ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೧೦ಕೆ.ವ್ಹಿ ಮಲಘಾಣ-ಮಟ್ಟಿಹಾಳ ಸ್ಟೇಶನ್ ಮಾರ್ಗದಲ್ಲಿ ಏಪ್ರಿಲ್ ೦೭ರ ಮಧ್ಯರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಎ ಟೈಪ್ ಟಾವರ್ (ಗೋಪುರ) ಬಿದ್ದಿರುವುದರಿಂದ, ಈ ಗೋಪುರದ ದುರಸ್ಥಿ ಕಾರ್ಯ ೩ ದಿನ ನಡೆಯಲಿದ್ದು, ಆದರಿಂದ ೧೧೦ಕೆ.ವ್ಹಿ ಮಟ್ಟಿಹಾಳ ಸ್ಟೇಶನದಿಂದ ಹೊರಹೋಗುವ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಹಾಗೂ ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಕೋಲ್ಹಾರ ಮುಖ್ಯ ಸ್ಥಾವರ ಹಾಗೂ ಮುಳವಾಡ ಮಧ್ಯಂತರ ಪಂಪಿಂಗ್ ಸ್ಟೇಶನ್‌ಗೆ ಸಂಬಂಧಿಸಿದ ೩೩ ಕೆ.ವ್ಹಿ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
ಪರ್ಯಾಯವಾಗಿ ಮುತ್ತಗಿ ಸ್ಟೇಶನ್‌ನ ೩೩ ಕೆ.ವ್ಹಿ ಲೈನನ್ನು ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ೩೩ ಕೆ.ವ್ಹಿ ಲೈನ್ ಗೆ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ನಗರಕ್ಕೆ ನೀರು ಸರಬರಾಜು ಮಾಡಲು ವಿದ್ಯುತ್ ಇಲಾಖೆಯಿಂದ ಅನುಕೂಲ ಕಲ್ಪಿಸಲಾಗುತ್ತಿದ್ದು, ವಿದ್ಯುತ್ ಏರಿಳಿತದಿಂದ ಕೋಲ್ಹಾರ ಶುದ್ಧ ಕುಡಿಯುವ ನೀರಿನ ಜಲ ಶುದ್ಧೀಕರಣ ಘಟಕದಿಂದ ನೀರು ಸರಬರಾಜು ಆಗುವ ನಗರದ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ಕೋರಿದ್ದಾರೆ.