ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೮೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೫೬, ಪ್ರಥಮ ಶ್ರೇಣಿ ೨೬, ದ್ವಿತೀಯ ಶ್ರೇಣಿ ೦೨ ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೧೦೦ಕ್ಕೆ ೧೦೦ರಷ್ಟಾಗಿದೆೆ.
ಅನುಸುಯಾ ಹಿರೇಮಠ ೬೨೫ ಅಂಕಗಳಿಗೆ ೬೧೫ (ಶೇ.೯೮.೪೦), ಅಂಕಗಳು ಪಡೆದು ಪ್ರಥಮ ಸ್ಥಾನ, ವೈಷ್ಣವಿ ರೇವೂರ ೬೧೩ (ಶೇ.೯೮.೦೮), ದ್ವಿತೀಯ, ಶಿವಾನಿ ಬಿರಾದಾರ ೬೦೮ (ಶೇ.೯೭.೨೮) ತೃತೀಯ, ಸಂಜೀವ ಬಮ್ಮಣ್ಣಿ ೬೦೬ (ಶೇ.೯೬.೯೬), ವೇದಾ ಬಾಗಲಕೋಟ ೬೦೬ (೯೬.೯೬%), ಅಪೇಕ್ಷಾ ಹುಗ್ಗಿ ೬೦೧ (೯೬.೯೬%), ಆದರ್ಶ ಚಾಂದಕವಟೆ ೫೯೯ (೯೫.೮೪%), ಪೂರ್ವಿ ಪಟ್ಟಣಶೆಟ್ಟಿ ೫೯೮ (೯೫.೬೮%), ಶ್ರೇಯಾ ಅಗಸರ ೫೯೮ (೯೫.೬೮%), ಸುಕೃತಾ ತೋಟದ ೫೯೮ (೯೫.೬೮%), ಪ್ರಜ್ವಲ ಕಂಗಾಳ ೫೯೭ (೯೫.೫೨%), ವಿಶ್ವಾಸ ಬಗಲಿ ೫೯೭ (೯೫.೫೨%), ದುಂಡಮ್ಮ ಬಿರಾದಾರ ೫೯೬ (೯೫.೩೬%), ಪೂರ್ವಿ ಪಾಟೀಲ ೫೯೬ (೯೫.೩೬%), ಹರ್ಷಿತಾ ವಾಗಮಂಡಿ ೫೯೪ (೯೫.೦೪%), ವೈಷ್ಣವಿ ಜಾಬಾನೂರ ೫೯೪ (೯೫.೦೪%), ವಿದ್ಯಾಶ್ರೀ ನಾಯಕ ೫೯೪ (೯೫.೦೪%) ಅಂಕಗಳನ್ನು ಪಡದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ, ಮುಖ್ಯ ಗುರುಮಾತೆ ಎಸ್.ಆಯ್.ಅಸ್ಕಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

