Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ನವದೆಹಲಿ: ಇಲ್ಲಿಯ ವಸಂತ ಕುಂಜ್‌ನಲ್ಲಿರುವ ಶ್ರೀ ವೇದವ್ಯಾಸ ಗುರುಕುಲ ಹಾಗೂ ಶ್ರೀ ಕೃಷ್ಣಧಾಮ ಮಠದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಮ್ಮ ಚಾತುರ್ಮಾಸ್ಯ ಆರಂಭಿಸಿದ್ದು, ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಶ್ರೀಗಳನ್ನು ಭೇಟಿ ಮಾಡಿ ವಿಶೇಷ ಗೌರವ ಸಲ್ಲಿಸಿ, ಶ್ರೀಗಳಿಂದ ಅನುಗ್ರಹ ಪಡೆದುಕೊಂಡರು.ನವದೆಹಲಿಯಲ್ಲಿ ಕೈಗೊಂಡಿರುವ ಈ ಪವಿತ್ರ ಧಾರ್ಮಿಕ ಸಂಕಲ್ಪ ಯಶಸ್ವಿಯಾಗಲಿದೆ ಎಂದು ಸಂಸದ ಜಿಗಜಿಣಗಿ ಶುಭ ಕೋರಿದರು. ಅನೇಕ ಹೊತ್ತು ಶ್ರೀಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಜಿಗಜಿಣಗಿ ಅವರು ಚರ್ಚೆ ನಡೆಸಿದರು.
ತಿಕೋಟಾ ಬಿಎಲ್‌ಡಿಇ ನೂತನ ಕಲಾ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದ ಬಿ.ಎಲ್. ಡಿ. ಇ ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಎಸ್.ತೋಳನೂರ ಅವರು ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದುವುದು ಇಂದಿನ ಅಗತ್ಯವಾಗಿದೆ. “ಆರೋಗ್ಯವೇ ಭಾಗ್ಯ” ಅನ್ನುವಂತೆ ಮನುಷ್ಯನಿಗೆ ಯಾವುದೇ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಅತ್ಯಂತ ಮಹತ್ವವನ್ನು ಪಡೆಯುತ್ತದೆ. ವಿದ್ಯಾರ್ಥಿಗಳಾದವರು ನಿತ್ಯವೂ ಪೌಷ್ಟಿಕಾಂಶ ಆಹಾರವನ್ನು ಸೇವಿಸುವುದರ ಮೂಲಕ ಆರೋಗ್ಯದ ಬಗ್ಗೆ ಸ್ವಯಂ ಜಾಗೃತರಾಗಿರುವುದು ಜೀವನ ಶೈಲಿಯ ಒಂದು ಉತ್ತಮ ಅಂಶವಾಗಿದೆ ಎಂದರು.ಕಾರಣ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವಂತೆ…
ಮುಂಬಯಿಯಲ್ಲಿ ಕನ್ನಡ ಪತ್ರಕರ್ತರ ಸಂಭ್ರಮ | ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿದ ಜಿ.ಎನ್. ಮೋಹನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುಂಬೈ: ಏಕ ಭಾಷೆ, ಏಕ ಉಡುಪು, ಏಕ ಆಹಾರ ಸಂಸ್ಕೃತಿಯನ್ನು ರೂಪಿಸುವ ಪ್ರಯತ್ನಗಳಂತೆ, ದೇಶದಲ್ಲಿ ಸದ್ದಿಲ್ಲದೆ ಏಕ ಮಾಧ್ಯಮದ ಪರಿಕಲ್ಪನೆಯನ್ನು ರೂಪಿಸುವ ಯತ್ನವೂ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಮಾಧ್ಯಮ ತಜ್ಞ ಜಿ.ಎನ್. ಮೋಹನ್ ಆತಂಕ ವ್ಯಕ್ತಪಡಿಸಿದರು.ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮುಂಬೈ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.“ಮಾಧ್ಯಮವು ಸಮಾಜದ ಕನ್ನಡಿ ಮತ್ತು ಪ್ರಜಾಪ್ರಭುತ್ವದ ಕಾವಲುಗಾರವಾಗಿರಬೇಕು. ಆದರೆ ಅದು ಉದ್ಯಮದ ಸ್ವರೂಪವನ್ನು ಪಡೆದ ಕ್ಷಣದಿಂದಲೇ ಸಮಾಜವನ್ನು ಕಟ್ಟುವ ತನ್ನ ಮೂಲ ಜವಾಬ್ದಾರಿಯಿಂದ ದೂರ ಸರಿಯಲು ಆರಂಭಿಸಿತು. ಇಂದು ಮಾಧ್ಯಮವು ಹಣ ಮತ್ತು ಅಧಿಕಾರ ಎರಡನ್ನೂ ತಂದುಕೊಡುವ ಪ್ರಬಲ ಸಾಧನವಾಗಿ ರೂಪುಗೊಂಡಿರುವುದು ಆತಂಕಕಾರಿ ಬೆಳವಣಿಗೆ” ಎಂದು ಅವರು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ…
ಯಡ್ರಾಮಿ ವಿರಕ್ತಮಠದಲ್ಲಿ ಲಿಂ.ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ | ಗ್ರಂಥ ಲೋಕಾರ್ಪಣೆ | ಭಕ್ತಿಯಲ್ಲಿ ಮಿಂದ ಭಕ್ತಗಣ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ.ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ 5ನೇ ಪುಣ್ಯಾರಾಧನೆ ಯ ೧೦ನೇ ದಿನ ಶುಕ್ರವಾರ ಶ್ರೀ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಶರಣ ಗೊಲ್ಲಾಳೇಶ್ವರ ಮಹಾಪುರಾಣ ಮಂಗಲ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕಾರ ಸಮಾರಂಭ ನೆರವೇರಿತು.ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರಾದ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರಿಗೆ ಹಾಗೂ ವಿಜಯಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಗೆ ಸತ್ಕಾರ, ಶ್ರೀರಕ್ಷೆ ಕಾರ್ಯಕ್ರಮವು ನಡೆಯಿತು.ಇದೇ ಸಂದರ್ಭದಲ್ಲಿ ಶಿಕ್ಷಕ, ಸಾಹಿತಿ ಬಸಯ್ಯಸ್ವಾಮಿ ಕಕ್ಕೇರಾ ರಚಿತ ’ನಿರಂಜನ ಪ್ರಭೆ’ ಗ್ರಂಥವನ್ನು ಸೊನ್ನ ವಿರಕ್ತಮಠದ ಡಾ.ಶಿವಾನಂದಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ಶ್ರೀ ಮುರಘೇಂದ್ರ ಭಜನಾ…
ಬಿ.ಎಲ್.ಡಿ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ರವಿಶಂಕರ್ ಬಿ.ಎಸ್. ಅಭಿಮತ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ವ್ಯಸನ ಎನ್ನುವುದು ಕೇವಲ ಮದ್ಯ, ಗುಟ್ಕಾ, ಸಿಗರೇಟ್ ಅಥವಾ ಮಾದಕ ವಸ್ತುಗಳ ಸೇವನೆಗೆ ಮಾತ್ರ ಸೀಮಿತವಲ್ಲ. ಸಮಯದ ದುರ್ಬಳಕೆ, ಮೊಬೈಲ್‌ಗಳ ಅತಿಯಾದ ಬಳಕೆ ಸೇರಿದಂತೆ ಜೀವನಶೈಲಿಯಲ್ಲಿನ ಅನಾರೋಗ್ಯಕರ ಅಭ್ಯಾಸಗಳೂ ವ್ಯಸನಗಳೇ ಆಗಿದ್ದು, ಇವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತವೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ರವಿಶಂಕರ್ ಬಿ.ಎಸ್. ಹೇಳಿದರು.ಡಾ.ಮಹಾಂತ ಶಿವಯೋಗಿ ಸ್ವಾಮೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎಸ್. ಕಾಗವಾಡೆ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಹೊಣೆಗಾರಿಕೆ ಪೋಷಕರ ಮೇಲಿದೆ. ಇಂದಿನ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ದುಶ್ಚಟಗಳಿಂದ ದೂರವಿಡಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರ ದುಶ್ಚಟಗಳ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹಲೋ, ನನ್ನ ಪ್ರೀತಿಯ ಪ್ರೀತಿಮೊದಲೇ ನೀನು ಮುಸ್ಸಂಜೆಯ ರವಿ ರಶ್ಮಿಯೊಳಗೆ ಮಿಂದೆದ್ದ ಬಂಗಾರ ವರ್ಣದ ಬಂಗಾರಿ. ಸಿಂಗಾರವಿಲ್ಲದ ಸಿಂಗಾರಿ. ಬಲು ಚೆಂದ ನಿನ್ನ ವೈಖರಿ. ಹೇಗೆ ವರ್ಣಿಸಲಿ ನಿನ್ನ ಸೌಂದರ್ಯದ ಸಿರಿ. ಕಾಣುವೆ ಸೌಂದರ್ಯದ ಸಾರವನ್ನೆಲ್ಲ ನಿನ್ನಲ್ಲಿ ಹಿಡಿದಿಟ್ಟುಕೊಂಡವಳಂತೆ. ಹರೆಯದ ಹೈಕಳೆಲ್ಲ ಮೊದಲ ನೋಟದಲ್ಲೇ ಒಲವಿನ ಬಲೆಯಲ್ಲಿ ಬೀಳುವಂತೆ ವೈಯ್ಯಾರ. ನಿನ್ನ ಸೋಜಿಗದ ಸೊಬಗು ಕಂಡು ನನ್ನ ತಲೆಯೊಳಗೊಂದು ಗಾಂಧಾರ ಲೋಕವರಳಿತು.. ನೀಲಿ ಕಂಗಳ ಮಿಟುಕಿಸಿ ಕಪ್ಪಾದ ಮುಂಗುರುಳ ಸರಿಸಿದಾಗ ನನ್ನ ಹರೆಯ ಮರುಹುಟ್ಟು ಪಡೆಯಿತು. ಕೆಂದಾವರೆ ಕೆನ್ನೆಯ ನಾಚಿಕೆಯ ಕೆಂಪು ತಂತು ಮನಕ್ಕೆ ತಂಪು. ನಿನ್ನ ಗುಳಿಕೆನ್ನೆ ದೃಷ್ಟಿಬೊಟ್ಟಿನಂತೆ. ಬಾನಾಡಿ ಗರಿಗೆದರಿ ಗಗನದೆಡೆ ನೋಡಿ ನಕ್ಕಂತೆ ನೀ ನನ್ನಡೆ ನೋಡಿ ನಕ್ಕೆ. ನನ್ನ ಹೃದಯದಲ್ಲಿ ಯಾರೂ ಬರೆಯದ ಒಲವಿನ ಚಿತ್ತಾರ ಬರೆದೆ. ಆ ಗಳಿಗೆಯಿಂದ ನನ್ನೀ ಮನ ಅಂದದ ಹೂವನು ಮೆಲ್ಲಗೆ ಸ್ಪರ್ಷಿಸಿ ಮಧು ಹೀರಿ ಸಂಭ್ರಮಿಸುವ ಭ್ರಮರದಂತೆ ಆಗಿದೆ.ಮೊದಲ ಬಾರಿ…
ಲೇಖನ- ಅವಿನಾಶ ಸೆರೆಮನಿಬೈಲಹೊಂಗಲಬೆಳಗಾವಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸ್ನೇಹ ಎಂಬರೆಡಕ್ಷರ ಅಪಾರವಾದ ಅರ್ಥವನ್ನು ಹೊಂದಿದೆ. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದುಪರಸ್ಪರ ಪರಿಚಯವಾಗುತ ನಂಬಿಕೆಯ ಸೇತುವೆಯಡಿಜನ್ಮ ತಾಳುವುದೇ ಸ್ನೇಹ. ದೇಹಗಳೆರದಾದರೂ ಜೀವಗಳು ಒಂದೇ. ಪ್ರೀತಿ ವಿಶ್ವಾಸಗಳೇ ಸ್ನೇಹದ ಉಸಿರುಮಾತಲ್ಲೇ ಆರಂಭವಾಗುತ ಗೆಳೆತನ ದಿನಗಳು ಕಳೆದಂತೆ ಆತ್ಮೀಯತೆಯನು ಬೆಸೆದು ಒಬ್ಬರಿಗೊಬ್ಬರು ಹಚ್ಚಿಕೊಂಡು ಬಿಟ್ಟಿರಲಾಗದಷ್ಟು ನಂಟು ಬೆಳೆಯುತ್ತದೆ.ಜಾತಿಯ ಅರಿವಿಲ್ಲ. ಬಡವ ಶ್ರೀಮಂತನೆಂಬ ಬೇಧವಿಲ್ಲದೆ ಮನಸು ಮನಸುಗಳ ನಡುವೆ ಮಾತನಾಡುತಲೆ ಅಂತರಂಗದಿ ಕುಡಿಯೊಡೆಯುವ ಸ್ನೇಹ ಬಂಧನ. ಎಲ್ಲ ಬಂಧವನ್ನು ಮೀರಿದ ಅಗಣಿತ ಭಾವನೆಗಳ ಸಂಗಮದ ಬಾಂಧವ್ಯದ ಗಣಿಯಿದು. ಅರಿವಿನ ಆಲಯದಿ ಒಬ್ಬರಿಗೊಬ್ಬರನ್ನು ಬಿಟ್ಟುಕೊಡದೆ ರಹಸ್ಯವಾದ ಸುಖ ದುಃಖಗಳನ್ನು ಹಂಚಿಕೊಳ್ಳುತ ಸಾಂತ್ವನ ಹೇಳುತ್ತಾ ಕುಟುಂಬದವರಂತೆ ಬೆರೆಯತ ಸದಾ ಜೊತೆಗಿರುವರು.ಸನ್ನಿವೇಶಗಳು, ಮನುಜರ ನಡುವೆ ಬಂಧನ ಬೆಸೆಯುತ ಸ್ನೇಹದ ಪರಿಧಿಯನ್ನು ಚಾಚುವುದು. ಸಣ್ಣ ಸಣ್ಣ ವಿಷಯಗಳನ್ನು ಮಾತನಾಡುತ ಸಲುಗೆಯಲ್ಲೇ ಮನದ ಭಾವಗಳನ್ನು ಹೊಸೆಯುತ್ತಾ ,ಅಭಿರುಚಿಗಳ ಅರಿಯುತ್ತಾ ಒಂದಾಗಿ ನಲಿಯುತ ಎಲ್ಲ ಸಮಯದಲ್ಲಿ ಪರಸ್ಪರ ನೋವು ನಲಿವುಗಳಲ್ಲಿ ಭಾಗಿಯಾಗುತ ಒಂದೇ ಕುಟುಂಬದವರಂತೆ ಜೊತೆಯಾಗಿ…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ “ಓ ಗೆಳೆಯ, ಜೀವದ ಗೆಳೆಯ, ನಿಂಗೆ ಶಾನೆ ಕ್ವಾಪ ಕಣೋ, ಕ್ಚಾಪಕೂ ಒಂದು ಕೈ ಪ್ರೀತಿ ಜಸ್ತಿ ಕಣೋ.. ಕುಚುಕು ಕುಚುಕು, ನೀನು ಚಡ್ಡಿ ದೋಸ್ತ ಕಣೋ ಕುಚುಕು, ಜೀವ ದಿನಾದಾಸ್ತಿ ಕಣೋ ಕುಚುಕು.. ಎಂಬ ಚಲನಚಿತ್ರದ ಹಾಡುಗಳನ್ನು ಕೇಳಿರಬಹುದು. ಇದರಿಂದ ಪ್ರತಿಯೊಬ್ಬರಿಗೆ ತಮ್ಮ ಹೃದಯದ ಭಾವನೆಗಳನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ನಾವು ಮಾಡುವ ತಪ್ಪುಗಳನ್ನು ತಿದ್ದಿ-ತೀಡಿ, ಕನಸುಗಳನ್ನು ಸಾಕಾರಗೊಳಿಸಲು ಮತ್ತು ಪ್ರತಿಯೊಂದು ಸಾಧನೆಯ ಹಿಂದೆ ಪ್ರೊತ್ಸಾಹಕನಾಗಿ ನಿಂತಿರುವವನೇ ಗೆಳೆಯ ಅಥವಾ ಸ್ನೇಹಿತ. ಆದ್ದರಿಂದ ಪ್ರತಿಯೊಬ್ಬರು ಇಡೀ ಜಗತ್ತನೇ ಗೆದ್ದಿರುವ ಎಲ್ಲ ಸಂಬಂಧಗಳನ್ನು ಮೀರಿ ನಿಂತಿರುವ ಮತ್ತು ಬಾಂಧವ್ಯ ಬೆಸೆಯುವ ಸುಮಧುರ ಸಂಬಂಧವೇ ಗೆಳೆತನ ಎಂದು ಹೇಳಬಹುದು.ಅದಕ್ಕಾಗಿ ಸ್ನೇಹಿತರ ದಿನ ಎಂದರೆ ಕೇವಲ ಕೈಗೆ ಪ್ರೆಂಡ್ ಶಿಫ್ ಬ್ಯಾಂಡ್ ಕಟ್ಟುವುದು, ಗಿಫ್ಟ ನೀಡುವುದು, ಪಾರ್ಟಿ, ಮೋಜು-ಮಸ್ತಿ ಮಾಡಿ ಕೇಕ್ ಕತ್ತಸುವುದಲ್ಲ. ಬದಲಾಗಿ ನಿಜವಾಗಿ ಸ್ನೇಹಿತನ ಮನದ ಇಂಗಿತವನ್ನು ಅರಿತು ಬಿದ್ದಾಗ ಮೇಲೇಳುವಂತೆ…
ಶಿಕ್ಷಣ ಉದ್ಯೋಗವಲ್ಲ, ಸೇವೆಯೆಂದು ಭಾವಿಸಿ ಬಾಳು ಬೆಳಗಿದ ಗುರು | ಬಿ.ಎಲ್.ಡಿ.ಇ. ವೈದ್ಯಕೀಯ ಆಸ್ಪತ್ರೆಗೆ ದೇಹದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಅಕ್ಷರಸಂತ ಉದಯರಶ್ಮಿ ದಿನಪತ್ರಿಕೆ ವರದಿ: ಮಹಾಂತೇಶ ನೂಲಾನವರಸಿಂದಗಿ: ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ. ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿ. ಅಂತಹ ಶಿಲ್ಪಿಗಳಲ್ಲಿ ಅಪರೂಪದ ವ್ಯಕ್ತಿತ್ವವಾಗಿದ್ದವರು ವಿಜಯಪುರ ಜಿಲ್ಲೆಯ ಸಿಂದಗಿಯ ಹಿರಿಯ ಶಿಕ್ಷಕ, ಗಣಿತ ತಜ್ಞ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ. ಶಿಕ್ಷಣವನ್ನು ಉದ್ಯೋಗವೆಂದು ಎಂದಿಗೂ ಭಾವಿಸದೆ, ಅದನ್ನು ಸಮಾಜ ಸೇವೆಯಾಗಿ ಸ್ವೀಕರಿಸಿ ತಮ್ಮ ಇಡೀ ಬದುಕನ್ನೇ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಮರ್ಪಿಸಿದ್ದ ಈ ಮಹಾಗುರು ಇಂದು ಕೊನೆಯುಸಿರೆಳೆದಿರುವುದು ಸಿಂದಗಿಯ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಎಚ್.ಟಿ. ಕುಲಕರ್ಣಿ ಸರ್ ಎಂದರೆ ಶಿಸ್ತು, ಸರಳತೆ, ಸಮಯಪಾಲನೆ ಮತ್ತು ಗುಣಮಟ್ಟದ ಶಿಕ್ಷಣದ ಪ್ರತೀಕ. ಗಣಿತ ವಿಷಯವನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವ ಅವರ ವಿಶಿಷ್ಟ ಶೈಲಿ ಸಾವಿರಾರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. “ಗಣಿತ…
