ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕರ್ನಾಟಕ ಸರಕಾರ, ಕಾಲೇಜು ಮತ್ತು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವತಿಯಿಂದ 2023-24 ನೇ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೋದನಾ ಕೊಠಡಿ ಮತ್ತು ಶೌಚಾಲಯ ಕಟ್ಟಡ ನಿರ್ಮಾಣದ ಗುತ್ತಿಗೆ ಮೊತ್ತ ರೂ.114.00 ಲಕ್ಷ ಕಾಮಗಾರಿ ಭೂಮಿ ಪೂಜಾ ನೇರವೇರಿಸಿದ ಶಾಸಕ ಜಗದೀಶ ಗುಡಗುಂಟಿ. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ಪೂಜಾ ನೇರವೇರಿಸಿ ಮಾತನಾಡಿದ ಅವರು ಗುತ್ತಿಗೆ ತೆಗೆದುಕೊಂಡವರು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸರಕಾರಕ್ಕೆ ಸತತ ಒತ್ತಡ, ಪ್ರಯತ್ನದಿಂದ ವಿಶೇಷ ಅನುದಾನ ಬಂದಿದೆ. ಸರ್ಕಾರ ಆದೇಶದ ಪ್ರಕಾರ ಏ.8 ರಂದು ಬೆಳಿಗ್ಗೆ 10 ಘಂಟೆಗೆ ಸಂಸ್ಕೃತಿಕ ಜಾನಪದ ಉತ್ಸವ ಜರುಗಲಿದೆ ಎಲ್ಲರೂ ಪಾಲ್ಗೊಳ್ಳಬೇಕು. 2024-25ನೇ ಸಾಲಿನ ಎರಡನೇ ಹಂತದ 2ಕೋಟಿ ಅನುದಾನ ಮಂಜುರಾಗಿದ್ದು ಅದರ ಕಾಮಗಾರಿ ಕುರಿತು ಕಾಲೇಜು ಅಭಿವೃದ್ಧಿ ಚಟುವಟಿಕೆಗೆ ಬಳಸಲಾಗುವುದು ಮತ್ತು ಇನ್ನಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 2024-25 ರ ಅನುದಾನ ಅಡಿಯಲ್ಲಿ ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೊಳವೆ ಭಾವಿ ಕೊರೆಯುವುದು ಹಾಗು ಮೋಟಾರ, ಪೈಪ್ ಲೈನ್ ಅಳವಡಿಸುವ ಅಂದಾಜು ಮೊತ್ತ ರೂ.3.50 ಲಕ್ಷ ಕಾಮಕಾರಿಯ ಪೂಜಾ ಸಮಾರಂಬ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷ ಅಜೇಯ ಕಡಪಟ್ಟಿ, ಗ್ರಾಮೀಣ ಮಂಡಲದ ಅಧ್ಯಕ್ಷ ಮಲ್ಲು ದಾನಗೌಡ, ಶಂಕರ್ ಕಾಳೆ, ಗಿರಮಲ್ಲಪ್ಪ ಹಂಚಿನಾಳ, ಸಂಜು ಕರಾಡಿ, ರಾಜು ತೆರಗಿಹಾಳ, ವಿನಾಯಕ ಪವಾರ, ಕುಶಾಲ ವಾಗ್ದರೆ, ಪ್ರದೀಪ ಮಹಾಲಿಂಗಪುರಮಠ, ಗುತ್ತಿಗೆದಾರರು ವಿಜಯಪುರ ವಿನಾಯಕ ದೊಡಮನಿ, ಕಾಮಗಾರಿ ನಿರ್ವಹಣೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇದ್ದರು.