ, ಜಂಬಗಿ ಸೇತುವೆ ಬಳಿ ನೀರು ಬತ್ತಿ ಹೋಗುತ್ತಿದ್ದು ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣಿ ತುಸು ತಟ್ಟಲಿದ್ದು ಮೇ ತಿಂಗಳಿಂದ ಜೂನ ವರೆಗೆ ಒಂದು ತಿಂಗಳು ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ ಎಂಬ ಆತಂಕ ಕಾಡುತ್ತಿದೆ.ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ಬಾಯಾರಿಗೆ ನಿವಾರಿಸಲು ನೀರು ಅತ್ಯವಶ್ಯವಾಗಿದೆ. ನೀರು ಪ್ರಾಣಿ ಸಂಕುಲದ ಮುಖ್ಯ ಜೀವಾಳವಾಗಿದೆ. ನೀರನ್ನು ಮಿತವಾಗಿ ಬಳಸಿ, ಪ್ರಾಣಿ ಪಕ್ಷಿಗಳಿಗೆ, ಜಾನುವಾರಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕಾಗಿದೆ, ನೀರನ್ನು ಮಿತವಾಗಿ ಬಳಸಬೇಕಿದೆ.ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹವಿದ್ದು ಬೇಸಿಗೆಯನ್ನು ನೀಗಿಸಬಹುದಾಗಿದ್ದು ಆದರು ಒಂದು ತಿಂಗಳವರೆಗೆ ತುಸು ತೊಂದರೆ ಉಂಟಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ಅಷ್ಟೇನು ತೊಂದರೆ ಉಂಟಾಗದಿದ್ದು ಬೇಸಿಗೆಯ ಬಿಸಿ 1 ತಿಂಗಳು ತಟ್ಟಲಿದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮೋ ನಗರ ಸೃಷ್ಟಿಸಿ ಪ್ರಧಾನಿ ಮೋದಿಯವರ ಹೆಸರಲ್ಲಿ ವಸತಿರಹಿತ ಸಾವಿರಾರು ಬಡವರಿಗೆ ಸೂರು ಕಲ್ಪಿಸಿದಲ್ಲದೇ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಶಾಲೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಿಜವಾದ ಬಡವರಬಂಧು ಎನಿಸಿಕೊಂಡಿರುವ ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದು ಬಿಜೆಪಿ ನಾಯಕ, ವಿಡಿಎ ಸದಸ್ಯ ವಿಕ್ರಮ ಗಾಯಕವಾಡ ಆಕ್ರೋಶ ವ್ಯಕ್ತಪಡಿದ್ದಾರೆ.ಹಿಂದುತ್ವದ ಅದಮ್ಯ ಶಕ್ತಿಯಾಗಿರುವ ಶಾಸಕ ಯತ್ನಾಳ ಅವರು ಕಳಂಕರಹಿತ ಪಕ್ಷನಿಷ್ಠ ನಾಯಕರು. ಇಡಿ ದೇಶದಲ್ಲೇ ವಕ್ಫ್ ವಿರುದ್ಧ ಮೊದಲು ಧ್ವನಿ ಎತ್ತಿ ಹಿಂದೂಗಳ ಮಠಮಂದಿರ, ರೈತರ ಆಸ್ತಿ, ಅಸ್ತಿತ್ವ ಉಳಿಸುವಲ್ಲಿ ಮುಂಚೂಣಿಯಾಗಿ ನಿಂತವರು. ನೇರನುಡಿ, ಸ್ವಚ್ಚ, ಜನಪರ ಸೇವೆ ಸಲ್ಲಿಸುತ್ತಾ ಪ್ರತಿಯೊಬ್ಬ ಹಿಂದೂ ಮನೆ ಮನದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ ಇಂತಹ ಧೀಮಂತ ನಾಯಕನ ಉಚ್ಚಾಟನೆಯನ್ನು ಬಿಜೆಪಿ ಕೇಂದ್ರ ವರಿಷ್ಠರು ಕೂಡಲೇ ಹಿಂಪಡೆದು…
ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳು | ಎಂಎಲ್ಸಿ ಸುನೀಲಗೌಡ ಪಾಟೀಲ ವಿತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಕಾರದ ನಾನಾ ಪಿಂಚಣಿ ಯೋಜನೆಗಳಡಿ ಆಯ್ಕೆಯಾದ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಂಜೂರಾತಿ ಆದೇಶ ಪತ್ರ ವಿತರಿಸಿದರು.ಶುಕ್ರವಾರ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ 198 ಮತ್ತು ಬಬಲೇಶ್ವರ ತಾಲೂಕಿನ 127 ಸೇರಿದಂತೆ ಒಟ್ಟು 325 ಫಲಾನುಭವಿಗಳಿಗೆ ಶಾಸಕರು ಆದೇಶ ಪತ್ರ ವಿತರಿಸಿದರು.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ ವೇತನ, ನಿರ್ಗತಿಕ ವಿಧವಾ ವೇತನ, ಅಂಗವೀಕಲರ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆ ಮತ್ತು ಮೈತ್ರಿ ಹಾಗೂ ಮನಸ್ವೀನಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ 29 ಗ್ರಾಮ ಪಂಚಾಯತಿ ಮತ್ತು ಎರಡು ಪಟ್ಟಣ ಪಂಚಾಯತಿಗಳ ಒಟ್ಟು 325 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಚಿವ ಎಂ. ಬಿ. ಪಾಟೀಲ ಅವರ…
ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಕಾಮಗಾರಿಗಳು | ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಮುಳವಾಡ ಏತನೀರಾವರಿ ಯೋಜನೆ ಹಂತ-3 ರಲ್ಲಿ ಬರುವ ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಲಿಫ್ಟ್ ಕಾಮಗಾರಿಗಳಿಗೆ 127 ಕೋಟಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಗಳಿಗೆ 108 ಕೋಟಿ ಮೊತ್ತದ ಕಾಮಗಾರಿಗಳಿಗೆ ಒಟ್ಟು 235 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40 ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ 127 ಕೋಟಿ ಹಾಗೂ ವಿತರಣಾ ಸಂಖ್ಯೆ…
ಲೇಖನ- ಪ್ರೊ.ಬಸವರಾಜ ನೀಲವಾಣಿಉಪನ್ಯಾಸಕರುಚಡಚಣ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಬ್ಬಗಳಲ್ಲಿ ಶ್ರೇಷ್ಠವಾದ ಹಬ್ಬ ಯುಗಾದಿ ಹಬ್ಬ, ಯುಗಾದಿ ಅಂದರೆ ಹೊಸ ಯುಗ ಅಥವಾ ಹೊಸ ವರ್ಷ ಆರಂಭ ಎಂದು ಹಿಂದುಗಳು ನಂಬಿರುವ ಒಂದು ಶುಭ ದಿನ.ಈ ಹಬ್ಬವು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುವ ದಿನ. ಹಳ್ಳಿಯ ಜನರಲ್ಲಿ ಯುಗಾದಿ ಹಬ್ಬ ಸುಖ ಸಂತೋಷದ ಹಬ್ಬವಾಗಿದೆ, ಯುಗಾದಿ ಹಬ್ಬದಂದು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಈ ಹಬ್ಬದ ದಿನದಂದು ಗ್ರಾಮೀಣ ಪದೇಶದಲ್ಲಿ ಮನೆಯ ಮಂದಿ ಕೂಡಿಕೊಂಡು ಮುಂಜಾನೆ ಬೇಗನೆದ್ದು, ಎಣ್ಣೆಯಿಂದ ಮತ್ತು ಬೇವಿನ ಎಲೆಯಿಂದ ಸ್ನಾನ ಮಾಡುತ್ತಾರೆ. ಎಣ್ಣೆ ಸ್ನಾನದ ಉದ್ದೇಶ ವಸಂತ ಋತುವಿನ ಮುಂಬರುವ ಬಿಸಲಿಗೆ ದೇಹವನ್ನು ಸಿದ್ದಪಡಿಸುವದು. ರೋಗವನ್ನು ಹೋಗಲಾಡಿಸುವದು.ಮನೆಯ ಮುಂದೆ ಮತ್ತು ದೇವರ ಮುಂದೆ ಮಾವಿನ ಎಲೆಯ ತಳಿರು ತೋರನವನ್ನು ಕಟ್ಟುತ್ತಾರೆ. ಮಾವಿನ ತೋರಣಗಳು ತಂಪಾದ ವಾತಾವರಣವನ್ನು ಕೊಡುತ್ತದೆ ಮತ್ತು ಬಿಸಿಲಿನಿಂದ ಶಾಂತಗೊಳಿಸುತ್ತದೆ ಎಂದು ಹಳ್ಳಿಯ ಜನರು ನಂಬಿರುವರು.ಯುಗಾದಿಯ ದಿನ ಹಳ್ಳಿಯಲ್ಲಿ ಬೇವು ಬೆಲ್ಲ ಮಿಶ್ರಣ…
ವಿಜಯಪುರ ಜಿಲ್ಲೆಯ ಬಳವಾಟ ಗ್ರಾಮದ ಹೈದಗೆ ಸೇನಾ ಅಧಿಕಾರಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಳವಾಟ ಗ್ರಾಮದ ಶಿವಾನಂದ ಬಸವಂತ್ರಾಯಗೌಡ ಬಿರಾದಾರ ಅವರು ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತಿ ಹೊಂದಿದ ಸಂಭ್ರಮ ವನ್ನು ಸೇನಾ ಅಧಿಕಾರಿಗಳೆಲ್ಲ ಸೇರಿ ಅಭಿನಂದನಾ ಸಮಾರಂಭ ಏರ್ಪಡಿಸಿ ಅದ್ಧೂರಿ ಮತ್ತು ಅರ್ಥಪೂರ್ಣ ಬೀಳ್ಕೊಡುಗೆಯನ್ನು ನೀಡಿದರು.ತಮಿಳುನಾಡಿನ ಬಾರ್ಡರದಲ್ಲಿರುವ ಮದ್ರಾಸ್ ರೆಜಿಮೆಂಟ್ ನ ವೆಲ್ಲಿಂಗ್ಟನ್ನ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳು ಇವರ ಕಾರ್ಯವೈಖರಿಯನ್ನು ಕೊಂಡಾಡಿ, ನಾವಿಂದು ಒಬ್ಬ ಹೃದಯವಂತ ಅಧಿಕಾರಿಯ ಸೇವೆನ್ನು ಸ್ಮರಿಸಿ ಬೀಳ್ಕೊಡುವುದು ದುಃಖದ ವಿಷಯವಾದರೂ ನಿವೃತ್ತಿ ಅನಿವಾರ್ಯ. ಶ್ರೀಯುತರು ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. ಆದರೆ ನಮ್ಮ ಹೃದಯದಿಂದ ಶ್ರೀಯುತರು ಯಾವಾಗಲೂ ನಿವೃತ್ತಿ ಯಾಗಲಾರರು. ಇವರ ಸೇನಾ ಸೇವೆಯ ಪ್ರತಿಕ್ಷಣಗಳು ನಮಗೆ ದಾರಿ ದೀಪವಾಗಿವೆ ಎಂದು ಶಿವಾನಂದ ಬಿರಾದಾರ್ ದಂಪತಿಗಳನ್ನು ಹರಿಸಿದರು.ಈ ಸಂದರ್ಭದಲ್ಲಿ ಕ್ಯಾಪ್ಟನ್ ಶ್ರೀನಿವಾಸ, ಶ್ರೀಮತಿ ಮಂಗಲಾ ಶ್ರೀನಿವಾಸ, ಕರ್ನಲ್ ಸಾಜು, ಕರ್ನಲ್ ಪ್ರದೀಪ್, ವಿರ್ಗಿಸ್, ಲೆಫ್ಟಿನೆಂಟ…
