ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ವಜ್ರಾ ಆಚಾರಿ ಶೇ.೯೭.೫ ಅಂಕಗಳನ್ನು ಕಾಲೇಜಿಗೆ ಪ್ರಥಮ, ಸಾನಿಕಾ ಗೂಳಣ್ಣವರ ಶೇ.೯೭.೧೬ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ, ಸಂಪತ್ತಕುಮಾರ ಹುಗ್ಗಿ, ಸ್ನೇಹಾ ಅಮಾತಿ ಮತ್ತು ಯಶೋಧಾ ಸೊರಕೊಪ್ಪ ತಲಾ ಶೇ.೯೬.೮೩% ಅಂಕಗಳನ್ನು ಪಡೆದು ಕಾಲೇಜಿಗೆ ತೃತಿಯ ಸ್ಥಾನ ಪಡೆದು ಸಂಭ್ರಮಿಸಿದರೆ, ಪರೀಕ್ಷಗೆ ಹಾಜರಾದ ಒಟ್ಟು ೧೧೨೦ ವಿದ್ಯಾರ್ಥಿಗಳಲ್ಲಿ ೬೫೮ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, ೪೩೬ ವಿದ್ಯಾರ್ಥಿಗಳು ಪ್ರಥಮ, ೪ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.