ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರಣಿ ಅಪಘಾತದಲ್ಲಿ ತಾಲೂಕಿನ ಕಾಳಗಿ ತಾಂಡಾದ ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಸ್ ನಿಲ್ದಾಣ ಬಳಿ ನಡೆದಿದೆ.
ಮೃತ ಯೋಧನನ್ನು ಮೌನೇಶ ರಾಠೋಡ(೩೫)ಎಂದು ಗುರುತಿಸಲಾಗಿದೆ. ಕಳೆದ ೧೩ ವರ್ಷಗಳಿಂದ ಸೇವೆಯಲ್ಲಿದ್ದ ಮೌನೇಶ ರಜೆಯ ಮೇಲೆ ಬಂದಿದ್ದರು ಎನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಯೋಧನ ಅಂತ್ಯಕ್ರೀಯೆ ಎ೧೦ ರಂದು ಬೆಳಿಗ್ಗೆ ಸ್ವಗ್ರಾಮ ಕಾಳಗಿ ತಾಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವದಾಗಿ ಮೂಲಗಳಿಂದ ತಿಳಿದು ಬಂದಿದೆ.