ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ಅನುಧಾನಿತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಗುರುಭಾಯಿ ಕರಗಾರ ೫೫೪ ಅಂಕ ಪಡೆದು (೯೨.೩೩ %) ಕಾಲೇಜಿಗೆ ಪ್ರಥಮ, ಬಸಮ್ಮ ವಾಲಿಕಾರ ೫೩೫ ಅಂಕ ಪಡೆದು (೮೯.೧೬%) ದ್ವಿತೀಯ ಸ್ಥಾನ,ಲಕ್ಷಿö್ಮÃ ತೂಗಾಯಿ ೪೯೭ ಅಂಕ ಪಡೆದು ೮೨.೮೩% ಅಂಕ ಪಡೆದು ಕಾಲೇಜಿಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ವಿಧ್ಯಾರ್ಥಿಗಳಲ್ಲಿ ೨ ವಿಧ್ಯಾರ್ಥಿಗಳು ಅತ್ಯೂನ್ನತ ಶ್ರೇಣಿ,೩೧ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ,೩೬ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ,೧೩ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ, ಗುರುಭಾಯಿ ಕರಗಾರ ಕನ್ನಡ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿಧ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಸಿ ಎಸ್ ಹಿರೇಮಠ, ಆಡಳಿತ ಮಂಡಳಿಯ ಸದಸ್ಯರು,ಹಾಗೂ ಸಿಬ್ಬಂದ್ದಿ ವರ್ಗ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.