ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ನೀಡವ ಮೂಲಕ ಮತ ಬ್ಯಾಂಕ ರಾಜಕಾರಣ ಮಾಡುತ್ತಿದೆ ಎಂದು ವ್ಹಿಎಚ್‌ಪಿ ಪ್ರಾಂತ್ಯ ಪ್ರಮುಖ ಶೇಖರಗೌಡ ಹರನಾಳ ಹೇಳಿದರು.
ಸಿಂದಗಿ ವಿಶ್ವ ಹಿಂದು ಪರಿಷದ್ ವತಿಯಿಂದ ಕರ್ನಾಟಕ ಸರಕಾರವು ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ, ಕಾಂಗ್ರಸ್ ಸರಕಾರ ಮತ ಬ್ಯಾಂಕ ರಾಜಕಾರಣ ಮಾಡುಲು ಮುಂದಾಗಿದೆ. ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿಯಲ್ಲಿ ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯನ್ನುಂಟುಮಾಡುತ್ತದೆ ಎಂದರು.
ಈ ವೇಳೆ ತಾಲೂಕ ವ್ಹಿಎಚ್‌ಪಿ ತಾಲೂಕಾಧ್ಯಕ್ಷ ಡಾ.ಶರಣಗೌಡ ಬಿರಾದಾರ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇ.೪ರಷ್ಟು ಮೀಸಲಾತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಬಾರದೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜ ಬಿರಾದಾರ, ಭಜರಂಗದಳದ ಸಹ ಸಂಯೋಜಕ ರಮೇಶ ಬ್ಯಾಕೋಡ, ಗುರುಬಸಯ್ಯ ಕರ್ಪೂರಮಠ, ಶಂಕರಗೌಡ ಕೋಟೆಕಾನಿ, ಕುಮಾರಸ್ವಾಮಿ ಅಂತರಗಂಗಿ, ಪರಶುರಾಮ ಕೋಟರಗಸ್ತಿ, ನಿಂಗನಗೌಡ ಬಿರಾದಾರ, ಬಿ.ಎಂ.ರತ್ನಾಕರ, ಕೆ.ಎಸ್.ಹಿರೇಮಠ, ಎಸ್.ಬಿ.ಪಾಟೀಲ, ಶಿವರಾಜ ಗುತ್ತರಗಿ, ಕಾರ್ತಿಕ ಹೂಗಾರ, ಗಣೇಶ ದೇವರಮನಿ, ಪ್ರಕಾಶ ದೊಡಮನಿ ಸೇರಿದಂತೆ ಕಾರ್ಯಕರ್ತರು ಇದ್ದರು.