ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇವತೆಗಳಲ್ಲಿ ಶಕ್ತಿಶಾಲಿ ದೇವತೆ ಎಂದರೆ ಅದು ಶ್ರೀಕಾಳಿಕಾ ದೇವಿ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಕಾಳಿಕಾ ನಗರದಲ್ಲಿರುವ ಶ್ರಿ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಜಾತ್ರೆಯಿರುವುದು ಬೇಸಿಗೆಯ ಸಮಯದಲ್ಲಿ ಇಂತಹ ಸುಡು ಬಿಸಿಲನ್ನು ಲೆಕ್ಕಿಸದೇ ಪಟ್ಟಣದ ಸಮಸ್ತ ಕಾಳಿಕಾ ದೇವಿಯ ಭಕ್ತರು ಸೇರಿಕೊಂಡು ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸುದು ಬಹಳ ಸಂತೋಷದ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಂದಗಿ ಆಲಮೇಲ ಮುರುಝಾವದ ಮಠ ಈರಯ್ಯ ಮಹಾಸ್ವಾಮಿ, ಸೊಮನಾಥ ಹಂಚನಾಳ, ರವಿಗೌಡ ಬಿರಾದಾರ, ಕೆ.ಎಸ್.ಪತ್ತಾರ, ಲಕ್ಷಣ ಬಡಿಗೇರ, ಸಂಗು ಪತ್ತಾರ, ಚಿದಾಂದ ಆಚಾರಿ, ಬ್ರಹ್ಮಾನಂದ ಮುರುಝಾವದಮಠ, ಬಸವರಾಜ ಪತ್ತಾರ ಸೇರಿದಂತೆ ಇತರರು ಇದ್ದರು.