Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ

ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..

ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಕ್ಕಳಿಗೆ ಮೊಬೈಲ್ ಸಹವಾಸ ಬಿಡಿಸುವುದು ಹೇಗೆ?
ವಿಶೇಷ ಲೇಖನ

ಮಕ್ಕಳಿಗೆ ಮೊಬೈಲ್ ಸಹವಾಸ ಬಿಡಿಸುವುದು ಹೇಗೆ?

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ಇಂದು ನಿನ್ನೆಯ ಮಕ್ಕಳ ಹವ್ಯಾಸವಲ್ಲ. ದುಬಾರಿ ಬೆಲೆಯ ಗ್ರಾಮ ಫೋನ್ ಗಳು ಮೊಟ್ಟ ಮೊದಲಿಗೆ ಚಾಲ್ತಿಯಲ್ಲಿ ಬಂದವು. ಕಹಳೆಯಾಕಾರದ ಗ್ರಾಮಫೋನ್ ನ ಮೇಲೆ ತಟ್ಟೆಯ ಆಕಾರದ ಹಾಡಿನ ಪ್ಲೇಟುಗಳನ್ನು ಇರಿಸಿ ಅದರ ಮೇಲೆ ವಿದ್ಯುತ್ತಿನ ಕನೆಕ್ಷನ್ ಹೊಂದಿರುವ ಕಡ್ಡಿಯನ್ನು ಇಟ್ಟೊಡನೆ ಸುಮಧುರವಾದ ಗೀತೆಗಳು ಮೊಳಗುತ್ತಿದ್ದವು. ಈ ಮೊದಲೇ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಧ್ವನಿ ಮುದ್ರಿಸಲ್ಪಟ್ಟ ಗೀತೆಗಳು ಗ್ರಾಮಫೋನ್ ತಟ್ಟೆಗಳ ಮೂಲಕ ನಮ್ಮ ಶ್ರವಣೇಂದ್ರಿಯಗಳಿಗೆ ಅಮೃತ ಸುಧೆಯನ್ನು ಉಣಿಸುತ್ತಿದ್ದವು. ಸುಮಾರು ಶತಮಾನಗಳ ಇತಿಹಾಸ ಇವಕ್ಕಿದೆ.
ನಂತರ ಬಂದದ್ದು ರೇಡಿಯೋ.ಈ ಹಿಂದೆ ರೇಡಿಯೋ ತರಂಗಗಳ ಮೂಲಕ ಆಕಾಶವಾಣಿಯಲ್ಲಿ ನಮ್ಮ ಹಿರಿಯರು ಹಾಡು, ವಾರ್ತೆಗಳು, ಪ್ರದೇಶ ಸಮಾಚಾರ, ಹವಾಮಾನ ಮುನ್ಸೂಚನೆ, ಕೃಷಿ ಸಂಬಂಧಿತ ಸಲಹೆ ಸೂಚನೆಗಳು, ನಾಟಕ ಮಕ್ಕಳ ಕಾರ್ಯಕ್ರಮಗಳು, ಮನರಂಜನೆ ಮುಂತಾದ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಮತ್ತೆ ಕೆಲವು ಹಣ ಸಂದಾಯ ಮಾಡಿ ಕೇಳುವಂತಹ ರೇಡಿಯೋ ಕಾರ್ಯಕ್ರಮಗಳು ಕೂಡ ಇದ್ದವು.
ಆಮೇಲೆ ಬಂದದ್ದು ಫೋನ್ ಗಳು. ಮೊದಮೊದಲು ಕೇವಲ ಪೋಸ್ಟ್ ಆಫೀಸ್ನಲ್ಲಿ, ಉಳ್ಳವರ ಮನೆಗಳಲ್ಲಿ ಮಾತ್ರ ಇರುತ್ತಿದ್ದ ಫೋನ್ ಗಳು ತಮ್ಮ ಕರ್ಕ ಶ ಧ್ವನಿಯಿಂದ ಕರೆ ಮಾಡಿದ ಸೂಚನೆಯನ್ನು ನೀಡಿದರೆ ನಂತರ ವಿವಿಧ ರೀತಿಯ ರಿಂಗ್ ಟೋನ್ ಗಳು ಬಂದವು. ಕಾರ್ಡ ಲೆಸ್ ಫೋನುಗಳ ನಂತರ ಈಗ ಇಲ್ಲದೆ ಆಂಡ್ರಾಯ್ಡ್ ಮೊಬೈಲ್ಗಳದ್ದೇ ಕಾರು ಬಾರು. ಚಿಕ್ಕ ಮಕ್ಕಳಿಂದ ಹಿಡಿದು ಮುಪ್ಪಿನ ಮುದುಕರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ರಾರಾಜಿಸುತ್ತಿದೆ.


ನಿರ್ಜೀವ ವಸ್ತುಗಳಾದ ವಾಚುಗಳು ಗಡಿಯಾರಗಳು, ರೇಡಿಯೋ, ಗ್ರಾಮ ಫೋನ್ ಮುಂತಾದ ವಸ್ತುಗಳು ನಮ್ಮಲ್ಲಿ ಸದಾ ಆಕರ್ಷಣೆಯನ್ನು ಹುಟ್ಟಿಸುತ್ತಿದ್ದವು. ಯಂತ್ರದ ತಂತ್ರಜ್ಞಾನವನ್ನು ಅರಿಯುವ ಮುಂಚೆಯೇ ನಾವು ಅವುಗಳ ಆಕರ್ಷಕ ವಿನ್ಯಾಸ, ಬಣ್ಣ ಮತ್ತು ಮೆರುಗುಗಳಿಗೆ ಮಾರುಹೋಗುತ್ತಿದ್ದೆವು.
ಗ್ರಾಮಫೋನ್, ರೇಡಿಯೋ, ಫೋನು, ಟಿವಿ, ಬಣ್ಣದ ಟಿವಿ, ವಿ ಸಿ ಆರ್, ವಿಸಿಡಿ ಹೀಗೆ ಹಂತ ಹಂತವಾಗಿ ನಾವು ವಿವಿಧ ಬಗೆಯ ಗ್ಯಾಜೆಟ್ ಗಳ ಜೊತೆ ನಮ್ಮ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಹೋದೆವು. ಇದೀಗ ಓಟಿಟಿಗಳ ಯುಗ. ಹತ್ತು ಹಲವರು ಚಾನೆಲ್ ಗಳು ಸಾಮಾಜಿಕ ಜಾಲತಾಣಗಳು ನಮ್ಮನ್ನು ದಿನದ 24 ಗಂಟೆಯೂ ರಂಜಿಸಲು ಇವೆ. ಹಿರಿಯರೇ ಇವುಗಳ ಆಕರ್ಷಣೆಗೆ ಒಳಗಾಗಿದ್ದಾರೆ ಎಂದರೆ ಮಕ್ಕಳ ಪಾಡೇನು?
ಮಕ್ಕಳೂ ಅಷ್ಟೇ.. ಮೊಬೈಲ್ ಕುರಿತ ಮಕ್ಕಳ ಆಕರ್ಷಣೆ ಹೇಳತೀರದು. ಶಾಲೆಗೆ ಹೋಗುವ ಕೊನೆಯ ಘಳಿಗೆಯವರೆಗೂ ಮೊಬೈಲನ್ನು ಬಳಸುವ ಮಕ್ಕಳು ಶಾಲೆಯಿಂದ ಬಂದೊಡನೆ ತಂದೆ ತಾಯಿಗಳ ಕೈಕಾಲು ಬಿದ್ದಾದರೂ ಮೊಬೈಲ್ ಪಡೆದು ಅದನ್ನು ಬಳಸುತ್ತಾರೆ.
ಮೊಬೈಲ್ನ ಕುರಿತಾದ ಮಕ್ಕಳ ಈ ಆಕರ್ಷಣೆ ಒಂದು ಹಂತದವರೆಗೆ ಪರವಾಗಿಲ್ಲ ಎಂದೆನಿಸಿದರೂ “ಅತಿಯಾದರೆ ಅಮೃತವೂ ವಿಷ” ಎಂಬ ಮಾತಿನಂತೆ ಮಕ್ಕಳು ತಮ್ಮ ಜೀವನದ ಅತಿ ಮುಖ್ಯವಾದ ವಿದ್ಯಾರ್ಥಿ ಜೀವನದ ಶೈಕ್ಷಣಿಕ ವಿಷಯಗಳತ್ತ ನಿರ್ಲಕ್ಷ ತೋರುತ್ತಿದ್ದಾರೆ ಇದು ಅಪಾಯಕ್ಕೆ ದಾರಿ.
ಎರಡು ಗುಂಡು ಸೂಜಿಗಳನ್ನು ವಿರುದ್ಧ ದಿಕ್ಕಿನಲ್ಲಿ ಇಟ್ಟು ನಡುವೆ ಒಂದು ಆಯಸ್ಕಾಂತವನ್ನು ಇಟ್ಟಾಗ ಆ ಆಯಸ್ಕಾಂತದ ಮ್ಯಾಗ್ನೆಟಿಕ್ ಶಕ್ತಿಯು ಹೆಚ್ಚಿರುವ ಕಡೆ, ಗುಂಡುಸೂಜಿಯು ಬಂದು ಅದಕ್ಕೆ ಅಂಟಿಕೊಳ್ಳುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಾವು ಗಮನಿಸುತ್ತೇವೆ. ಪ್ರಸ್ತುತ ಮಕ್ಕಳ ಬದುಕಿನಲ್ಲಿ ಮೊಬೈಲ್ ಒಂದು ಮ್ಯಾಗ್ನೆಟಿಕ್ ಶಕ್ತಿಯ ಕೇಂದ್ರದಂತೆ ಭಾಸವಾಗುತ್ತಿದ್ದು
ಮಕ್ಕಳು ಹೆಚ್ಚಾಗಿ ಮೊಬೈಲ್ ನೆಡೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳಲ್ಲಿ ಸೃಜನಶೀಲತೆಯ ಕೊರತೆ ಇಂದಿನ ಪಾಲಕರು ತಮ್ಮ ಮಕ್ಕಳ ಕುರಿತು ಅತಿಯಾದ ಕಾಳಜಿ ತೋರುತ್ತಿದ್ದಾರೆ ಮಕ್ಕಳು ಕೇವಲ ಓದು ಬರಹಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕವಾಗಿ ಮುಂದುವರೆಯಲಿ, ಒಳ್ಳೆಯ ಉದ್ಯೋಗ ಸ್ಥಾನಮಾನಗಳನ್ನು ಪಡೆಯಲಿ ಎಂಬ ಆಶಯವನ್ನು ಹೊಂದಿರುವ ಪಾಲಕರು ತಮ್ಮ ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ತೊಡಗಿಸದೆ ಇರುವುದು ಕೂಡ ಮಕ್ಕಳು ಮೊಬೈಲ್ ನೆಡೆ ಆಕರ್ಷಿತರಾಗಲು ಒಂದು ಕಾರಣವಾಗಿದೆ.
ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಮಕ್ಕಳು ಒಂದೆಡೆ ಕುಳಿತುಕೊಳ್ಳಲು ಮೊಬೈಲ್ ಕಾರಣವಾಗಿದೆ ಆದರೆ ಸದಾ ಮನೆಯ ತುಂಬಾ ಓಡಾಡುತ್ತಾ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಮಕ್ಕಳು ಆರೋಗ್ಯಪೂರ್ಣವಾದ ಹವ್ಯಾಸಗಳನ್ನು ಹೊಂದಿರುವ ಮಕ್ಕಳು ಮೊಬೈಲ್ ನ ಚಟಕ್ಕೆ ಬೀಳುವುದು ಕಡಿಮೆ.
ಕೇವಲ ಒಂದು ತಲೆಮಾರಿನ ಹಿಂದೆ ನಮ್ಮ ಪಾಲಕರು ನಮಗೆ ಅತಿಯಾದ ಶಿಸ್ತು ಕ್ರಮವನ್ನು ತೆಗೆದುಕೊಳ್ಳದೆ ಆಟೋಟಗಳಲ್ಲಿ, ಹೊಲ ಮನೆಯ ದೈಹಿಕ ಶ್ರಮದ ಕೆಲಸಗಳಲ್ಲಿ ಮತ್ತು ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳುವಂತೆ ನಮಗೆ ತರಬೇತಿ ನೀಡುತ್ತಿದ್ದರು. ಇದರ ಪರಿಣಾಮವಾಗಿ ನಮಗೆ ಕೆಲಸ ಕಾರ್ಯಗಳಲ್ಲಿ ಒಂದು ರೀತಿಯ ಶಿಸ್ತು ಮೈಗೂಡಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿನ ಮಕ್ಕಳು ಮನೆಯ ಯಾವ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು ಇರುವ ಒಬ್ಬಿಬ್ಬರು ಮಕ್ಕಳು ತಮ್ಮ ಕೆಲಸಗಳಿಗಾಗಿ ಪಾಲಕರನ್ನು ಅವಲಂಬಿಸುವುದು ನಡೆದುಕೊಂಡು ಬರುತ್ತಿದೆ.
ಹಗರಿಬೊಮ್ಮನಹಳ್ಳಿಯ ಸುಭೋದ ಕಲಿಕಾ ಕೇಂದ್ರದಲ್ಲಿನ ಮಕ್ಕಳಿಗೆ ಅಲ್ಲಿನ ಶಿಕ್ಷಕಿ ಶ್ರೀಮತಿ ರಜನಿ ಯವರು ವಿವಿಧ ರೀತಿಯ ಕಲಿಕಾ ಚಟುವಟಿಕೆಗಳನ್ನು ನೀಡುವ ಮೂಲಕ ಅವರನ್ನು ಕ್ರಿಯಾಶೀಲವಾದ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಈ ಚಟುವಟಿಕೆಗಳು ಮಕ್ಕಳ ಬೆಳವಣಿಗೆಗೆ ಅನುಕೂಲಕರವಾದಂತಹ ಹತ್ತು ಹಲವು ಕಲಿಕೆಗಳನ್ನು ಹೊಂದಿದ್ದು ಮಕ್ಕಳ ಆಸಕ್ತಿಯನ್ನು ಗುರುತಿಸಲು ಮತ್ತು ಅವುಗಳನ್ನು ನಿರಂತರವಾಗಿ ಮಾಡಲು ಪ್ರೇರೇಪಣೆ ನೀಡುತ್ತವೆ. ಇಲ್ಲಿ ನೀಡುವ ನಿರಂತರ ಕಲಿಕಾ ಚಟುವಟಿಕೆಗಳು ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಕಾರಣವಾಗಿದ್ದು ಇಲ್ಲಿ ಕಲಿಯುತ್ತಿರುವ ಮಕ್ಕಳು ಈ ಹಿಂದೆ ಶಾಲೆಯಲ್ಲಿ ಕಲಿಯುವಾಗ ಮಾಡುತ್ತಿದ್ದ ಬಹುತೇಕ ತಪ್ಪುಗಳನ್ನು ಇದೀಗ ಪುನರಾವರ್ತಿಸುತ್ತಿಲ್ಲ ಎಂಬುದು ಸಂತಸದ ವಿಷಯ.. ಇದೀಗ ಸುಬೋಧ ಕಲಿಕಾ ಕೇಂದ್ರದಲ್ಲಿ ಅವರು ತಮ್ಮೆಲ್ಲ ತಪ್ಪುಗಳನ್ನು ಸುಧಾರಿಸಿಕೊಂಡಿದ್ದು ವೈವಿಧ್ಯಮಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕ್ರಿಯಾಶೀಲ ಚಟುವಟಿಕೆಗಳು ಕಲಿಕೆಗೆ ದಾರಿ ಮತ್ತು ಕಲಿಕೆಗೆ ದಾರಿಯಾಗುವ ಮೂಲಕ ಉತ್ತಮ ಅಂಕಗಳನ್ನು ಗಳಿಸುವುದು ಸಾಧ್ಯ ಮತ್ತು ಚಟುವಟಿಕೆಗಳು ಮನಸ್ಸಿನ ಭಯ, ಆತಂಕಗಳನ್ನು ಹೋಗಲಾಡಿಸಿ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರಲ್ಲಿ ಉತ್ಸಾಹ ಸ್ಫೂರ್ತಿಯನ್ನು ತುಂಬುತ್ತವೆ.
ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಅನುಭವವನ್ನು ಗಳಿಸುವ ಮಕ್ಕಳು ಶೈಕ್ಷಣಿಕವಾಗಿ ಜಾಣರಾಗುತ್ತಾರೆ. ಪಚ್ಚ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮಂಚೂಣಿಯಲ್ಲಿ ಇರುತ್ತಾರೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಕ್ರಿಯಾಶೀಲತೆಯ ಲಾಭವನ್ನು ಪಡೆಯುವ ಅವರು ಉತ್ತಮವಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯ ಮಕ್ಕಳು ಮಾಡುವ ಚಟುವಟಿಕೆಗಳು ಅವರ ಉತ್ತಮ ಭವಿಷ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.


ಸಾಮಾನ್ಯ ಮಕ್ಕಳು ಮಾತ್ರವಲ್ಲದೆ ಮಂದಮತಿಯನ್ನು ಹೊಂದಿರುವ ಮಕ್ಕಳನ್ನು ಕೂಡ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಅವರನ್ನು ಬದುಕಿನ ಎಲ್ಲ ಮಗ್ಗುಲುಗಳಿಗೆ ಪರಿಚಯಿಸಬಹುದು. ಕ್ರಿಯಾತ್ಮಕ ಚಟುವಟಿಕೆಗಳು ಮಕ್ಕಳನ್ನು ಸತ್ವ ಭರಿತರನ್ನಾಗಿಸುತ್ತವೆ.
ಸೃಜನಶೀಲ ಚಟುವಟಿಕೆಗಳು ಮಕ್ಕಳನ್ನು ಒತ್ತಡ ಮತ್ತು ಆತಂಕದಿಂದ ಮುಕ್ತರನ್ನಾಗಿಸಿ ಕ್ರಿಯಾಶೀಲರನ್ನಾಗಿಸುತ್ತದೆ ಮಕ್ಕಳು ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದುತ್ತಾರೆ ಜೊತೆಗೆ ಮಕ್ಕಳು ಹೊಂದಾಣಿಕೆಯ ಮನೋಭಾವವನ್ನು,ಸಮಯ ಪ್ರಜ್ಞೆಯನ್ನು ಮತ್ತು ನಿರ್ವಹಣಾ ಸಾಮರ್ಥ್ಯವನ್ನು ತೋರುತ್ತಾರೆ.
ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು. ಮಕ್ಕಳ ಪಾಲಿಗೆ ಪಾಲಕರು, ಅಜ್ಜ ಅಜ್ಜಿಯರು ಆಯಸ್ಕಾಂತವಾಗಬೇಕು, ಮಕ್ಕಳ ಮಾನಸಿಕ ಬೆಳವಣಿಗೆಗೆ ಮತ್ತು ಮೌಲ್ಯಯುತ ಜೀವನಕ್ಕೆ ಅತ್ಯವಶ್ಯಕವಾದ ಕಥೆ,ಕವನಗಳನ್ನು ಹೇಳುವ, ಮಹಾಪುರುಷರ ಚರಿತ್ರೆಗಳನ್ನು ರಾಮಾಯಣ ಮಹಾಭಾರತ ದಂತಹ ಮಹಾಕಾವ್ಯಗಳ ಕಥೆಗಳನ್ನು ಹೇಳುವ ಮೂಲಕ, ಹಾಡುಗಳನ್ನು ಕಲಿಸುವ ನಿಟ್ಟಿನಲ್ಲಿ ಪಾಲಕರು ಕಾರ್ಯನಿರ್ವಹಿಸಬೇಕು. ಪಾಲಕರೇ ಮೊಬೈಲ್ ಹಿಡಿದು ಕುಳಿತರೆ ಮಕ್ಕಳು ಮೊಬೈಲ್ ಹಿಡಿಯದೆ ಮತ್ತಿನ್ನೇನು ಮಾಡಿಯಾರು? ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಪಾಲಕರು ಮಾಡಲೇಬೇಕು.
ಇನ್ನು ಶಾಲೆಗಳಲ್ಲಿ ದೈಹಿಕ ಶಿಕ್ಷಕರು ತಮ್ಮ ತರಗತಿಯನ್ನು ಉಳಿದ ಭಾಷಾ ವಿಷಯಗಳ ಶಿಕ್ಷಕರಿಗೆ ಬಿಟ್ಟುಕೊಡದೆ ತಾವೇ ತೆಗೆದುಕೊಂಡು ಮಕ್ಕಳಿಗೆ ವಿವಿಧ ರೀತಿಯ ಆಟೋಟಗಳಲ್ಲಿ ತೊಡಗಿಸಿಕೊಳ್ಳುವಂತೆ ತರಬೇತಿ ನೀಡಬೇಕು. ಆಟೋಟಗಳ ಮೂಲಕ ಮಕ್ಕಳ ಪಂಚೇಂದ್ರಿಯಗಳು ಮತ್ತು ಕೈಕಾಲುಗಳು ಸರಳವಾಗಿ ಕಾರ್ಯನಿರ್ವಹಿಸುತ್ತವೆ. ಮಕ್ಕಳ ಮೆದುಳಿನ ಶಕ್ತಿ ಮತ್ತು ದೈಹಿಕ ಚಾಲನಾ ಶಕ್ತಿ ಜಾಗೃತಗೊಳ್ಳುತ್ತದೆ. ಮಕ್ಕಳ ಕಲಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಈ ಎಲ್ಲ ವಿಷಯಗಳು ಸಹಕಾರಿ ಆಗುತ್ತವೆ.. ಮೊಬೈಲ್ ನ ಚಟ ತಂತಾನೇ ಹಿಂದೆ ಬೀಳುತ್ತದೆ..

BIJAPUR NEWS public udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ

ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..

ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಎಸ್ಸೆಸ್ಸೆಲ್ಸಿ: ಚಿಮ್ಮಡ ವಿದ್ಯಾರ್ಥಿಗಳ ಉತ್ತಮ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ
    In ವಿಶೇಷ ಲೇಖನ
  • ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಚಿಮ್ಮಡ ವಿದ್ಯಾರ್ಥಿಗಳ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಆಲಮೇಲ ಗ್ರಾಮೀಣಾಭಿವೃದ್ಧಿ ಶಾಲೆಯ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಮೂಲಾಧಾರ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಕಲಕೇರಿ ಆದರ್ಶ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಪಾವಿತ್ರ್ಯತೆ, ಪರಿಶುದ್ಧತೆ ಕಂಡುಕೊಳ್ಳುವ ಹಜ್ ಯಾತ್ರೆ :ನದಾಫ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಆಲಮಟ್ಟಿ ಎಂಎಚ್ಎಂ ಶಾಲೆಗೆ ಶೇ.೯೭.೫೯ ಫಲಿತಾಂಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.