ವಿಜಯಪುರ ಜಿಲ್ಲೆಯ ಬಳವಾಟ ಗ್ರಾಮದ ಹೈದಗೆ ಸೇನಾ ಅಧಿಕಾರಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಳವಾಟ ಗ್ರಾಮದ ಶಿವಾನಂದ ಬಸವಂತ್ರಾಯಗೌಡ ಬಿರಾದಾರ ಅವರು ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತಿ ಹೊಂದಿದ ಸಂಭ್ರಮ ವನ್ನು ಸೇನಾ ಅಧಿಕಾರಿಗಳೆಲ್ಲ ಸೇರಿ ಅಭಿನಂದನಾ ಸಮಾರಂಭ ಏರ್ಪಡಿಸಿ ಅದ್ಧೂರಿ ಮತ್ತು ಅರ್ಥಪೂರ್ಣ ಬೀಳ್ಕೊಡುಗೆಯನ್ನು ನೀಡಿದರು.
ತಮಿಳುನಾಡಿನ ಬಾರ್ಡರದಲ್ಲಿರುವ ಮದ್ರಾಸ್ ರೆಜಿಮೆಂಟ್ ನ ವೆಲ್ಲಿಂಗ್ಟನ್ನ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳು ಇವರ ಕಾರ್ಯವೈಖರಿಯನ್ನು ಕೊಂಡಾಡಿ, ನಾವಿಂದು ಒಬ್ಬ ಹೃದಯವಂತ ಅಧಿಕಾರಿಯ ಸೇವೆನ್ನು ಸ್ಮರಿಸಿ ಬೀಳ್ಕೊಡುವುದು ದುಃಖದ ವಿಷಯವಾದರೂ ನಿವೃತ್ತಿ ಅನಿವಾರ್ಯ. ಶ್ರೀಯುತರು ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. ಆದರೆ ನಮ್ಮ ಹೃದಯದಿಂದ ಶ್ರೀಯುತರು ಯಾವಾಗಲೂ ನಿವೃತ್ತಿ ಯಾಗಲಾರರು. ಇವರ ಸೇನಾ ಸೇವೆಯ ಪ್ರತಿಕ್ಷಣಗಳು ನಮಗೆ ದಾರಿ ದೀಪವಾಗಿವೆ ಎಂದು ಶಿವಾನಂದ ಬಿರಾದಾರ್ ದಂಪತಿಗಳನ್ನು ಹರಿಸಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಶ್ರೀನಿವಾಸ, ಶ್ರೀಮತಿ ಮಂಗಲಾ ಶ್ರೀನಿವಾಸ, ಕರ್ನಲ್ ಸಾಜು, ಕರ್ನಲ್ ಪ್ರದೀಪ್, ವಿರ್ಗಿಸ್, ಲೆಫ್ಟಿನೆಂಟ ಕರ್ನಲ್ ಅಮಿತ್ ಶೆಟ್ಟಿ, ಕರ್ನಲ್ ಪರಾಕ್ರಮಕುಮಾರ, ಶ್ರೀಮತಿ ವಿರ್ಗಿಸ್, ಪುತ್ರಿ ಬೇನೆಟ್ ವಿರ್ಗಿಸ್, ಶ್ರೀಮತಿ ರಾಣಾ, ವಿಜಯಪುರದ ಪ್ರೀತಿ ಪತ್ತಾರ, ಮೋಹನ್ ಕಟ್ಟಿಮನಿ, ಹಾಗೂ ವೆಲ್ಲಿಂಗಟನ್ ನಗರದ ಮಿಲಿಟರಿ ಸ್ಟೇಷನ್ ನ ಸಮಸ್ತ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಇದ್ದು ಜೈಹಿಂದ್ ಘೋಷದೊಂದಿಗೆ ಅಭಿನಂದನೆ ಸಲ್ಲಿಸಿದ್ದು ಗೌರವದ ಘಳಿಗೆಯಾಗಿತ್ತು.

ಸೈನಿಕರಾಗಿ ಸೇರಿ ಸೇನಾ ಅಧಿಕಾರಿಯಾದರು
ವಿಜಯಪುರ ಜಿಲ್ಲೆಯ ಹೆಮ್ಮೆಯ ಹೈದ ಶಿವಾನಂದ ಬಿರಾದಾರ ಅವರು 1988ರಲ್ಲಿ ಭಾರತೀಯ ಬಹುಸೇನೆಗೆ ಸೈನಿಕ ಎಂದು ಭರ್ತಿಯಾಗಿ ಮುಂದೆ ಸೇನಾ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ ಅವರು ವಿಶೇಷ ಸೇನಾ ಪರೀಕ್ಷೆಯನ್ನು ಪಾಸ್ ಆಗಿ ಕೊನೆಗೂ ಸೇನಾ ಅಧಿಕಾರಿಯಾಗಿ ಭಾರತೀಯ ಸೇನೆಯಲ್ಲಿ 36 ವರ್ಷಗಳಿಗೂ ಅಧಿಕ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ.

