Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡಿಗರ ತಂಟೆಗೆ ಬಂದರೆ ಎಂಇಎಸ್ ಪುಂಡರನ್ನು ಬಿಡುವುದಿಲ್ಲ. ಬೆಳಗಾವಿ ನಮ್ಮದು. ಅವರ ಪುಂಡಾಟಿಕೆ ನಮ್ಮ ಮುಂದೆ ನಡೆಯಲ್ಲ. ಸಿಂದಗಿ-ಪುಣೆ ಬಸ್ ಹಾಗೂ ಕಲ್ಯಾಣ ಕರ್ನಾಟಕ ಬಸ್‌ಗಳ ಚಾಲಕರ ಮತ್ತ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವುದಲ್ಲದೆ ಬಸ್‌ಗಳಿಗೆ ಹಾನಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಣಧೀರ ಪಡೆಯ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಿಗಿರಿ ಆಗ್ರಹಿಸಿದ್ದಾರೆ.ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿ ಎಂಇಎಸ್ ಪುಂಡರು ಹಾಗೂ ಹಲ್ಲೆ ಮಾಡಿದವರ ವಿರುದ್ಧ ಧಿಕ್ಕಾರ ಕೂಗಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕನ್ನಡದ ಅಭಿಮಾನ, ನೈತಿಕತೆ ಇದ್ದರೆ ಬಸ್ ನಿರ್ವಾಹಕರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು. ಸಿಪಿಐ ಕಲ್ಯಾಣಕುಮಾರ ಶೆಟ್ಟಿ ಅವರನ್ನು ಕೂಡಲೇ ಅಮಾನತು ಮಾಡಬೇಕು. ಓಂದು ವೇಳೆ ಓಲೈಕೆ ರಾಜಕಾರಣ ಮಾಡಿದರೆ ಪ್ರಸ್ತುತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾಂಟೆಸ್ಸರಿ ಶಿಕ್ಷಣ ಚಟುವಟಿಕೆ ಆಧಾರಿತ ಮೂಲಕ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಪ್ರಶಾಂತ ಕಮತಗಿ ಹೇಳಿದರು.ಪಟ್ಟಣದ ಹೊರವಲಯದ ಭೀಮಾ ಮಾಂಟೆಸ್ಸರಿ ಶಾಲೆಯ ಯು.ಕೆ.ಜಿ ಮಕ್ಕಳ ಪದವಿ ಗ್ರಹಣ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಶಿಕ್ಷಣದ ವ್ಯವಸ್ಥೆಯಿಂದ ಮಗುವಿಗೆ ಅಕ್ಷರ ಜ್ಞಾನದ ಜೊತೆಗೆ ಆಟವಾಡುತ್ತಾ ವಿನೂತನ ಕಲಿಕೆಗೆ ಸಹಕರಿಸುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮಕ್ಕಳಿಂದ ನೃತ್ಯ, ಪಠ್ಯಧಾರಿತ ವಿವಿಧ ವಿನ್ಯಾಸಗಳ ಮೂಲಕ ಕಲಿಕೆಯ ವಿಧಾನ ಪ್ರದರ್ಶನ ಸೇರಿದಂತೆ ಅನೇಕ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೋಂಡಿದ್ದು, ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಶಾಹಿನ್ ಶೇಖ್, ಪಾಲಕರಾದ ಶಾಹೆದಾಬೇಗಂ, ಮುನಿರ್ ಅಹಮ್ಮದ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಪಾಲಕರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ನೆರವೇರಿತು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಾ.೨ರಂದು ಬೆಳಿಗ್ಗೆ ೯ಗಂಟೆಗೆ ಮಹಾಶಿವರಾತ್ರಿ ಪ್ರಯುಕ್ತ ಶಿವಸ್ಮೃತಿ ಕವಿಗೋಷ್ಠಿ ಜರುಗಲಿದೆ.ಸಮಾರಂಭದ ಸಾನಿಧ್ಯವನ್ನು ಬ್ರಹ್ಮಾಕುಮಾರಿ ಈಶ್ವರೀಯ ಸಂಚಾಲಕಿ ಪವಿತ್ರಾಜಿ ವಹಿಸಲಿದ್ದಾರೆ. ಕವಿಗೋಷ್ಠಿಯನ್ನು ವಿಜಯಪುರದ ಕವಯತ್ರಿ ಶ್ರೀದೇವಿ ಉತ್ಲಾಸರ ಉದ್ಘಾಟಸಲಿದ್ದಾರೆ. ಅಧ್ಯಕ್ಷತೆಯನ್ನು ಯಾದಗಿರಿಯ ಸಾಹಿತಿ ಶಿವಶರಣಪ್ಪ ಶಿರೂರ ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ಮಧ್ಯಾಹ್ನ ಉಪಹಾರ ಯೋಜನೆ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಇರಲಿದ್ದಾರೆ.ಕವಿಗೋಷ್ಠಿಯಲ್ಲಿ ಸುಮಾರು ೧೫ಕ್ಕೂ ಹೆಚ್ಚು ಸಾಹಿತಿಗಳು ಕವನ ವಾಚನ ಮಾಡಲಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಶಿಕ್ಷಣ ಎನ್ನುವದು ವಿದ್ಯಾರ್ಥಿಗಳಿಗೆ ಬಾಳಿನಲ್ಲಿ ಬೆಳಕು ತರುವಂತ ಸಾಧನವಾಗಿದೆ.ಆದರೆ ಅದು ಅವರ ಆಸಕ್ತಿಗನುಗುಣವಾಗಿ ಸಾಗಬೇಕೇ ವಿನಃ ಅವರ ಆಸಕ್ತಿಗೆ ವಿರುದ್ಧವಾಗಿ ಸಾಗಿದರೆ ಮಕ್ಕಳ ಬಾಳನ್ನು ಕತ್ತಲಾಗಿಸುವ ಸಾಧನಗಬಹುದೆಂದು ಸಾಹಿತಿ ಶಿಕ್ಷಕ ದಶರಥ ಕೋರಿ ತಿಳಿಸಿದರು.ಇಂಡಿ ಪಟ್ಟಣದ ಪ್ರತಿಷ್ಠಿತ ಎಕ್ಸ್ ಲೆಂಟ್ ಆಂಗ್ಲ ಮಾಧ್ಯಮ ಹಾಗೂ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ರಾಜ್ಯ ಸರಕಾರಿ ನೌಕರ ಸಂಘದ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಎಸ್ ಆರ್ ಪಾಟೀಲ ವಿಶೇಷ ಅಹ್ವಾನಿತರಾಗಿ ಮಾತನಾಡಿದರು. ಮಕ್ಕಳಲ್ಲಿರುವ ಅದ್ಭುತ ಶಕ್ತಿಯನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಣದ ಮೂಲಕ ಸಂಸ್ಕೃತಿಯ ಅರಿವು ಮೂಡುತ್ತದೆ. ಸಂಸ್ಕಾರದ ಕೊರತೆಯಿಂದ ಕ್ರೌರ್ಯ ಬೆಳೆಯುತ್ತದೆ. ಈಗ ಅಂಕ ಮತ್ತು ಅತ್ಯುನ್ನತ ಶ್ರೇಣಿ ಕಡೆಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಸದಾ ಜಾಗೃತ ಮನಸ್ಸಿನಲ್ಲಿಡುವ ಕಾರ್ಯ ನಡೆಯಬೇಕು. ಶಿಕ್ಷಣ ಮತ್ತು ಪರಿಸರ ದಿಂದ ಬದುಕುವ ಕಲೆಯ ಜಾಗೃತಿಯಾಗುತ್ತದೆ ಎಂದು ಹೇಳಿದರು.ಇನ್ನೂ ಮುಖ್ಯ ಅತಿಥಿಯಾಗಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಾಲೆಗಳಲ್ಲಿ ಜಾತಿ, ಮಥ, ಪಂಥ ಎನ್ನದೇ ಎಲ್ಲರೂ ಒಂದಾಗಿ ಖುಷಿಯಿಂದ ಮಾಡುವ ಉತ್ಸವಗಳು ಸಮಾಜವನ್ನು ಗಟ್ಟಿಗೊಳಿಸುತ್ತಿವೆ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಶಾಲೆಯ ವಾರ್ಷಿಕೋತ್ಸವ ಬಂದರೆ ಮಕ್ಕಳಿಗೆ ಪಾಲಕರಿಗೆ ಹಬ್ಬವಿದ್ದಂತೆ. ತಮ್ಮ ಮಕ್ಕಳ ಮನರಂಜನೆಯನ್ನು ನೋಡಿ ಪಾಲಕರು ಕಣ್ತುಂಬಿಕೊಂಡು ಆನಂದ ಪಡೆಯುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಶಾಲೆಗಳು ಆಗಾಗ ಏರ್ಪಡಿಸಿದಲ್ಲಿ ಮಕ್ಕಳಲ್ಲಿ ಲವಲವಿಕೆ ಹೆಚ್ಚುತ್ತದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕಾರಗಳನ್ನು ಕಲಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕಿದೆ. ಶಿಕ್ಷಣ ರಂಗ ಈಗ ಒಂದು ಲಾಭದಾಯಕ ವ್ಯವಹಾರ ಆಗಿದೆ. ತಮ್ಮ ಮಕ್ಕಳಿಗೆ ಉತ್ತಮ, ಶಿಸ್ತುಬದ್ಧ ಶಿಕ್ಷಣ ನೀಡಬೇಕು ಎನ್ನುವುದು ಎಲ್ಲ ಪಾಲಕರ ಕನಸು. ಆದರೆ ಇದೇ ಸಮಯದಲ್ಲಿ ಶಾಲೆಗಳಲ್ಲಿ ಮಾನವೀಯತೆ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ ಹೇಳಿದರು.ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ತಂದೆ, ತಾಯಿ, ಬಂಧುಗಳು ಕೊಟ್ಟ ಆಸ್ತಿ, ಒಡವೆ, ಭೂಮಿ ಶಾಶ್ವತವಾಗಿ ಇರುವುದಿಲ್ಲ. ಆದರೆ ನಾವು ಪಡೆದ ವಿದ್ಯೆ ನಮ್ಮ ದೇಹದಲ್ಲಿ ಉಸಿರು ಇರುವವರೆಗೆ ಇರುತ್ತದೆ. ನಮ್ಮ ಒಳ್ಳೆಯ ಜೀವನ ನೋಡಲು ನಮ್ಮ ಪಾಲಕರು ದೊಡ್ಡ ಕನಸು ಇಟ್ಟುಕೊಂಡು ನಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ ಎಂಬ ತಿಳುವಳಿಕೆ ನಮ್ಮಲ್ಲಿ ಬರಬೇಕು. ಪರಿಶಿಷ್ಟ ಜಾತಿ, ಜನಾಂಗದ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಉನ್ನತಮಟ್ಟದ ಅಭ್ಯಾಸಕ್ಕೆ ಸರ್ಕಾರ ಊಟ, ವಸತಿ ಸಹಿತ ಶಿಷ್ಯವೇತನ ನೀಡಿ ನಮಗೆ ಓದಲು, ಉನ್ನತ ವ್ಯಾಸಂಗ ಕಲಿತು ಪ್ರಗತಿ ಸಾಧಿಸಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದಲ್ಲಿ ಮಾ೨ ರಿಂದ ೨ಸಿಟಿ ಬಸ್‌ಗಳು ಸಂಚರಿಸಲಿವೆ. ತಾಲೂಕಿನ ಹಡಲಗೇರಿ ಗ್ರಾಮದಿಂದ ಬಸ್ ಪದ್ಮಾವತಿ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಜ್ಞಾನ ಭಾರತಿ ವಿದ್ಯಾ ಮಂದಿರ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಓಂ ಶಾಂತಿ ಮಾರ್ಗವಾಗಿ ಮಾರುತಿ ನಗರದ ಕೊನೆಯ ರಸ್ತೆಯವರೆಗೆ ಮತ್ತು ವಿಮುಖವಾಗಿ ಒಂದು ಬಸ್ ಹೀಗೆ ಪ್ರತಿದಿನ ಒಟ್ಟು ಎರಡು ಬಸ್ ಗಳು ೧೬ ಟ್ರಿಪ್‌ಗಳ ಮೂಲಕ ಈ ಬಸ್‌ಗಳು ಬೆಳಿಗ್ಗೆ ೭ಗಂಟೆಯಿಂದ ತಮ್ಮ ಸಂಚಾರವನ್ನು ಪ್ರಾರಂಭಿಸಲಿವೆ.೨೦೨೧ ರಲ್ಲಿ ಪಟ್ಟಣದಿಂದ ಸರ್ಕಾರಿ ಆಸ್ಪತ್ರೆಗೆ ಸೇರಿದಂತೆ ಹಲವೆಡೆ ತಿರುಗಾಡಲು ಬಡವರಿಗೆ ಕಷ್ಟವಾಗಿತ್ತು. ನಗರಾಭಿವೃದ್ಧಿ ಹೋರಾಟ ವೇದಿಕೆ ಸೇರಿದಂತೆ ಇತರ ಸಂಘಟನೆಗಳಿಂದ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ ವಿವಿಧ ಮಾರ್ಗಗಳನ್ನು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಲಾಗಿತ್ತು. ಆದರೆ ಬಸ್ ಪ್ರಾರಂಭವಾಗಿರಲಿಲ್ಲ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮುತುವರ್ಜಿ ವಹಿಸಿ ಸಿಟಿ ಬಸ್ ಪ್ರಾರಂಭಿಸಿದ್ದು ಬಸ್ ಪ್ರಾರಂಭಕ್ಕೆ ನಗರಾಭಿವೃದ್ಧಿ ಹೋರಾಟ ಯುವ ವೇದಿಕೆ,…
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿರುವುದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ತಿಕೋಟಾ ತಾಲೂಕಿನ ಹೊನವಾಡ ಮತ್ತು ಘೋಣಸಗಿಯಲ್ಲಿ ನಾನಾ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಮೊದಲಿಗೆ ಹೊನವಾಡದಲ್ಲಿ ಕೆ.ಎನ್.ಎನ್.ಎಲ್ ವತಿಯಿಂದ ರೂ. 1 ಕೋ. ವೆಚ್ಚದಲ್ಲಿ ಹೊನವಾಡ- ಕನಮಡಿ ರಸ್ತೆ, ರೂ. 1.40 ಕೋ. ವೆಚ್ಚದಲ್ಲಿ ಹೊನವಾಡ- ಬಿಜ್ಜರಗಿ ಹಾಗೂ ಪಿ.ಆರ್.ಡಿ ಇಲಾಖೆಯ ವತಿಂಯದ ರೂ. 80 ಲಕ್ಷ ವೆಚ್ಚದಲ್ಲಿ ಹೊನವಾಡ-ಬಾಬಾನಗರ ರಸ್ತೆ ದುರಸ್ಥಿ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಅವರು, ಬರದ ನಾಡಗಿದ್ದ ಹೊನವಾಡ ಭಾಗದಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ರೂ. 3600 ಕೋ. ವೆಚ್ಚದಲ್ಲಿ ಕೈಗೊಂಡ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಈ ಭಾಗದಲ್ಲಿ ರೈತರು ಕೋಟ್ಯಂತರ ರೂಪಾಯಿ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಒಂದು ಪತ್ರಿಕೆಯ ಸಂಪಾದಕರಾಗಿ ಒತ್ತಡದ ಕಾರ್ಯ ಬಾಹುಳ್ಯವನ್ನು ಹೊಂದಿರುವ ಅವರ ಈ ನಡೆ ಆದರ್ಶ ಪ್ರಾಯವಾದದ್ದು.. ಹೊಸ ಲೇಖಕರಿಗೆ ದಾರಿ ತೋರುವಂಥದ್ದು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಘನ ಸರ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಂದ ನಾಡಿನ ಸಾಧಕ ಪತ್ರಕರ್ತರಿಗೆ ಕೊಡಮಾಡುವ 2023 ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದ ಸುಶೀಲೇಂದ್ರ ನಾಯಕ್ ರವರೇ ಈ ಸಂಪಾದಕರು.ಪತ್ರಿಕಾರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರ ಮೊಮ್ಮಗನಾದ ಸುಶೀಲೇಂದ್ರ ನಾಯಕ ಅವರು ಪತ್ರಿಕೋದ್ಯಮವನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದರೆ ತಪ್ಪಿಲ್ಲ. 1961ರ ಸಪ್ಟಂಬರ್ 4ರಂದು ಜನಿಸಿದ ನಾಯಕ್ ಅವರು ಪ್ರಾಥಮಿಕ, ಪ್ರೌಢ ಮತ್ತು ಪಿಯು ವಿದ್ಯಾಭ್ಯಾಸವನ್ನು ವಿಜಯಪುರದಲ್ಲಿ ಪೂರೈಸಿ ಮುಂದೆ ವಾಣಿಜ್ಯ ಪದವಿಯನ್ನು ವಿಜಯಪುರದ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದಿಂದ ಪಡೆದರು.ಪದವಿಯನ್ನು ಪೂರೈಸುತ್ತಲೇ ಉದ್ಯೋಗಕ್ಕಾಗಿ ಅರಸದೆ ತಮ್ಮ ಮನೆತನದ ಮೂಲವೃತ್ತಿಯಾದ ಪತ್ರಿಕಾ ರಂಗಕ್ಕೆ ಕಾಲಿಟ್ಟರು.ಪತ್ರಿಕೋದ್ಯಮದ ವಾತಾವರಣದಲ್ಲಿಯೇ ಬೆಳೆದಿದ್ದ…
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕು ಕೇಂದ್ರಗಳಲ್ಲಿ ನಾನಾ ಸರಕಾರಿ ಕಚೇರಿಗಳನ್ನು ಪ್ರಾರಂಭಿಸಿ ಜನರಿಗೆ ಸ್ಥಳೀಯವಾಗಿ ದಾಖಲೆಗಳು ಲಭ್ಯವಾಗಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಹಣ ಮತ್ತು ಸಮಯ ಉಳಿತಾಯವಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಔಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ತಿಕೋಟಾದಲ್ಲಿ ಕಂದಾಯ ಇಲಾಖೆಯ ಭೂಮಾಪನ ಎ.ಡಿ.ಎಲ್.ಅರ್ ಕಚೇರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಬಬಲೇಶ್ವರ ಮತಕ್ಷೇತ್ರದಲ್ಲಿ ಎರಡೂ ತಾಲೂಕು ಕೇಂದ್ರಗಳಲ್ಲಿ ತಾಲೂಕು ಶಕ್ತಿ ಸೌಧ(ಮಿನಿ ವಿಧಾನಸೌದ) ನಿರ್ಮಿಸಲಾಗಿದೆ. ಈ ಮೂಲಕ ನಾನಾ ಸರಕಾರಿ ಕಚೇರಿಗಳನ್ನು ಒಂದೇ ಸೂರಿನಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳ ಜನರು ಪಹಣಿ, ಆಕಾರಬಂದ ಸೇರಿದಂತೆ ನಾನಾ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೇ, ಸಮಯ…
