ಲೇಖನ
– ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಗೈಡ್ ಎಂಬುದು ಕೇವಲ ಒಂದು ಗುಂಪಲ್ಲ.. ನಿರಂತರ ಕಲಿಕೆಯ ಸಾಹಸಮಯ ಮತ್ತು ಸೇವಾ ಮನೋಭಾವವನ್ನು ನಮ್ಮಲ್ಲಿ ತುಂಬುವ ಪಯಣ. ಸ್ಕೌಟ್ಸ್ ಇಲ್ಲವೇ ಗೈಡ್ ನಲ್ಲಿ ಮಕ್ಕಳನ್ನು ಭರ್ತಿ ಮಾಡಿಕೊಂಡಾಗ ಅವರಲ್ಲಿ ಕ್ರಿಯಾಶೀಲ ಚಟುವಟಿಕೆಗಳು, ಕ್ಯಾಂಪುಗಳಲ್ಲಿ ಪ್ರತಿದಿನ ಕವಾಯತುಗಳು ಬೇರೆಯವರಿಗೆ ಸಹಾಯ ಮಾಡುವುದು ಮತ್ತು ನಿಗದಿತ ದೈನಂದಿನ ಕಾರ್ಯಕ್ರಮಗಳು ನಮಗೆ ದೊರೆಯುತ್ತವೆ.
ಸ್ಕೌಟ್ಸ್ ಅಂಡ್ ಗೈಡ್ಸ್ ನ ಪಯಣದ ಆರಂಭದಲ್ಲಿ
ನಾವು ನಮಗೆ ಸಾಧ್ಯವಿದ್ದಷ್ಟು ನಿಯಮಗಳನ್ನು ಪಾಲಿಸಿ ಇತರರಿಗೆ ಸಹಾಯ ಮಾಡುವ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ.
ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಪ್ರಾರಂಭಿಕ ಹಂತವನ್ನು ಪ್ರವೇಶ ಎಂಬ ಹೆಸರಿನಲ್ಲಿ ಆರಂಭಿಸುತ್ತಾರೆ. ನೈಜ ಜೀವನದ ವಿವಿಧ ಘಟನೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಮತ್ತು ಹೊಸ ಹೊಸ ಕೌಶಲಗಳನ್ನು ಕಲಿಯುವ ರೀತಿಯಲ್ಲಿ ನಮಗೆ ತರಬೇತಿ ನೀಡಲಾಗುತ್ತದೆ.

ವಿವಿಧ ಹಂತಗಳ ಪೂರೈಸುವುದು
ತರಗತಿಗಳಲ್ಲಿ ಪಾಸಾಗಿ ಮುಂದೆ ಹೋಗುವಂತೆ ಗೈಡ ನಲ್ಲಿಯೂ ಕೂಡ ಹಲವಾರು ಹಂತಗಳನ್ನು ಪೂರೈಸಲೇಬೇಕಾಗುತ್ತದೆ.
1.ಪ್ರಥಮ ಸೋಪಾನ..
ಮೂಲಭೂತವಾದ ರಕ್ಷಣಾ ಕ್ರಮಗಳು, ಪ್ರಥಮ ಚಿಕಿತ್ಸೆ ಮತ್ತು ಸಮೂಹವಾಗಿ ಕಾರ್ಯನಿರ್ವಹಿಸುವುದು.
2.ದ್ವಿತೀಯ ಸೋಪಾನ..
ಹೆಚ್ಚು ಹೊರಾಂಗಣ ಕೌಶಲಗಳು, ಅಡುಗೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸುವುದು.
- ತೃತೀಯ ಸೋಪಾನ..
- ನಾಯಕತ್ವ ತರಬೇತಿ ಮತ್ತು ಸಮುದಾಯ ಸೇವೆ
- ಅಂತಿಮವಾಗಿ ರಾಜ್ಯ ಪುರಸ್ಕಾರ.. ರಾಜ್ಯಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ಅದ್ವಿತೀಯ ಕಾರ್ಯ ನಿರ್ವಹಿಸಿದವರಿಗೆ
- ಪ್ರೆಸಿಡೆಂಟ್ ಪುರಸ್ಕಾರ.. ಅತ್ಯುತ್ತಮ ವಿದ್ಯಾರ್ಥಿಗೆ ನೀಡಲ್ಪಡುವ ಅತಿ ದೊಡ್ಡ ಗೌರವ ಪುರಸ್ಕಾರ.
ಪ್ರತಿಯೊಂದು ಹಂತವು ನಮಗೆ ಸ್ವತಂತ್ರ್ಯವಾಗಿ ತೊಂದರೆಗಳನ್ನು ನಿವಾರಿಸಿಕೊಳ್ಳುವ ಮತ್ತು ಬೇರೆಯವರ ತೊಂದರೆಗಳನ್ನು ಕೂಡ ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ
ಕ್ಯಾಂಪ್ ಗಳು
ಜೀವನದ ನಿಜವಾದ ಅನುಭವಗಳು
ಸ್ಕೌಟ್ಸ್ ಅಂಡ್ ಗೈಡ್ಸ್ ಗಳು ಕೇವಲ ಪುಸ್ತಕದಲ್ಲಿ ಓದುವುದಲ್ಲ ಕ್ಯಾಂಪ್ ಗಳಲ್ಲಿ ತರಬೇತಿ ಪಡೆದು ಅನುಭವಿಸುವುದು.
ಕಾಡಿನಲ್ಲಿ ನಮ್ಮ ಟೆಂಟುಗಳನ್ನು ನಾವೇ ನಿರ್ಮಿಸಿಕೊಂಡು ಆಹಾರ ತಯಾರಿಸುವುದು.
ನಕಾಶೆ ಮತ್ತು ದಿಕ್ಸೂಚಿಯ ಸಹಾಯದಿಂದ ನಿಗದಿತ ಸ್ಥಳವನ್ನು ತಲುಪುವ ಕಲಿಕೆ.ನಿಗದಿತ ಎತ್ತರಗಳನ್ನು ಚಾರಣದ ಮೂಲಕ ಗುಂಪಿನಲ್ಲಿ ಸಾಗಿ ತಲುಪುವುದು. ಕೆಲ ಕ್ಯಾಂಪ್ಗಳು ಚಿಕ್ಕದಾಗಿರುತ್ತದೆ ಮತ್ತೆ ಕೆಲ ಕ್ಯಾಂಪ್ ಗಳು, ರಾಷ್ಟ್ರಮಟ್ಟದ ಜಾಂಬೂರಿಗಳು ಸಾವಿರಾರು ಜನ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ತರಬೇತಿ ಪಡೆಯುವಂತೆ ಆಯೋಜಿಸಲ್ಪಟ್ಟಿರುತ್ತವೆ
ಕ್ಯಾಂಪ್ ಉದ್ದೇಶ
ಬೇರೆಯವರಿಗೆ ಸಹಾಯ ಮಾಡುವುದು ನಿಜವಾದ ಉದ್ದೇಶ
ಸ್ಕೌಟ್ಸ್ ಅಂಡ್ ಗೈಡ್ ನಲ್ಲಿ ತರಬೇತಿಯಾದ ವಿದ್ಯಾರ್ಥಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ದುರಂತದ ಸಮಯದಲ್ಲಿ ಆಹಾರ, ನೀರು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಲು ಇವರು ತರಬೇತಿಗೊಂಡಿರುತ್ತಾರೆ.
ಒಂದೊಂದು ಕ್ಯಾಂಪಿನಲ್ಲಿ ಸಾಕಷ್ಟು ಜನರಿದ್ದರೂ ಕೂಡ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಇವರು ಉಳಿದವರಿಗೆ ಕೂಡ ಸ್ವಚ್ಛತೆಯ ಅರಿವನ್ನು ಮೂಡಿಸುತ್ತಾರೆ.
ಹಿರಿಯ ಅಧಿಕಾರಿಗಳಿಂದ ಆದೇಶ ಬರುವವರೆಗೆ ಕಾಯದೆ ಅವಶ್ಯಕತೆ ಇದ್ದಾಗ ಸಹಾಯ ಮಾಡುವುದು ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳ ಮುಖ್ಯ ಕರ್ತವ್ಯವಾಗಿರುತ್ತದೆ
ದೈಹಿಕವಾಗಿ ಬಲಿಷ್ಠನಾಗಿರುವುದು ಶಕ್ತಿಯ ಸಂಕೇತವಲ್ಲ ಬದಲಾಗಿ ದಯಾಳುತನ ಮತ್ತು ಜವಾಬ್ದಾರಿಯತವಾಗಿರುವುದು ಶಕ್ತಿ ಎಂಬುದು ಸ್ಕೌಟ್ಸ್ ಅಂಡ್ ಗೈಡ್ಸ್ ನ ಧ್ಯೇಯವಾಗಿದೆ
ಸ್ಕೌಟ್ಸ್ ಅಂಡ್ ಗೈಡ್ಸ್ ಮಾರ್ಗದರ್ಶಿಯು ವಿದ್ಯಾರ್ಥಿಗಳು ನಿಯಮಗಳನ್ನು ಪರಿಪಾಲಿಸುತ್ತಾ ತಮ್ಮ ಉನ್ನತ ವ್ಯಕ್ತಿತ್ವ ನಿರ್ಮಾಣದ ಬೃಹತ್ ಪ್ರಕ್ರಿಯೆ.
ಸೆಲ್ಯೂಟ್ ಹೊಡೆಯುವುದು ಗೌರವವನ್ನು ಸೂಚಿಸಿದರೆ
ಸಮವಸ್ತ್ರವು ಏಕತೆಯನ್ನು ಸೂಚಿಸುತ್ತದೆ.
ಸ್ಕೌಟ್ಸ್ ಅಂಡ್ ಗೈಡ್ನ ಕಾಯ್ದೆಗಳು ಗೌರವ ನಂಬಿಕೆ ಮತ್ತು ದಯೆಗಳನ್ನು ಚಿಕ್ಕಂದಿನಿಂದಲೇ ಮಕ್ಕಳು ಅಳವಡಿಸಿಕೊಳ್ಳಲು ಕಲಿಸುತ್ತದೆ
ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಶಿಸ್ತು ಮತ್ತು ಜವಾಬ್ದಾರಿಗಳು ಅವರು ಉನ್ನತ ವ್ಯಕ್ತಿತ್ವವನ್ನು ಹೊಂದಲು ಕಾರಣವಾಗುತ್ತದೆ.
ಸ್ಕೌಟ್ಸ್ ಅಂಡ್ ಗೈಡ್ ತರಬೇತಿಯು ಒಂದು ಜೀವಮಾನದ ಕಲಿಕೆಯಾಗಿದೆ
ಕಾಲಾಂತರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಪಡೆದವರು ಸ್ವತಂತ್ರ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಮತ್ತೆ ಕೆಲವರು ತರಬೇತಿಯನ್ನು ಮುಂದುವರಿಸಿ ರೋವರ್ಸ್ ಮತ್ತು ರೇಂಜರ್ಸ್ ಗಳಾಗುತ್ತಾರೆ… ಉಳಿದವರು ತಾವು ಕಲಿತ ಮೌಲ್ಯಗಳನ್ನು ಬದುಕಿನಲ್ಲಿ, ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಾರೆ
ಪ್ರಾರಂಭದಲ್ಲಿ ಒಂದು ಕ್ರಿಯೆಯ ಮೂಲಕ ಆರಂಭವಾಗುವ ಸ್ಕೌಟ್ಸ್ ಅಂಡ್ ಗೈಡ್ ಪಯಣವು ಜೀವನೋತ್ಸಾಹವನ್ನು ಹೆಚ್ಚಿಸುವ ಬದುಕಿನ ಕೊನೆಯವರೆಗೂ ನಮ್ಮೊಂದಿಗೆ ಇರುವ ಮುಗಿಯದ ಪಯಣವಾಗಿರುತ್ತದೆ.
