Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಲಾಪೋಷಕರಾಗಿದ್ದ ದಿ. ಭೋಜಣ್ಣ ಬೀಳಗಿಯವರಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಭಾನುವಾರ ದಿನಾಂಕ ೨-೩-೨೦೨೫ರಂದು ಸಂಜೆ ಕಂದಗಲ ಶ್ರೀ ಹನುಮಂತರಾಯ್ ರಮಗಮಂದಿರದಲ್ಲಿ ಸ್ವರ ಶ್ರದ್ದಾಂಜಲಿಯನ್ನು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಮೂಲಕ ಸಲಿಸಿದ್ದು ನಿಜಕ್ಕು ಶ್ಲಾಘನೀಯ ಕಾರ್ಯಕ್ರಮವೆಂದು ಧಾರವಾಡದ ಸುಪ್ರಸಿದ್ಧ ಗಾಯಕ ಪಂ. ಕೈವಲ್ಯ ಕುಮಾರ್ ಗುರವ್ ತಿಳಿಸಿದರು.ಕಳೆದ ೫೦ ವರ್ಷಗಳಿಂದ ವಿಜಯಪುರದಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗಿದೆ ದೇಶದ ಅಸಂಖ್ಯ ಖ್ಯಾತನಾಮ ಸಂಗೀತಗಾರರನ್ನು ಸುರಸಿಂಗಾರ ಸಂಸ್ಥೆಯ ಮೂಲಕ ವಿಜಯಪುರದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಪಂ. ಕೈವಲ್ಯ ಕುಮಾರ್ ಹಾಗೂ ಡಾ. ಸತೀಶ ಜಿಗಜಿನ್ನಿ ಮಾತನಾಡಿದರು.ನಂತರದಲ್ಲಿ ಪಂ. ಕೈವಲ್ಯ ಕುಮಾರ್ ಗುರವ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಪಂಡಿತ್ ಕೈವಲ್ಯ ಕುಮಾರ್ ಗುರವ್ ಅವರು ರಾಗ ಶ್ರೀ ವಿಸ್ತಾರವಾಗಿ ಪ್ರಸ್ತುತಪಡಿಸಿ ನಂತರ ವಚನ ತಿಲಕಮೋದರಾಗ…
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇರಳ ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ವಿಜಯಪುರ ತಾಲೂಕಿನ ಹೊನಗನಹಳ್ಳಿಯಲ್ಲಿ ಶನಿವಾರ ಮುಸ್ಸಂಜೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿರುವ ಸಂಜೀವಿನಿ (ಎನ್.ಆರ್.ಎಲ್. ಎಂ.) ಘಟಕದ ಉದ್ಘಾಟನೆ, ಗ್ರಾಮ ಪಂಚಾಯತಿಯ ಕಟ್ಟಡಕ್ಕೆ ಅಡಿಗಲ್ಲು ಹಾಗೂ ಸಿ.ಎಸ್.ಆರ್ ಯೋಜನೆಯಡಿಯಲ ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತಮಿಳುನಾಡು ಮತ್ತು ಕೇರಳಗಳಲ್ಲಿ ಚಿಟಫಂಡ್ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ಕೇರಳದಲ್ಲಿ ಸುಮಾರು ರೂ. 25000 ಕೋ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅದೇ ರೀತಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಂ.ಎಸ್.ಐ.ಎ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳಿಗೆ ಶಕ್ತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜನರಲ್ಲಿ ಸಂಸ್ಕಾರ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಇಂದಿನ ಯುವಕರಲ್ಲಿ ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಅತ್ಯವಶ್ಯಕವಾಗಿವೆ ಎಂದು ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಮಠದಲ್ಲಿ ರೇಣುಕಾಚಾರ್ಯರ ಜಯಂತುತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಸಮಾಜದಲ್ಲಿ ಪ್ರತಿಯೊಬ್ಬರು ಒತ್ತಡದ ಮಧ್ಯದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಮನಸ್ಸಿಗೆ ನೆಮ್ಮದಿ ದೊರೆಯಬೇಕಾದರೆ ಪುರಾಣ ಪ್ರವಚನದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಣರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಯರಡೋಣಿಯ ಅಮರೇಶ್ವರ ಶಾಸ್ತ್ರೀಗಳು ಗೋಲಗೇರಿ ಗೊಲ್ಲಾಳೇಶ್ವರರ ಪುರಾಣ ಆರಂಭಿಸಿದರು. ಗವಾಯಿಗಳಾಗಿ ಸಿದ್ರಾಮ ಸೋಲಾಪುರ ತಬಲಾ ವಾದಕರಾಗಿ ಮಹಾಂತೇಶ ಟಾಕಳಿ ಇದ್ದರು.ಪುರಾಣ ಕಾರ್ಯಕ್ರಮ ಚಂದ್ರಶೇಖರ ಹರನಾಳ, ಶಿವಾನಂದ ನಾಟೀಕಾರ, ಹಣಮಂತ ಮಸರಕಲ್, ಶಿವಲಿಂಗಯ್ಯ…
ಕಾವ್ಯ ಸಿರಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಮನಗೂಳಿ ಸಲಹೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳು ಶಿಸ್ತು ಅಳವಡಿಸಿಕೊಂಡು ಸರಿಯಾಗಿ ಅಧ್ಯಯನ ಮಾಡಿ ಉನ್ನತ ಸ್ಥಾನ ತಲುಪಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಆರೂಢ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಂಗಮೇಶ್ವರ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಹಮ್ಮಿಕೊಂಡ ಕಾವ್ಯ ಸಿರಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿ ನಿತ್ಯ ಪರಿಶ್ರಮ ಪಡಬೇಕು. ತಾಳ್ಮೆಯಿಂದ ವರ್ತಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಂಸ್ಕಾರವAತಿಕೆ ಬೆಳಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.ಶಾಲೆಯಿಂದ ನವೋದಯ ಸೈನಿಕ, ಆದರ್ಶ, ಮೂರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಶಾಸಕ ಅಶೋಕ ಮನಗೂಳಿ ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮೂಡಲಿ ಸಾಧ್ಯ ಎಂದರು.ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿ…
ನಗರ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ನಾಡಗೌಡ ಕರೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬೆಳೆಯುವ ನಗರಕ್ಕೆ ಸಂಚಾರದ ವ್ಯವಸ್ಥೆ ಇಲ್ಲದಿದ್ದರೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ದೂರದೃಷ್ಟಿಯಿಂದ ಪಟ್ಟಣದಲ್ಲಿ ಸಿಟಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸಧ್ಯಕ್ಕೆ ಎರಡು ಬಸ್‌ಗಳನ್ನು ಪ್ರಾರಂಭಿಸಿದ್ದು ಮಾರುತಿ ನಗರದ ಕೊನೆಯ ರಸ್ತೆಯಿಂದ ಪ್ರಾರಂಭವಾಗಿ ಜಾನುವಾರಗಳ ಮಾರುಕಟ್ಟೆ, ರಿಲಯನ್ಸ್ ಪೆಟ್ರೋಲ್ ಪಂಪ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಪಿಲೇಕಮ್ಮ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಪದ್ಮಾವತಿ ಮಾರ್ಗವಾಗಿ ಹಡಲಗೇರಿ ಗ್ರಾಮಕ್ಕೆ ಒಂದು ಮತ್ತೊಂದು ಬಸ್ ವಿಮುಖವಾಗಿ ಹೀಗೆ ಒಟ್ಟು ಎರಡು ಸಿಟಿ ಬಸ್‌ಗಳು ಪ್ರಾರಂಭವಾಗಿವೆ. ಈ ಬಸ್ ಸೇವೆ ಪ್ರಾರಂಭಕ್ಕೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಶಂಕರಗೌಡ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಟಾಪ್ ಬಂದಿರುವ ಒಟ್ಟು ೬೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಸ್ಕಾಲರ್ ಶಿಪ್ ಪರೀಕ್ಷೆ ಬರೆದು ಸ್ಕಾಲರ್‌ಶಿಪ್ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.ನಮ್ಮ ಸಂಸ್ಥೆಯ ಮುದ್ದೇಬಿಹಾಳದ ಹಾಗೂ ತಾಲೂಕಿನ ಅಡವಿ ಹುಲಗಬಾಳ, ಮತ್ತು ಕೊಳೂರುಗ್ರಾಮಗಳಲ್ಲಿರುವ ಮೂರು ಶಾಲೆಗಳಲ್ಲಿ ೬ ಮತ್ತು ೮ನೇ ತರಗತಿ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಒಟ್ಟು ೪೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಮೂರು ಶಾಲೆಗಳಿಗೆ ತಲಾ ೫ ವಿದ್ಯಾರ್ಥಿಗಳಂತೆ ಒಟ್ಟು ೩೦ ವಿದ್ಯಾರ್ಥಿಗಳು ಶಿಕ್ಷಣದ ಸಹಿತ ವಸತಿ ನಿಲಯಕ್ಕೆ ಮತ್ತು ತಲಾ ೫ ವಿದ್ಯಾರ್ಥಿಗಳಂತೆ ಒಟ್ಟು ೩೦ ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಅದರ ಜೊತೆಗೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹರ ಮುನಿದರೆ ಗುರು ಕಾಯುವನು ಎಂಬ ಮಾತಿನಂತೆ ಗುರುವಿನ ಮಹತ್ವ ಅತ್ಯಂತ ಹಿರಿದಾದುದಾಗಿದೆ ಎಂದು ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರಶ್ರೀ ಹೇಳಿದರು.ಪಟ್ಟಣದ ಕಲ್ಮೇಶ್ವರ ಸಭಾಭವನದಲ್ಲಿ ಭಾನುವಾರ ಜರುಗಿದ ಬಿಎಲ್‌ಡಿಇ ಸಂಸ್ಥೆಯ ಡಿ.ಎಚ್ ಪ.ಪೂ ಹಾಗೂ ಪ್ರೌಢಶಾಲೆಯ ೧೯೯೬-೯೭ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಕಲಿದೇವರದೇವ ಎಂಬ ಅಂಕಿತನಾಮದ ವಚನಗಳನ್ನು ರಚಿಸಿದ ಮಡಿವಾಳ ಮಾಚಿದೇವ ಅಧ್ಯಯನಿಸಿದ ಸನ್ನಿಧಾನದಲ್ಲಿ ಜರುಗಿದ ಕಾರ್ಯಕ್ರಮ ಅತ್ಯಂತ ಸಮಯೋಚಿತವಾಗಿದೆ . ಇಂದು ಗುರುಸೇವೆ ಎಂಬುದು ಅತ್ಯಂತ ಮಹತ್ವ ಪಡೆದ ಕಾರ್ಯವಾಗಿದೆ ಎಂದರು.ಲಚ್ಯಾಣ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯ ಎಸ್.ಎಮ್,ಶೆಟ್ಟೆಣ್ಣವರ ಮಾತನಾಡಿ, ಉತ್ತಮ ಆರೋಗ್ಯ, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಬಂಧಗಳನ್ನು ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.ನಿವೃತ್ತ ಪ್ರಾಚಾರ್ಯ ಎಸ್.ಬಿ.ಮಿರ್ಜಿ, ನಿವೃತ್ತ ಶಿಕ್ಷಕಕರಾದ ಬಿ.ಸಿ.ಹಿರೇಮಠ, ಜೆ.ಆರ್.ಬಿರಾದಾರ, ಅತಿಥಿಶಿಕ್ಷಕ ಬಿ.ಕೆ.ಪಾಟೀಲ ಮಾತನಾಡಿದರು. ಎ.ಬಿ.ಸಾಲಕ್ಕಿ ಪ್ರೌಢಶಾಲಾ ಮುಖ್ಯಗುರು ವ್ಹಿ.ಎಮ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕವೃಂದಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೪-೨೫ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಮಹಿಳಾ ವಿವಿಯ ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಕ್ರೀಡೆಯು ಇದೇ ದಿ. ೦೩ ರಿಂದ ೦೭ ರವರೆಗೆ ಪರೆಯಾರ್ ವಿಶ್ವವಿದ್ಯಾಲಯ ಸೇಲಳ ಟಿಎನ್ ಜರುಗಲಿದ್ದು ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ತಂಡದ ತರಬೇತಿದಾರಾಗಿ ಲಕ್ಷ್ಮಿ ಹನಮರ ಮತ್ತು ವ್ಯವಸ್ಥಾಪಕರಾಗಿ ಪುಷ್ಪಾ.ಮೇಟಿ ಭಾಗವಹಿಸಲಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಶಿಕ್ಷಣ ನಿಕಾಯದ ಡೀನ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.
ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ರೇವಣಸಿದ್ಧರು ಹಾಲು ಮತಸ್ಥ ಸಮಾಜಕ್ಕೆ ಸೇರಿದ ಇಂದಿನ ಸಾಂಗಲಿ ಜಿಲ್ಲೆಯ ವಿಟಾ ತಾಲೂಕಿನ ರೇವಾಳಗಾವ ಎಂಬಲ್ಲಿ ಜನಿಸಿದರು.12ನೇ ಶತಮಾನದಲ್ಲಿ ಶ್ರೀ ರೇವಣಸಿದ್ದ ಹಾಗೂ ಶ್ರೀ ಸಿದ್ದರಾಮ ಸಮಕಾಲೀನರು ಎಂಬುದು ರೇವಣಸಿದ್ದೇಶ್ವರನ ಕುರಿತು ಬರೆದ ರೇವಣಸಾಂಗತ್ಯ, ರೇವಣಸಿದ್ದೇಶ್ವರ ರಗಳೆ ಹಾಗೂ ಜಾನಪದ ಹಾಲುಮತ ಪುರಾಣ ಇವುಗಳಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಹರಿಹರ ಕವಿಯೂ ಸಹ ಇವರ ಬಗ್ಗೆ ತಮ್ಮ ಮೊಟ್ಟಮೊದಲ ಕಾವ್ಯದಲ್ಲಿ ಉಲ್ಲೇಖ ಮಾಡಿರುತ್ತಾರೆ. ಇವರ ಟಗರು ಪವಾಡಕ್ಕೆ ರೇವಣಸಿದ್ದ ಪುರಾಣವೆಂದು ಕರೆಯುತ್ತಾರೆ.ಡಾ ಎಂ ಎಂ ಕಲಬುರ್ಗಿ ಅವರು ತಮ್ಮ ಮಾರ್ಗದಲ್ಲಿ ರೇವಣಸಿದ್ಧರು ನಾಥ ಪರಂಪರೆಗೆ ಸೇರಿದವರು ವಚನ ಚಳುವಳಿಯಿಂದ ದೂರ ಉಳಿದರು ಎಂದು ನಮೂದಿಸಿದ್ದಾರೆ , ಇದು ಸಂಪೂರ್ಣ ತಪ್ಪು. ಟಿ ಎಸ ವೆಂಕಣ್ಣಯ್ಯನವರು (ಕುವೆಂಪು ಅವರ ಗುರುಗಳು ) ತಮ್ಮಹರಿಹರ ಕವಿಯ ರೇವಣಸಿದ್ದೇಶ್ವರ ರಗಳೆ ಎಂಬ ಕೃತಿ ಸಂಪಾದನೆಯ ಪೀಠಿಕೆಯಲ್ಲಿ ರೇವಣಸಿದ್ಧರು ಬಸವ ಸಮಕಾಲೀನ ಮತ್ತು 12 ನೆಯ ಶತಮಾನದ ಶರಣ ಶ್ರೇಷ್ಠ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಆಂಗ್ಲ ಭಾಷಾ ಉಪನ್ಯಾಸಕರುಸ ಪ ಪೂ ಕಾಲೇಜುಹಿರೇಬಾಗೇವಾಡಿ – ೫೯೧೧೦೯ತಾ:ಜಿ: ಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಮ್ಮಲ್ಲಿ ಎಷ್ಟೆಲ್ಲ ಸಂಪತ್ತಿದೆ ಸೌಲಭ್ಯಗಳಿವೆ ಎನ್ನುವದು ಮುಖ್ಯವಲ್ಲ. ಬದಲಾಗಿ ನಾವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುವದು ಮುಖ್ಯ. ಇರುವದೆಲ್ಲವನ್ನೂ ಸದ್ವಿನಿಯೊಗಪಡಿಸಿಕೊಳ್ಳುತ್ತಿದ್ದೇವೆಯೇ? ದುಡಿದ ಹಣ ಸತ್ಪಾತ್ರಕ್ಕೆ ಸಲ್ಲತ್ತಿದೆಯೇ? ಎಂಬ ಅಂಶ ಪ್ರಮುಖವಾದುದು. ಬಳಕೆಯ ವಿಧಾನ ಅತ್ಯುತ್ತಮ ರೀತಿಯಲ್ಲಿ ಇರುವದೆ? ಅಥವಾ ಬದಲಾಯಿಸಬೇಕೆ? ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಣ್ಣದೆನಿಸುವ ಸೂಜಿಯೂ ಅತ್ಯದ್ಭುತ ಉಪಯೋಗಕ್ಕೆ ಬರುತ್ತದೆ. ಕಸವೂ ರಸವಾಗಿ ನಮ್ಮ ಮನ ಅರಳಿಸುತ್ತದೆ. ಇತ್ತೀಚಿಗೆ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಬಿದ್ದು ವಸ್ತುಗಳ ಬೆನ್ನು ಹತ್ತಿ ಮನುಷ್ಯನ ಪ್ರೀತಿಯನ್ನು ಗೌಣವಾಗಿ ಕಾಣುವ ಅಧಃಪತನ ಸ್ಥಿತಿ ತಲುಪುತ್ತಿದ್ದೇವೆ. ಮನುಷ್ಯರನ್ನು ಪ್ರೀತಿಸಿ ವಸ್ತುಗಳನ್ನು ಉಪಯೋಗಿಸುವದು ಮುಖ್ಯವೇ ಹೊರತು ವಸ್ತುಗಳನ್ನು ಪ್ರೀತಿಸಿ ಮನುಷ್ಯರನ್ನು ಉಪಯೋಗಿಸುವದಲ್ಲ ಎಂಬ ವಿಷಯ ಅರಿತು ನಡೆಯುವದು ಇಂದಿನ ಅನಿವಾರ್ಯವಾಗಿದೆ.ಮರ ಎಷ್ಟೇ ಎತ್ತರವಾಗಿ ಬೆಳದಿದ್ದರೂ ಅತೀ ಚಿಕ್ಕದಾದ ಕೊಡಲಿ ಅದರ ಕಾಂಡವನ್ನು ಕತ್ತರಿಸಬಲ್ಲುದು.…
