Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅರ್ಜುಣಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ವನಜಾಕ್ಷಿ ಬಡಿಗೇರ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ. ವಿಶ್ವವಿದ್ಯಾಲಯದ ಮಾನ್ಯತಾ ಸಂಸ್ಥೆಯಾದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಕೈಗೊಂಡು ಅವರು ಮಂಡಿಸಿದ “ತಿಂಥಣಿ ಮೌನೇಶ್ವರರ ಕುರಿತ ಸಾಹಿತ್ಯ : ಸ್ವರೂಪ ಮತ್ತು ವಿಶ್ಲೇಷಣೆ” ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ. ಇವರಿಗೆ ಚಡಚಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ. ಎಸ್. ಮಾಗಣಗೇರಿ ಮಾರ್ಗದರ್ಶನ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವನಜಾಕ್ಷಿ ಬಡಿಗೇರ ಅವರಿಗೆ ಮಾನ್ಯತಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ, ಸಂಯೋಜಕರಾದ ಡಾ. ವಿ. ಡಿ. ಐಹೊಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೊಪ್ಪಳದಲ್ಲಿ ಮಾ.9 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ, ಕೆಯುಡಬ್ಲುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾನಿಪ ಸಂಘದ ವಿಜಯಪುರ ಜಿಲ್ಲಾ, ತಾಲೂಕು ಘಟಕಗಳ ಎಲ್ಲ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಮನವಿ ಮಾಡಿದರು.ಇಲ್ಲಿನ ಹೊಸ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಕಾರ್ಯಕಾರಿಣಿ ಸಭೆ, 11 ಗಂಟೆಗೆ ಸರ್ವ ಸದಸ್ಯರ ಸಾಮಾನ್ಯ ಸಭೆ, ಮದ್ಯಾಹ್ನ 2 ಗಂಟೆಗೆ ದತ್ತಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಮುಂಚಿತವಾಗಿ ಪಾಲ್ಗೊಳ್ಳಲು ತೆರಳುವ ಸದಸ್ಯರಿಗೆ ವಸತಿ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲಾ ಘಟಕದವರು ಮಾಡಿದ್ದಾರೆ. ಎಷ್ಟು ಜನ ಹೋಗುತ್ತೀರಿ ಎನ್ನುವ ಮಾಹಿತಿಯನ್ನು ಮುಂಚಿತವಾಗಿಯೇ ಜಿಲ್ಲಾ ಘಟಕಕ್ಕೆ ನೀಡಿದರೆ ನೋಂದಣಿಗೆ ಅನುಕೂಲ ಆಗುತ್ತದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕನ್ನಡ ಜಿಲ್ಲೆಯ ತುಂಕಾ ಗ್ರಾಮದ ಮೀನುಗಾರರ ಮೇಲೆ ನಡೆದ ದಾಳಿಯನ್ನು ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ ಅವರುತುಂಕಾ ಗ್ರಾಮದ ಜನರು ಹೊನ್ನಾವರ ಬಂದರು ಖಾಸಗಿ ಲಿಮಿಟೆಡ್ (HPPL) ಬಂದರು ನಿರ್ಮಾಣವನ್ನು 10 ವರ್ಷಗಳಿಂದ ವಿರೋಧಿಸುತ್ತಿದ್ದಾರೆ. ಡಿಸೆಂಬರ್ 2024 ರಲ್ಲಿ ಪರಿಸರ ಅನುಮತಿ ನೀಡಲಾಗಿದ್ದರೂ, ಸಾರ್ವಜನಿಕ ವಿಚಾರಣೆ ನಡೆಸದ ಕಾರಣ ಅದು ಸರಿಯಲ್ಲ. ಜಿಲ್ಲಾಡಳಿತ ಮತ್ತು ಬಂದರು ಅಧಿಕಾರಿಗಳು ನಡೆಸಿದ ಯೋಜನೆಯ ಮರು-ಸಮೀಕ್ಷೆಯೂ ಕಾನೂನುಬಾಹಿರವಾಗಿತ್ತು.ಫೆಬ್ರವರಿ 24 ರಂದು ತುಂಕಾ ಗ್ರಾಮದಲ್ಲಿ ಯಾವುದೇ ಸೂಚನೆ ಇಲ್ಲದೆ ಕರ್ಫ್ಯೂ ಹಾಕಲಾಯಿತು. ಮರುದಿನ ಪೊಲೀಸರು ಮತ್ತು ಬಂದರು ಅಧಿಕಾರಿಗಳು ಬಲವಂತವಾಗಿ ಭೂ ಸಮೀಕ್ಷೆ ನಡೆಸಿದರು. ಪೊಲೀಸರು ಮುಖವಾಡ ಧರಿಸಿ, ನಾಮಫಲಕಗಳಿಲ್ಲದೆ ಬಂದಿದ್ದರು. ಫೆಬ್ರವರಿ 25 ರಂದು, ಮನೆಗಳ ಮುಂದೆ ಬೇಲಿ ಕಂಬಗಳನ್ನು ಹಾಕಿದಾಗ ವಿರೋಧಿಸಿದ ಮಹಿಳೆಯರು ಸೇರಿದಂತೆ ಮೀನುಗಾರರ ಮೇಲೆ ಹಲ್ಲೆ ನಡೆಸಿ, 250 ಜನರನ್ನು ಬಂಧಿಸಲಾಯಿತು. 45 ಜನರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸುರಸಿಂಗಾರ(ರಿ) ವಿಜಯಪುರ ಇವರು ಫೆ.2 ರವಿವಾರ ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಂಜೆ 6-30 ಗಂಟೆಗೆ ದಿ.ಭೋಜಣ್ಣ ಬೀಳಗಿ ಅವರ ಸ್ಮರಣಾರ್ಥ, ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂ. ಕೈವಲ್ಯ ಕುಮಾರ್ ಗುರವ್ ಅವರ ಶಾಸ್ತ್ರೀಯ ಗಾಯನವನ್ನು ಏರ್ಪಡಿಸಲಾಗಿದೆ. ಇವರಿಗೆ ತಬಲಾದಲ್ಲಿ ಪ್ರಸಿದ್ಧ ತಬಲಾ ವಾದಕರಾದ ಶ್ರೀ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂ ಸಾಥ್ ನಲ್ಲಿ ಸತೀಶ್ ಭಟ್ ಹೆಗ್ಗಾರ್ ರವರು ಸಹ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಎಲ್ಲರಿಗೂ ಉಚಿತವಾಗಿದ್ದು ಸಂಗೀತ ಆಸಕ್ತಿಯುಳ್ಳುವರೆಲ್ಲರು ಆಗಮಿಸಬೇಕಾಗಿ ವಿನಂತಿ. ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಸಂಗಣ್ಣ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಅನಧಿಕೃತ ಸಂಘ ಸಂಸ್ಥೆಗಳು, ನಕಲಿ ಪತ್ರಕರ್ತರು ಹಾಗೂ ಯೂ-ಟ್ಯೂಬ್ ಚಾನಲ್ ನವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು‌ ಅಡ್ಡಿಪಡಿಸುತ್ತಿರುವವರನ್ನು ವಿರೋಧಿಸಿ ಜಿಲ್ಲಾ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳ‌ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಜಿಪಂ ಮುಖ್ಯಕಾರ್ಯನಿರ್ವಾಹ ಅಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ‌ ಹಾಗೂ ಹೆಚ್ಚುವರಿ ಎಸ್ಪಿ ಅವರಿಗೆ ಶನಿವಾರ ಮನವಿಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸೇವೆಯನ್ನು ಪಡೆಯುವುದಕ್ಕಾಗಿ ಆಸಕ್ತ ಏಜನ್ಸಿಯವರನ್ನು ಆಯ್ಕೆ ಮಾಡುವುದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-2000 ರನ್ವಯ ಟೆಂಡರ್ ಪ್ರಕ್ರಿಯೆ ಜುರುಗಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದರಂತೆ 2024-25 ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಕರೆಯಲಾಗಿದ್ದ ಇ-ಪ್ರೋಕ್ಯೂರಮೆಂಟ್ ಟೆಂಡರಗಳಲ್ಲಿ ಹಲವಾರು ಏಜನ್ಸಿಯವರು ಭಾಗವಹಿಸಿರುತ್ತಾರೆ. ಮೇ|| ಚಿಕ್ಕಲಕಿ ಎಂಟರ್‌ಪ್ರೈಜಸ್ ವಿಜಯಪುರ ಇವರು ಅಪಲೋಡ್…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ; ಮೋಟಾರ್ ಸೈಕಲ್‌ಗೆ ಕಾರೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಬಸವನಬಾಗೇವಾಡಿ ರಸ್ತೆಯಲ್ಲಿ ಜರುಗಿದೆ.ಪಟ್ಟಣದ ಬಸವನಬಾಗೇವಾಡಿ ರಸ್ತೆಯಲ್ಲಿನ ಸಾಲಕ್ಕಿಯವರ ಜಮೀನಿನ ಹತ್ತಿರ ಶುಕ್ರವಾರ ಸಂಜೆ ಈ ಘಟನೆ ಜರುಗಿದೆ.ಘಟನೆಯಲ್ಲಿ ಪಟ್ಟಣದ ಆರೀಪ್ ವಡ್ಡೋಡಗಿ(೩೫) ಹಾಗೂ ಮೈಬೂಬ್‌ಸಾಬ್ ಕರ್ಜಗಿ(೬೫) ಇವರು ಮೃತಪಟ್ಟಿದ್ದಾರೆ. ಇವರು ಮೋಟಾರ್ ಸೈಕಲ್(ಕೆಎ೨೮ ಇಕ್ಯೂ ೯೩೯೯) ಮೇಲೆ ಮುದ್ದೇಬಿಹಾಳ ಪಟ್ಟಣದಿಂದ ಹೂವಿನಹಿಪ್ಪರಗಿ ಮಾರ್ಗವಾಗಿ ದೇವರಹಿಪ್ಪರಗಿಗೆ ಬರುತ್ತಿದ್ದ ಸಂದರ್ಭದಲ್ಲಿ ಇವರಿಗೆ ದೇವರಹಿಪ್ಪರಗಿ ಕಡೆಯಿಂದ ಬಸವನ ಬಾಗೇವಾಡಿ ಕಡೆಗೆ ತೆರಳುತ್ತಿದ್ದ ಕಾರು ವೇಗವಾಗಿ ಬಂದು ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.ಅಪಘಾತದ ನಂತರ ಕಾರು ಚಾಲಕನು ನಿಲ್ಲಿಸದೇ ಹೋಗಿದ್ದು, ದೂರು ದಾಖಲಿಸಲಾಗಿದೆ. ಘಟನೆಯ ಸ್ಥಳಕ್ಕೆ ದೇವರಹಿಪ್ಪರಗಿ ಪಿಎಸ್‌ಐ ಬಿ.ಎ.ತಿಪರಡ್ಡಿ ಹಾಗೂ ಪೊಲೀಸ್‌ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದ ಆವರಣದಲ್ಲಿ ಬೇಸಿಗೆಯ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಅರವಟ್ಟಿಗಿಗೆ ಕಲ್ಯಾಣಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಚಾಲನೆ ನೀಡಿದರು.ಪಟ್ಟಣದ ಇಂಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಬೇಸಿಗೆಯ ಕಾರಣವಾಗಿ ಅರವಟ್ಟಿಗೆ ಆರಂಭಿಸಲಾಯಿತು.ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿ, ನಾನಾ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರಿಗೆ ಬೇಸಿಗೆಯಲ್ಲಿ ದಾಹ ಉಂಟಾಗದಿರಲೆಂದು ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ರಸ್ತೆಯಲ್ಲಿ ಮುಖ್ಯವಾಗಿ ತಹಶೀಲ್ದಾರ ಕಾರ್ಯಲಯ, ಹೆಸ್ಕಾಂ ಕಚೇರಿ ಹಾಗೂ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಸಾರ್ವಜನಿಕರು ಅಡ್ಡಾಡುವುದು ಸಾಮಾನ್ಯ. ಅವರ ಕೆಲಸಗಳಿಗೆ ಸಹಕಾರಿಯಾಗಿರಲೆಂದೂ ಈ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದೂ ಕೋರಿದರು.ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ನಿವೃತ್ತಶಿಕ್ಷಕ ಶಾಂತಗೌಡ ಬಿರಾದಾರ (ಯರನಾಳ), ಉಮಾಕಾಂತ ಸೊನ್ನದ, ಭೀಮರಾಯ ಶಾಬಾದಿ(ತೆಗನೂರ), ಪ್ರಭು ರಾಚಯ್ಯಗೋಳಮಠ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜ್ ಮತ್ತು ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿ, ಆಸನ ವ್ಯವಸ್ಥೆ, ವಿಶೇಷ ಅಗತ್ಯತೆವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಸೇರಿದಂತೆ ಪರೀಕ್ಷ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿಪರೀಕ್ಷಾ ಕೇಂದ್ರದ ಮೇಲೆ ನಿಗಾ ಇರಿಸಲು ಜಿಲ್ಲಾ ಪಂಚಾಯತಿಯ ಸಂಪನ್ಮೂಲ ಕೇಂದ್ರದಲ್ಲಿ ಸ್ಥಾಪಿಸಲಾದ ಪರೀಕ್ಷಾ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ವ್ಯವಸ್ಥಿತ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಮಾಜಿ ಸೈನಿಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರ ಸ್ಥಾಪಿಸಲು ಡಿಜಿಆರ್ ವೆಬ್‌ಸೈಟ್ ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಮಾಜಿ ಸೈನಿಕರು ಡಿಜಿಆರ್ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೫೦೯೧೩ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದ ೬ ನೇ ತರಗತಿಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಅವಧಿಯನ್ನು ಮಾ೫ ರವರೆಗೆ ವಿಸ್ತರಿಸಲಾಗಿದೆ. ಆಸಕ್ತರು www.schooleducation.kar.nic.in orwww.vidyavahini.karnataka.gov.inವೆಬ್ ಸೈಟ್ ಬಳಸಿ ಅರ್ಜಿ ಸಲ್ಲಿಸಬಹುದು. ಹೆಚವ್ಚಿನ ಮಾಹಿತಿಗಾಗಿ ಮೊ: ೯೯೪೫೬೧೪೩೦೧ ಗೆ ಸಂಪರ್ಕಿಸಬಹುದು.

Read More