ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನೂತನ ಬಸ್ ನಿಲ್ದಾಣದ ನಿರ್ಮಾಣ ಹಾಗೂ ವೀರಶರಣ ಮಡಿವಾಳ ಮಾಚಿದೇವ ನಾಮಕರಣಕ್ಕೆ ಕಾರಣರಾದ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ ಶಹಾಪೂರ ಅವರ ಕಾರ್ಯ ಶ್ಲಾಘನೀಯ ಎಂದು ಧುರೀಣ ಬಿ.ಕೆ.ಪಾಟೀಲ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಾರ್ವಜನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್ತಿನ ಮಾಜಿಸದಸ್ಯ ಅರುಣ ಶಹಾಪೂರ ಇಬ್ಬರು ನಾಯಕರು ತಾವು ನುಡಿದಂತೆ ನಡೆಯುವುದರ ಮೂಲಕ ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ನಿಲ್ದಾಣಕ್ಕೆ ನಾಮಕರಣ ಪ್ರಕ್ರಿಯೆಯಲ್ಲಿ ಜನತೆಯ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಿ ಬಹುದಿನದ ಪ್ರಯತ್ನಗಳಿಗೆ ಸಹಕಾರ ನೀಡಿ ತಮ್ಮ ಕರ್ತವ್ಯಪ್ರಜ್ಞೆ ತೋರಿದ್ದಾರೆ . ಪಟ್ಟಣದ ಜನತೆ ಅವರಿಗೆ ಚಿರರುಣಿಯಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಂಗಪ್ಪ ತಡವಲ್, ಗೋಲ್ಲಾಳ ಬಿರಾದಾರ, ರಾವುತ ಅಗಸರ, ಮಡುಗೌಡ ಬಿರಾದಾರ, ಸೋಮು ದೇವೂರ, ರಮೇಶ ಹಡಪದ, ವಿನೋದ ಚವ್ಹಾಣ, ಮಹಾಂತೇಶ ಬಿರಾದಾರ, ಮಲ್ಲಪ್ಪ ಭತಗುಣಕಿ, ಸುರೇಶ ಬಿರಾದಾರ, ಹುಸೇನ್ ಗೌಂಡಿ ಸಹಿತ ವಿಜಯಪುರದ ಗೆಳೆಯರ ಬಳಗದ ಸದಸ್ಯರು ಇದ್ದರು.