ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಮ್ಮ ಸಂಸ್ಥೆಯ ವತಿಯಿಂದ ಹೋಳ್ಕರ್ ಅವಾರ್ಡ ಪರೀಕ್ಷೆಯನ್ನು ನಡೆಸುತ್ತಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಏ.೧೦ ರಂದು ಬೆಳಿಗ್ಗೆ ೧೧-೩೦ ಕ್ಕೆ ಪಟ್ಟಣದ ಅಭ್ಯುದಯ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ ಹೊಂದಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಪರೀಕ್ಷೆಯಲ್ಲಿ ಪಾಸಾದ ಮೊದಲ ೧೦ ವಿದ್ಯಾರ್ಥಿಗಳಿಗೆ ೨ ವರ್ಷಗಳ ಕಾಲ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುವದು ಮತ್ತು ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಅಂಕಗಳ ಮೇಲೆ ರಿಯಾಯತಿ ನೀಡಲಾಗುವದು. ಮತ್ತು ಈ ಪರೀಕ್ಷೆಯನ್ನು ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುವದು. ಸ್ಟೇಟ್, ಸಿಬಿಎಸ್‌ಇ ಮತ್ತು ಐಸಿಎಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಆಧಾರ ಕಾರ್ಡ, ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ ಕಡ್ಡಾಯವಾಗಿ ತರಬೇಕು. ಆಸಕ್ತ ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಿರ್ದೇಶಕ ಕಿರಣ ಮದರಿ, ಸಿಬ್ಬಂದಿಗಳಾದ ಬಿ.ಜಿ.ಬಿರಾದಾರ, ಚಂದ್ರು ಧನ್ನೂರ, ಬಸವರಾಜ ಬಿಜ್ಜೂರ, ಆರ್.ಎಸ್.ಜಡಗಿ, ವಿರೇಶ ಹೂಲಿಕೇರಿ ಸೇರಿದಂತೆ ಮತ್ತೀತರರು ಇದ್ದರು.