ಶಾಸಕ ಜಗದೀಶ ಗುಡಗುಂಟಿ ಯಿಂದ ಜಿಲ್ಲಾಧಿಕಾರಿ ಜಾನಕಿ ಬೇಟಿ | ನೀರು ಬಿಡುವ ಭರವಸೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕ್ಷೇತ್ರದ ಕೃಷ್ಣಾ ನದಿಬತ್ತಿರುವ ಕಾರಣ ತೀರದಲ್ಲಿರುವ ಹಲವಾರು ಹಳ್ಳಿಗಳ ಜನರು ಹಾಗೂ ಜಾನುವಾರುಗಳು ಸಂಕಷ್ಟದಲ್ಲಿರುವುದನ್ನು ಕಂಡು ಶಾಸಕ ನಾಡೋಜ ಜಗದೀಶ ಗುಡಗುಂಟಿಯವರು ಹಾಗೂ ರೈತ ಮುಖಂಡರಾದ ಈಶ್ವರ ಆದೆಪ್ಪನವರ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಯಮನೂರ ಮೂಲಂಗಿ ಜಿಲ್ಲಾಧಿಕಾರಿ ಜಾನಕಿ ಅವರನ್ನು ಬೇಟಿಯಾಗಿ ಗಂಭೀರವಾಗಿರುವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.
ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತ ಶೆಟ್ಟೆನ್ನವರ ಅವರೊಂದಿಗೆ ಮಾತನಾಡುವದಾಗಿ ಹೇಳಿದರು.
ಶಾಸಕ ಜಗದೀಶ ಗುಡಗುಂಟಿಯವರು ಆಯುಕ್ತರೊಂದಿಗೆ ಮಾತನಾಡಿ, ಪರಿಸ್ಥಿತಿಯ ಬಗ್ಗೆ ತಿಳಿಹೇಳಿದಾಗ ಅವರು ಹಿಪ್ಪರಗಿ ಡ್ಯಾಮ್ ನಿಂದ ನದಿಗೆ ನೀರನ್ನು ಬಿಡುವುದಾಗಿ ತಿಳಿಸಿದರು.