ಪಿಯುಸಿ ಪರೀಕ್ಷೆ: ಕೊಲ್ಹಾರದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಸುಶ್ಮೀತಾ ಔರಸಂಗ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ರಕ್ಷಿತಾ ಕಾಖಂಡಕಿ ಪಡೆದುಕೊಂಡಿದ್ದಾರೆ.
ಕಾಲೇಜಿನ ಕಲಾವಿಭಾಗದಲ್ಲಿ ಪ್ರಥಮ ಸ್ಥಾನ ಸುಶ್ಮೀತಾ ಔರಸಂಗ 95.5, ದ್ವಿತೀಯ ಸ್ಥಾನ ಅಮೃತಾ ಗಾಣಿಗೇರ 94.83, ತೃತೀಯ ಸ್ಥಾನ ಸುಜಾತಾ ಬೆಳ್ಳುಬ್ಬಿ 92.83, ಮತ್ತು ಭಾಗ್ಯಾಶ್ರೀ ವಾಲಿಕಾರ 92.83, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ರಕ್ಷಿತಾ ಕಾಖಂಡಕಿ 95, ದ್ವಿತೀಯ ಸ್ಥಾನ ಸ್ವಾತಿ ಜಂಬಗಿ 94.16, ತೃತೀಯ ಸ್ಥಾನ ಅಶ್ವಿನಿ ಬಿಂಗಿ 92.83. ಪಡೆದಿದ್ದಾರೆ.
ಕನ್ನಡ ವಿಷಯದಲ್ಲಿ ಇಬ್ಬರು, ರಾಜ್ಯಶಸ್ತ್ರದಲ್ಲಿ ಒಬ್ಬ ಹಾಗೂ ಇತಿಹಾಸ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹರ್ಷವಾಗಿದೆ ಎಂದು ಅಧ್ಯಕ್ಷ ಬಿ.ಯು. ಗಿಡ್ಡಪ್ಪಗೋಳ, ಕಾರ್ಯದರ್ಶಿ ಎಸ್.ಬಿ. ಪತಂಗಿ, ನಿರ್ದೇಶಕರಾದ ಸಿ.ಎಸ್. ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ ನಾಗಪ್ಪ ಮೇಲಗಿರಿ, ಪ್ರಾಚಾರ್ಯ ಎ.ಡಿ. ಚೌವ್ಹಾಣ ತಿಳಿಸಿದ್ದಾರೆ.