Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೂ.235 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣ
(ರಾಜ್ಯ ) ಜಿಲ್ಲೆ

ರೂ.235 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಕಾಮಗಾರಿಗಳು | ಸಚಿವ ಎಂ.ಬಿ.ಪಾಟೀಲ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕೃಷ್ಣಾ ಮೇಲ್ದಂಡೆ ಮುಳವಾಡ ಏತನೀರಾವರಿ ಯೋಜನೆ ಹಂತ-3 ರಲ್ಲಿ ಬರುವ ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಲಿಫ್ಟ್ ಕಾಮಗಾರಿಗಳಿಗೆ 127 ಕೋಟಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಗಳಿಗೆ 108 ಕೋಟಿ ಮೊತ್ತದ ಕಾಮಗಾರಿಗಳಿಗೆ ಒಟ್ಟು 235 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40 ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ 127 ಕೋಟಿ ಹಾಗೂ ವಿತರಣಾ ಸಂಖ್ಯೆ 15 ಮತ್ತು ಲ್ಯಾಟರಲ್ ಒಳಗೊಂಡ 13272 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಪ್ಯಾಕೇಜ್ ಕಾಮಗಾರಿ ಕೈಗೆತ್ತಿಕೊಳ್ಳಲು 108 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳನ್ನು ಚಾಲನೆ ನೀಡಲಾಗುವುದು. ಈ ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ ಬಾಕಿ ಉಳಿದಿರುವ ಒಟ್ಟು 26 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ.
ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಮೂಲಕ ಬಬಲೇಶ್ವರ ಹಾಗೂ ಸುತ್ತಲಿನ ಪ್ರದೇಶಕ್ಕೆ ಮಲಘಾಣ ಪಶ್ಚಿಮ ಕಾಲುವೆ ಹಾಗೂ ಬಬಲೇಶ್ವರ ಶಾಖಾ ಕಾಲುವೆಗಳ ಮೂಲಕ ಈಗಾಗಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ನಿಡೋಣಿ, ನಾಗರಾಳ, ತಿಗಣಿಬಿದರಿ ಸುತ್ತಲಿನ ಎತ್ತರದ ಪ್ರದೇಶ ಹಾಗೂ ಕಾಖಂಡಕಿ, ಶೇಗುಣಶಿ, ಸಂಗಾಪುರ ಗ್ರಾಮದ ಎತ್ತರದ ಸ್ವಲ್ಪ ಪ್ರದೇಶಗಳು ಈ ಕಾಲುವೆ ನೀರಾವರಿ ಸೌಕರ್ಯದಿಂದ ವಂಚಿತವಾಗಿದ್ದವು. ಇವುಗಳಿಗೂ ನೀರಾವರಿ ಸೌಕರ್ಯ ಕಲ್ಪಿಸುವ 5ಎ ಲಿಫ್ಟ್ ನಿಂದ ನಿಡೋಣಿ ಸುತ್ತಲಿನ 11,300 ಎಕರೆ ಪ್ರದೇಶಕ್ಕೆ ಹಾಗೂ 5ಬಿ ಲಿಫ್ಟ್ ಮೂಲಕ ಶೇಗುಣಶಿ ಸುತ್ತಲಿನ 1,355 ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗುವುದು.
ಮುಳವಾಡದ ಹತ್ತಿರ 4ಎ ಲಿಫ್ಟ್ ನಿಂದ ಆರಂಭವಾಗುವ ಬಬಲೇಶ್ವರ ಶಾಖಾ ಕಾಲುವೆಯು 40ಕಿ.ಮೀ* ಉದ್ದವಿದ್ದು, 4.4 ಟಿ.ಎಂ.ಸಿ ನೀರನ್ನು ಬಳಸಿ, ಬಬಲೇಶ್ವರ ತಾಲೂಕಿನ 52500 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆಯಾಗಿರುತ್ತದೆ. ಇದರಡಿ ಒಟ್ಟು 15 ವಿತರಣಾ ಕಾಲುವೆಗಳ ಪೈಕಿ 14 ವಿತರಣೆ ಜಾಲದ ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳು ವಿವಿಧ ಹಂತದಲ್ಲಿವೆ. ಉಳಿದ 15ನೇ ಹಾಗೂ ಕೊನೆಯ ವಿತರಣಾ ಕಾಲುವೆ ಕಾಮಗಾರಿಯಾಗಿದ್ದು, ಇದನ್ನು 108 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊತ್ತಿಕೊಳ್ಳಲು ಅನುದಾನ ದೊರೆತಿದ್ದು, ಬಬಲೇಶ್ವರ ತಾಲೂಕಿನ ಕೊನೆಯ ಹಳ್ಳಿಗಳಿಗೆ ವಿತರಣಾ ಕಾಲುವೆಯ ಮೂಲಕ 10272 ಎಕರೆ ಪ್ರದೇಶ ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ 3000 ಎಕರೆ ಪ್ರದೇಶ ಸೇರಿದಂತೆ ಒಟ್ಟು 13272 ಎಕರೆ ಪ್ರದೇಶವು ನೀರಾವರಿಗೆ ಒಳಪಡುತ್ತದೆ.
ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಯ ಈ ಮೂರು ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ 26 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026
    In ದಿನಪತ್ರಿಕೆ
  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿವೃತ್ತ ಸೈನಿಕ ಕಾಶೀರಾಯ ಸನ್ಮಾನ ಇಂದು
    In (ರಾಜ್ಯ ) ಜಿಲ್ಲೆ
  • ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು
    In (ರಾಜ್ಯ ) ಜಿಲ್ಲೆ
  • ಯಾಳವಾರ: ಪ್ರೌಢಶಾಲೆ ಸುವರ್ಣ ಮಹೋತ್ಸವ ಇಂದು
    In (ರಾಜ್ಯ ) ಜಿಲ್ಲೆ
  • ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ದಂತ ಮುರಿತ!
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆ ಪುರಸಭೆಯಿಂದ ಭೀಮನಭಾವಿ ಸ್ವಚ್ಚತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.