Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯೋಗ ಒಂದು ವಿಜ್ಞಾನವಾಗಿದ್ದು, ಇದರಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಫಿಜಿಯಾಲಜಿ ವಿಭಾಗದ ಸೆಂಟರ್ ಪಾರ್ ಯೋಗ ಆ್ಯಂಡ್ ಎಕ್ಸರ್ಸೈಜ್ ಸಾಯಿನ್ಸ್ ಸಂಯೋಜಕಿ ಮತ್ತು ಎಡಿಷನಲ್ ಪ್ರೊಫೆಸರ್ ಡಾ. ಜ್ಯೋತಿ ಖೊದ್ನಾಪುರ ಹೇಳಿದ್ದಾರೆ.ಶುಕ್ರವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ(ಜೆ.ಎಸ್.ಎಸ್) ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ತಿಂಗಳ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಒತ್ತಡದ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದು ಹೇಳಿದ ಅವರು, ಯೋಗ, ಅದರ ಮಹತ್ವ ಹಾಗೂ ಅದರಿಂದ ಸಿಗುವ ಲಾಭಗಳ ಕುರಿತು ಅವರು ವೈಜ್ಞಾನಿಕವಾಗಿ‌ ಮಾಹಿತಿ ನೀಡಿದರು.ಯೋಗ ಶಿಕ್ಷಕ ಮಡಿವಾಳಪ್ಪ ದೊಡಮನಿ ಮಾತನಾಡಿ, ಯೋಗ ಭಾರತೀಯರು ವಿಶ್ವಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದೆ. ಬಸವಣ್ಣನವರು ವಿಶ್ವಕ್ಕೆ ಶಿವಯೋಗವನ್ನು ಪರಿಚಯಿಸಿದ್ದಾರೆ. ಇದರಿಂದ ಯೋಗದ ಮೂಲಕವು ರೋಗ ನಿಯಂತ್ರಣ ಮತ್ತು ನಿವಾರಣೆ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಒಂದು ಪತ್ರಿಕೆಯ ಸಂಪಾದಕರಾಗಿ ಒತ್ತಡದ ಕಾರ್ಯ ಬಾಹುಳ್ಯವನ್ನು ಹೊಂದಿರುವ ಅವರ ಈ ನಡೆ ಆದರ್ಶ ಪ್ರಾಯವಾದದ್ದು.. ಹೊಸ ಲೇಖಕರಿಗೆ ದಾರಿ ತೋರುವಂಥದ್ದು.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಘನ ಸರ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಂದ ನಾಡಿನ ಸಾಧಕ ಪತ್ರಕರ್ತರಿಗೆ ಕೊಡಮಾಡುವ 2023 ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದ ಸುಶೀಲೇಂದ್ರ ನಾಯಕ್ ರವರೇ ಈ ಸಂಪಾದಕರು.ಪತ್ರಿಕಾರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರ ಮೊಮ್ಮಗನಾದ ಸುಶೀಲೇಂದ್ರ ನಾಯಕ ಅವರು ಪತ್ರಿಕೋದ್ಯಮವನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದರೆ ತಪ್ಪಿಲ್ಲ. 1961ರ ಸಪ್ಟಂಬರ್ 4ರಂದು ಜನಿಸಿದ ನಾಯಕ್ ಅವರು ಪ್ರಾಥಮಿಕ, ಪ್ರೌಢ ಮತ್ತು ಪಿಯು ವಿದ್ಯಾಭ್ಯಾಸವನ್ನು ವಿಜಯಪುರದಲ್ಲಿ ಪೂರೈಸಿ ಮುಂದೆ ವಾಣಿಜ್ಯ ಪದವಿಯನ್ನು ವಿಜಯಪುರದ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದಿಂದ ಪಡೆದರು.ಪದವಿಯನ್ನು ಪೂರೈಸುತ್ತಲೇ ಉದ್ಯೋಗಕ್ಕಾಗಿ ಅರಸದೆ ತಮ್ಮ ಮನೆತನದ ಮೂಲವೃತ್ತಿಯಾದ ಪತ್ರಿಕಾ ರಂಗಕ್ಕೆ ಕಾಲಿಟ್ಟರು. ಪತ್ರಿಕೋದ್ಯಮದ ವಾತಾವರಣದಲ್ಲಿಯೇ ಬೆಳೆದಿದ್ದ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಫ್ಲಾರೆನ್ಸ ನೈಟಿoಗೇಲ್ ಅವರು ಲೇಡಿ ವಿತ್ ದ ಲ್ಯಾಂಪ್ ಎಂದೇ ಪ್ರಖ್ಯಾತರಾಗಿದ್ದರು. ಇವರು 1820ರ ಮೇ 12ರಂದು ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಮ್ಮ 17ನೇ ವಯಸ್ಸಿನಲ್ಲಿ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡ ಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1854ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಸೇವೆ ಮಾಡಿದರು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದಿಗೂ ಇವರು ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲಾ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಇವರ ನೆನಪಿಗಾಗಿ ಲಂಡನ್ ನ ವಾಟರ್ ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.ತಮ್ಮ ಮನೆತನದ ವಿರೋಧದ ನಡುವೆಯೂ…

Read More

ಮುದ್ದೇಬಿಹಾಳದಲ್ಲಿ ಮೆಗಾ ಮಾರುಕಟ್ಟೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಬಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಮಾಜದಲ್ಲಿ ಸಮಾನತೆ ಬರಬೇಕಾದರೆ ಸರ್ವರೂ ಸಮನಾಗಿ ಬಾಳಬೇಕು. ರಾಜಕಾರಣಿಗಳು, ಮುಖಂಡರು ಸರ್ವರನ್ನು ಸಮನಾಗಿ ಕರೆದುಕೊಂಡು ಹೋಗಬೇಕು. ಎಲ್ಲರನ್ನೂ ಸಮಾನರಾಗಿ ಕರೆದುಕೊಂಡು ಹೋಗುವದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.ಪಟ್ಟಣದ ಮುಖ್ಯ ಬಜಾರನಲ್ಲಿ ನಿರ್ಮಿಸಲಾಗುತ್ತಿರುವ ಮೆಗಾ ಮಾರುಕಟ್ಟೆ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಾಸಕನಾದ ಮಾತ್ರಕ್ಕೆ ನನ್ನ ಆಕಾರ ಬದಲಾಗುವದಿಲ್ಲ. ಅತೀ ಸರಳವಾಗಿ ರಾಜಕೀಯ ಜೀವನವನ್ನು ಸಾಗಿಸಿದಲ್ಲಿ ದೊಡ್ಡವರಾಗಿ ಬೆಳೆಯಲು ಮತ್ತು ರಾಜಕೀಯ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ನಂಬಿದವನು ನಾನು. ಮತಕ್ಷೇತ್ರದ ಜನತೆಯ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತಲುಪಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಸಮಾಜದ ಕಟ್ಟ ಕಡೆಯ ಬಡ ವ್ಯಕ್ತಿಯೂ ಕೂಡ ತಲೆ ಎತ್ತಿ ಜೀವನ ನಡೆಸಲು ನೇರವಾಗಿ ಅವರಿಗೆ…

Read More

ಗ್ಯಾರಂಟಿಗೆ ಎಸ್‌ಸಿಪಿ/ಟಿಎಸ್‌ಪಿ ಹಣ ಬಳಕೆ | ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಟ್ಟ ರೂ.25,000 ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ | ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮೈಸೂರು: ಎಸ್‌ಸಿಪಿ/ಟಿಎಸ್‌ಪಿ ಉಪಯೋಜನೆಯಡಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಟ್ಟ 25,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.ಮೈಸೂರಿನ ಬಿಡೆಪಿ ಕಚೇರಿಯಲ್ಲಿ ಗುರುವಾರ ಎಸ್‌ಸಿ/ಎಸ್‌ಟಿ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಶೇ.24 ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.ನಮ್ಮ ಪಕ್ಷ ಗ್ಯಾರಂಟಿ ಯೋಜನೆಗಳ ವಿರುದ್ಧವಿಲ್ಲ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಅಗತ್ಯವಿರುವ 56,000 ಕೋಟಿಗಳಷ್ಟು ಹಣವನ್ನು ಪ್ರತ್ಯೇಕ ಮೀಸಲಿಡಬೇಕು ಮತ್ತು ಎಸ್‌ಸಿ/ಎಸ್‌ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಶೇ 24.8 ರಷ್ಟು ಹಣವನ್ನು ಬಳಸಬಾರದು ಎಂದು ಹೇಳಿದರು.ರಾಜ್ಯ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಪೂಜ್ಯ ಬಾಲಯೋಗಿನಿ ಸುವರ್ಣಾ ಮಾತಾಜೀ ಚಾರಿಟೇಬಲ್ ಟ್ರಸ್ಟ್ ಧನ್ನೂರ (ಭಾಲ್ಕಿ) ಇವರು ಸದ್ಗುರು ಗಣೇಶ್ವರ ಅವಧೂತರ ಪಲ್ಲಕ್ಕಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಕೊಡುಮಾಡುವ ಆದರ್ಶ ದಂಪತಿಗಳು ಪ್ರಶಸ್ತಿಗೆ ಮಹಾಗಾಂವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಪರಮೇಶ್ವರ ಪೆಂಚನಕರ ಹಾಗೂ ವಿಜಯಲಕ್ಷ್ಮಿ ಪರಮೇಶ್ವರ ಪೆಂಚನಕರ ಅವರಿಗೆ ಆದರ್ಶ ದಂಪತಿಗಳು ಪ್ರಶಸ್ತಿ ನೀಡಿ ಗೌರವಿಸಿದ ಪ್ರಯುಕ್ತ ಅಫಜಲಪುರದ ಸರ್ಕಾರಿ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.ಈ ಸಂದರ್ಭದಲ್ಲಿ ಡಾ.ಸಂಗಣ್ಣ ಸಿಂಗೆ ಆನೂರ, ಶಿವಾನಂದ ಚಿಂಚೋಳಿ, ಚಂದ್ರಕಾಂತ ನಾವಿ, ಗೌತಮ ಸಕ್ಕರಗಿ, ಚನ್ನಬಸು ದೊಡ್ಮನಿ, ಮಹಾಂತೇಶ ವಠಾರ ಇದ್ದರು.

Read More

ಜಕನೂರ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಬೃಹತ್ ಶಿವನಮೂತಿ೯ | 71ಅಡಿ ಎತ್ತರ | ರೂ.4 ಕೋಟಿ ವೆಚ್ಚ | 1 ಎಕರೆ ಪ್ರದೇಶದಲ್ಲಿ ಶಿವನ ಅವತಾರ ! ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಚಿಕ್ಕಪಡಸಲಗಿ: ಸಮೀಪದ ಕೃಷ್ಣಾನದಿ ತಟದಲ್ಲಿರುವ ಜಕನೂರ ಎಂಬ ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಆದಿಯೋಗಿ ಶಿವನ ಬೃಹತ್ ಮೂತಿ೯ ಈ ಭಾಗದ ಶಿವಭಕ್ತರ ಆಕರ್ಷಣೆ ಭಕ್ತಿರಸ ಭಾವದ ಕೇಂದ್ರ ಬಿಂದುವಾಗಿದೆ.ಕೃಷ್ಣಾ ತೀರದ ದಡದಲ್ಲಿ ಮೈದೇಳಿರುವ ಈ ಶಿವನಮೂತಿ೯ಯ ರೂಪಾಲಂಕಾರದ ಲಾವಣ್ಯ ಕಣ್ತುಂಬಿಸಿಕೊಳ್ಳಲು ಶಿವರಾತ್ರಿ ಹಬ್ಬದಂದು ಅಸಂಖ್ಯಾತ ಶಿವಭಕ್ತರು ಇತ್ತ ಲಗ್ಗೆಯಿರಿಸಿ ಭಕ್ತಿ ನಮನ ಪೂಜಾ ಸಲ್ಲಿಸಿದರು.ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಅಂಗಳದಲ್ಲಿ ತಲೆಯತ್ತಿರುವ ಬೃಹತ್ ಶಿವನಮೂತಿ೯ 71 ಅಡಿ ಎತ್ತರದಲ್ಲಿದೆ. ಸುಮಾರು ನಾಲ್ಕು ಕೋಟಿ ರೂ,ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಶಿವ ಪರಮಾತ್ಮನ ಮೂತಿ೯ ಒಂದು ಎಕರೆ ವಿಶಾಲ ಜಾಗದಲ್ಲಿ ಶಿವಮನಗಳ ಕಣ್ಮನ ಸೆಳೆಯುತ್ತಿದೆ.ಬಹು ಅತ್ಯಾಕರ್ಷಕವಾಗಿ ರಾರಾಜಿಸಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.ಶಿವರಾತ್ರಿ ಹಬ್ಬದಂದು ರಾತ್ರಿ ಕಲರಫೂಲ್ ಬಗೆಬಗೆಯ ಬಣ್ಣದ ಚಿತ್ತಾರದಲ್ಲಿ…

Read More

ತೆಲಂಗಾಣಕ್ಕೆ ಆಲಮಟ್ಟಿ ಜಲಾಶಯದಿಂದ ೧.೨೭ ಟಿ.ಎಂ.ಸಿ. ನೀರನ್ನು ಹರಿಬಿಟ್ಟ ರಾಜ್ಯ ಸರ್ಕಾರದ ನಡೆಗೆ ರೈತ ಸಂಘ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಆಣೆಕಟ್ಟಿಗೆ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದಿಂದ ೧.೨೭ ಟಿ.ಎಂ.ಸಿ. ನೀರನ್ನು ಹರಿಬಿಟ್ಟು ಅವಳಿ ಜಿಲ್ಲೆಯ ರೈತರ ಬದುಕನ್ನು ಹಾಳು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಶಂಖ ವಾದ್ಯ ಮೊಳಗಿಸಿದರು.ಶುಕ್ರವಾರದಂದು ವಿಜಯಪುರ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ರೈತ ವಿರೋಧಿ ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವರ ವಿರುದ್ಧ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅವರ ಪ್ರತಿಕೃತಿಗಳನ್ನು ದಹಿಸಿ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಅವಳಿ ಜಿಲ್ಲೆಯ ರೈತರ ಬದುಕನ್ನು ಕಿತ್ತುಕೊಂಡು…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ರತ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ಯ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಚಂದ್ರಶೇಖರಯ್ಯ ಹಿರೇಮಠ, ರಾಮಜಿ, ಅಜೀಂ ಪ್ರೇಮಜಿ ಪೌಂಡೇಶನ ಸುನೈನಾ ಮೇಡಂ, ಬಿ.ಎನ್.ತೇಲಿ, ಎಸ್.ಎಲ್.ಹೊನ್ನುಟಗಿ, ಮಾನಸಾ ಆರ್, ಕವಿತಾ ಗಾಯಕವಾಡ, ಸಿ.ಎಸ್.ಚಲವಾದಿ, ರವೀಂದ್ರ ಚಿಕ್ಕರೂಗಿ, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.

Read More

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಡಾ:ಅಂಬೇಡ್ಕರ್ ಓದು’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಕುರಿತ ವಿಶೇಷ ಉಪನ್ಯಾಸ ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿತು.ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರು ಉದ್ಘಾಟಿಸಿ ಅಂಬೇಡ್ಕರ್ ಅವರ ಬದುಕು, ಸಾಧನೆಗಳ ಕುರಿತು ಅವರು ಮಾತನಾಡಿದರು.ವಿಶೇಷ ಉಪನ್ಯಾಸ ನೀಡಿದ ಡಾ.ಮಾಧವ ಎಸ್.ಗುಡಿ ಅವರು, ಅಪಾರ ಪಾಂಡಿತ್ಯ ಹಾಗೂ ಬಹುಮುಖ ವ್ಯಕ್ತಿತ್ವ ಹೊಂದಿದ್ದ ಡಾ. ಅಂಬೇಡ್ಕರ್ ಅವರು, ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಏಳಿಗೆಗೆ ನಿರಂತರ ಹೋರಾಟ ಮಾಡಿ, ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕಿಸಲು ಶ್ರಮಿಸಿದರು ಎಂದು ಹೇಳಿದರು.ಶಾಲೆಯ ಪ್ರಾಂಶುಪಾಲರಾದ ಬಿ.ಎಸ್.ಬೆಳಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಗಳ ಕುರಿತು ಕಾಲೇಜ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಆಶು ಭಾಷಣ, ಕವನವಾಚನ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ…

Read More