Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ

ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ

ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೊದಲ ಪುಟ
(ರಾಜ್ಯ ) ಜಿಲ್ಲೆ

ಮೊದಲ ಪುಟ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತೊಗರಿ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ

ಉದಯರಶ್ಮಿ ದಿನಪತ್ರಿಕೆ

ಇಂಡಿ: ತಾಲ್ಲೂಕಿನಲ್ಲಿ ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಹಾಗೂ ಮಂಜಿನ ವಾತಾವರಣದಿಂದ ತೊಗರಿ ಬೆಳೆ ಸಂಪೂರ್ಣ ಕೈ ಕೊಟ್ಟಿದೆ. ಅದಲ್ಲದೇ ಈ ಬಾರಿ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದ್ದು, ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಆಗ್ರಹಿಸಿ ರಾಜ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ಕರವೇ ಪದಾಧಿಕಾರಿಗಳು ಮಾಡಿದರು.
ತಾಲ್ಲೂಕಿನ ತಾಂಬಾ ಗ್ರಾಮದ ಪ್ರಮುಖ ಹೃದಯಭಾಗದ ವೃತ್ ದಲ್ಲಿ ಹಲುಗೆ ಬಾರಿಸುತ್ತಾ, ಎಮ್ಮೆ ಮೆರವಣಿಗೆ ನಡೆಸಿ, ರಾಜ್ಯ ರಸ್ತೆ ತಡೆದು ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಉಪ ತಹಶಿಲ್ದಾರ ಆರ್ ಬಿ ಮೂಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಈ ಭಾಗದ ರೈತರು ಯಾವಾಗಲೂ ಅತೀವೃಷ್ಟಿ ಮತ್ತು ಅನಾವೃಷ್ಟಿಗೆ ಬಲಿಯಾಗುತ್ತಾರೆ. ಈ ಬಾರಿಯೂ ಇಂತಹ ದುರಂತದ ಘಟನೆ ರೈತರಿಗೆ ತಪ್ಪಿಲ್ಲ‌ ಹಾಗಾಗಿ ಈ ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಮತ್ತು ಜನ ಜಾನುವಾರುಗಳ ಹಿತದೃಷ್ಟಿಯಿಂದ ಗುತ್ತಿ ಬಸವಣ್ಣ ಕಾಲುವೆಗೆ ಕುಡಿಯಲು ನೀರು ಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ರಾಯ್ಗೊಂಡ ಪೂಜಾರಿ ಮಾತನಾಡಿ, ವಿಮಾ ಕಂಪನಿಯವರು ನಮ್ಮ ರೈತರ ಕಡೆಯಿಂದ ವಿಮಾ ಕಟ್ಟಿಸಿಕೊಂಡು ನಂತರ ಬೇರೆ ಬೇರೆ ಕಾರಣ ಹೇಳಿ, ರೈತರಿಗೆ ತೊಗರಿ ಇಳುವರಿ ಬರದಿದ್ದರೂ ಸರಿಯಾಗಿ ವಿಮಾ ಪರಿಹಾರ ನೀಡುತ್ತಿಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಮಾತನಾಡಿದ ಕರವೇ ವಕ್ತಾರ ಮಾಸಿಮ್ ವಾಲಿಕರ್ ಮಾತನಾಡಿ ಈ ನಮ್ಮ ಬೇಡಿಕೆಗಳನ್ನು ಕೂಡಲೇ ಸ್ಪಂದನೆ ಮಾಡಿ ಪರಿಹಾರ ವಿತರಸಬೇಕು ಇಲ್ಲದಿದ್ದರೆ, ಇಂಡಿ ದೇವರ- ಹಿಪ್ಪರಗಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಉಪಾಧ್ಯಕ್ಷ, ರಾಮಚಂದ್ರ ದೊಡ್ಡಮನಿ, ರವೀಂದ್ರ ನಡಗಡ್ಡಿ, ತಾ.ಪಂ. ಸದಸ್ಯ ಪ್ರಕಾಶ ಮುಂಜಿ, ರೈತ ಮುಖಂಡ ಬೀರಪ್ಪ ವಗ್ಗಿ, ವಿಠ್ಠಲ ಹೊರ್ತಿ, ಮಲ್ಲಿಕಾರ್ಜುನ ದಿವಟಗಿ, ಪ್ರಶಾಂತ ದೇಗಿನಾಳ, ರಾಕೇಶ ಬಾಗಲಕೋಟಿ, ಶರಣು ಕಲ್ಲೂರ್, ಶಂಕರ ಗಬಸಾವಳಗಿ, ರಮೇಶ ಚಾಂದಕವಟೆ, ಭೀಮಣ್ಣ ಕನ್ನೂರ ಹಾಗೂ ತಾಂಬಾ ಗ್ರಾಮದ ಸಮಸ್ತ ರೈತ ಬಾಂಧವರು ಸಾರ್ವಜನಿಕರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ

ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ

ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ

ಕುಡಿವ ನೀರಿಗಾಗಿ ಉಜನಿ ಜಲಾಶಯದಿಂದ ನೀರು ಬಿಡುಗಡೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿಗಾಗಿ ಉಜನಿ ಜಲಾಶಯದಿಂದ ನೀರು ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ವಂದೇ ಭಾರತ ರೈಲು ಸಂಚಾರ ಕುರಿತು ಅಪಪ್ರಚಾರ ಬೇಡ :ಸಂಸದರು
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಗೆ ೧೬ ಸಾವಿರ ಕ್ಯೂಸೆಕ್ ನೀರು
    In (ರಾಜ್ಯ ) ಜಿಲ್ಲೆ
  • ಸಂತೆಯ ಜನರಿಗೆ ಉಚಿತ ಕುಡಿಯುವ ನೀರಿನ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 07, 2026
    In ದಿನಪತ್ರಿಕೆ
  • ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ
    In (ರಾಜ್ಯ ) ಜಿಲ್ಲೆ
  • ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.