ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾ ಘಟಕ, ತಾಲೂಕು ಘಟಕದಿಂದ ಭಾನುವಾರ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಅದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸಾಯಿಟಿಯ ಅಧ್ಯಕ್ಷ ಹೊನ್ನಪ್ಪ ಗೊಳಸಂಗಿ, ಸೊಸಾಯಿಟಿಯ ನಿರ್ದೇಶಕರಾದ ಶಿವು ಮಡಿಕೇಶ್ವರ, ಮಲ್ಲಿಕಾರ್ಜುನ ರಾಜನಾಳ, ಶಿಕ್ಷಕರಾದ ಸಿದ್ದು ಬಾಗೇವಾಡಿ, ಎಸ್.ಬಿ.ಮುತ್ತಗಿ, ಬಸವರಾಜ ಚಿಂಚೋಳಿ, ಕೋಟ್ರೇಶ ಹೆಗ್ಡಾಳ, ಎಂ.ಬಿ.ತೋಟದ, ಎಂ.ವ್ಹಿ.ಗಬ್ಬೂರ, ಚಿದಾನಂದ ಹೂಗಾರ, ಜಿ.ಎಸ್.ಪಾಟೀಲ ಇತರರು ಇದ್ದರು.