Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ :ಬಿಇಓ ತಳವಾರ

ಕೃಷ್ಣ ಗಜಾನನ ಮಹಾಮಂಡಳದಿಂದ ಅನ್ನಪ್ರಸಾದ

ಬಸವ ಸಂಸ್ಕ್ರತಿ ಅಭಿಯಾನ ರಥಯಾತ್ರೆಗೆ ಮುಸ್ಲಿಂ ಬಾಂಧವರ ಗೌರವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮನುಷ್ಯನ ಎಲ್ಲ ಸಂಸ್ಕಾರಗಳಲ್ಲಿ ಮದುವೆ ಪ್ರಮುಖ ಘಟ್ಟ :ಬೆಳ್ಳುಬ್ಬಿ
(ರಾಜ್ಯ ) ಜಿಲ್ಲೆ

ಮನುಷ್ಯನ ಎಲ್ಲ ಸಂಸ್ಕಾರಗಳಲ್ಲಿ ಮದುವೆ ಪ್ರಮುಖ ಘಟ್ಟ :ಬೆಳ್ಳುಬ್ಬಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಪ್ರತಿಯೊಬ್ಬರ ಜೀವನದಲ್ಲಿ ಬರುವ ವಿವಿಧ ಸಂಸ್ಕಾರಗಳಲ್ಲಿ ಮದುವೆ ಎಂಬ ಸಂಸ್ಕಾರವು ಪ್ರಮುಖ ಘಟ್ಟವಾಗಿದೆ. ಮಠ-ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಅನೇಕ ಶ್ರೀಗಳ ಸಾನಿಧ್ಯದಲ್ಲಿ ಮದುವೆಯಾಗುವ ಸೌಭಾಗ್ಯ ಸಿಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಸಂಸ್ಥಾನ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೮೭ನೇ ಪುಣ್ಯಾರಾಧನೆಯ ಜಾತ್ರಾಮಹೋತ್ಸವದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆ, ಸಾಮೂಹಿಕ ವಿವಾಹ ಹಾಗೂ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ಬದುಕಿನಲ್ಲಿ ನಾಮಕರಣ, ಲಿಂಗಧಾರಣೆ, ಜಡೆ ತೆಗೆಯುವ ಕಾರ್ಯ, ಸೀಮಂತ ಕಾರ್ಯ, ಅಂತಿಮ ಕಾರ್ಯ ಸೇರಿದಂತೆ ವಿವಿಧ ಸಂಸ್ಕಾರಗಳು ನಿರಂತರವಾಗಿ ನಡೆಯುತ್ತವೆ. ಇದರಲ್ಲಿ ಮದುವೆ ಸಂಸ್ಕಾರ ಬಹುಪ್ರಮುಖವಾಗಿದೆ. ಸಂಸ್ಕಾರಗಳು ಹಿಂದು ಪರಂಪರೆಯಲ್ಲಿ ಶ್ರೇಷ್ಠವಾಗಿದೆ ಎಂದರು.
ಹಿಂದುಗಳಿಗೆ ಮಠ-ಮಾನ್ಯಗಳು ಆತ್ಮವಿದ್ದಂತೆ. ಮಠ-ಮಾನ್ಯಗಳಿಂದ ಜನರಿಗೆ ಆಧ್ಯಾತ್ಮಿಕ ಸಿಗುವ ಮೂಲಕ ಜೀವನಕ್ಕೆ ನೆಮ್ಮದಿ-ಸುಖ ಸಿಗುತ್ತದೆ. ಯುಗಾದಿ ಹಬ್ಬದ ನಂತರ ಎಲ್ಲ ಊರಿನಲ್ಲಿ ಜಾತ್ರೆ ನಡೆಯುತ್ತವೆ. ಜಾತ್ರೆಗಳು ಎಲ್ಲರ ಬದುಕಿನ ಸ್ತಂಭವಾಗಿವೆ. ಎಲ್ಲ ಜನರಿಗೆ ಆನಂದ ತರುತ್ತವೆ ಎಂದರು.
ಸಾನಿಧ್ಯ ವಹಿಸಿದ್ದ ಜಾಲಹಳ್ಳಿಯ ಬ್ರಹ್ಮನ್ಮಠದ ವಿದ್ಯಾಮಾನ ಶಿವಭಿನವ ಜಗರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಹತ್ಯಾಗ ಮಾಡುವ ಮುನ್ನ ಯಾವ ರೀತಿಯಾಗಿ ಬದುಕುಬೇಕೆಂಬವದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಧ್ಯಾತ್ಮಿಕ ಅಂಶಗಳನ್ನು ಅರಿತುಕೊಂಡು ನಡೆದರೆ ಜೀವನ ಪಾವನವಾಗುತ್ತದೆ. ಮಹಾತ್ಮರ ಚರಿತೆಯನ್ನು ನೋಡಿದಾಗ ಮಹಾತ್ಮರು ದೇಹತ್ಯಾಗ ಮಾಡಿದರೂ ಅವರ ಆತ್ಮ ಯಾವಾಗಲು ಪ್ರಕಾಶಿಸುತ್ತಿರುತ್ತದೆ. ಈ ಮೂಲಕ ಭಕ್ತರಿಗೆ ಅವರ ಶುಭಾಶೀರ್ವಾದ ಸದಾ ಸಿಗುತ್ತದೆ. ಇಲ್ಲಿನ ಶ್ರೀಮಠದ ಲಿಂ.ರುದ್ರಮುನಿ ಶಿವಾಚಾರ್ಯರು ದೇಹತ್ಯಾಗ ಮಾಡಿ ೮೭ ವರ್ಷವಾದರೂ ಸಹ ಅವರ ಆತ್ಮ ಇಂದಿಗೂ ಭಕ್ತರಿಗೆ ಆಶೀರ್ವಾದ ನೀಡುತ್ತಿದೆ ಎಂದರು.
ನೇತೃತ್ವ ವಹಿಸಿದ್ದ ಶ್ರೀಮಠದ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕ್ರತಿ, ಪರಂಪರೆ ಸನಾತನವಾಗಿದೆ. ಪ್ರತಿಯೊಬ್ಬರಿಗೆ ಸಂಸ್ಕಾರ ಬಹುಮುಖ್ಯವಾಗಿದೆ. ಧಾರ್ಮಿಕತೆಯಿಂದ ನಮಗೆ ಸಂಸ್ಕಾರ, ಧರ್ಮವಂತ-ನೀತಿವಂತರಾಗಲು ಪೂರಕವಾಗುತ್ತದೆ. ಇದರಿಂದಾಗಿ ಮನಸ್ಸು ಪರಿವರ್ತನೆಯಾಗಿ ಜೀವನ ಸುಂದರವಾಗುತ್ತದೆ. ಜೀವನದಲ್ಲಿ ಎಂದಿಗೂ ಬೇರೆಯವರ ಬಗ್ಗೆ ಮಾತನಾಡದೇ, ಕಾಲಹರಣ ಮಾಡದೇ ಮಹಾತ್ಮರ ಸಂದೇಶ ವಾಣಿ, ಪುಣ್ಯಕ್ಷೇತ್ರಗಳ ದರ್ಶನ ಮಾಡುವುದರಿಂದ ನಿಜವಾಗಿ ಸಂಸ್ಕಾರಯುತ ಜೀವನ ನಮ್ಮದಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮುಖಂಡ ರಮೇಶ ಸೂಳಿಭಾವಿ ಇತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಿಕೋಟಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ಕೊಡೆಕಲ್ಲಮಠದ ಈರಸಂಗಯ್ಯ ಸ್ವಾಮೀಜಿ, ಪ್ರವಚನಕಾರ ತಾಳಿಕೋಟಿಯ ಮಹಾಂತದೇವರು, ಮುಖಂಡರಾದ ಸುರೇಶ ಹಾರಿವಾಳ, ಪ್ರೇಮಕುಮಾರ ಮ್ಯಾಗೇರಿ ಇತರರು ಇದ್ದರು. ವೈ.ಕೆ.ಪತ್ತಾರ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಬಿ.ಬ್ಯಾಕೋಡ ಸ್ವಾಗತಿಸಿ,ನಿರೂಪಿಸಿದರು. ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿತ್ತು. ಇದೇ ಸಂದರ್ಭದಲ್ಲಿ ಜಾತ್ರೆಗೆ ಸಹಕಾರ ನೀಡಿದವರನ್ನು ವಿವಿಧ ಮಹನೀಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ :ಬಿಇಓ ತಳವಾರ

ಕೃಷ್ಣ ಗಜಾನನ ಮಹಾಮಂಡಳದಿಂದ ಅನ್ನಪ್ರಸಾದ

ಬಸವ ಸಂಸ್ಕ್ರತಿ ಅಭಿಯಾನ ರಥಯಾತ್ರೆಗೆ ಮುಸ್ಲಿಂ ಬಾಂಧವರ ಗೌರವ

ಬಿಬಿಎಂಪಿ ಐದು ಮಹಾನಗರ ಪಾಲಿಕೆಗಳಾಗಿ ವಿಂಗಡನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ :ಬಿಇಓ ತಳವಾರ
    In (ರಾಜ್ಯ ) ಜಿಲ್ಲೆ
  • ಕೃಷ್ಣ ಗಜಾನನ ಮಹಾಮಂಡಳದಿಂದ ಅನ್ನಪ್ರಸಾದ
    In (ರಾಜ್ಯ ) ಜಿಲ್ಲೆ
  • ಬಸವ ಸಂಸ್ಕ್ರತಿ ಅಭಿಯಾನ ರಥಯಾತ್ರೆಗೆ ಮುಸ್ಲಿಂ ಬಾಂಧವರ ಗೌರವ
    In (ರಾಜ್ಯ ) ಜಿಲ್ಲೆ
  • ಬಿಬಿಎಂಪಿ ಐದು ಮಹಾನಗರ ಪಾಲಿಕೆಗಳಾಗಿ ವಿಂಗಡನೆ
    In (ರಾಜ್ಯ ) ಜಿಲ್ಲೆ
  • ಸೆ.೪ ಕ್ಕೆ ಸಲಹಾ ಸಮಿತಿ ಸಭೆ
    In (ರಾಜ್ಯ ) ಜಿಲ್ಲೆ
  • ವಿವಿಧ ಯೋಜನೆಯಡಿ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಾಮನಿರ್ದೇಶಿತ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶೇ.೨೪.೧೦% ಹಾಗೂ ಶೇ.೭.೨೫% ಯೋಜನೆ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ತುರ್ತು ದುರಸ್ಥಿ ಕಾರ್ಯ: ನೀರು ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ನಾಡಿನ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.