ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಎಚ್‌ಟಿಕೆ ಚೌಧರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪರೀಕ್ಷೆಗೆ ಕುಳಿತ ೪೫ ವಿದ್ಯಾರ್ಥಿಗಳಲ್ಲಿ ೩೧ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೧೪ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಶೃತಿ ಜೋಗೂರ ಶೇ.೯೮.೭, ಶಂಕ್ರೇಮ್ಮ ನಾಟಿಕಾರ ಶೇ.೯೮.೨, ಸ್ನೇಹಾಂಜಲಿ ನಾಯ್ಕೊಡಿ ಶೇ.೯೮.೨, ಮುತ್ತುರಾಜ ಕುಂಬಾರ ಶೇ.೯೮.೨, ಶರಥ ಅತನೂರ ಶೇ.೯೭.೯, ಮಲ್ಲನಗೌಡ ಧೂಮಗೊಂಡ ಶೇ.೯೭.೯, ಭುವನೇಶ್ವರಿ ಸಂಗೊಂಡ ಶೇ.೯೭.೮, ಸಂಗನಬಸು ಕ್ಯಾಗಾವಿ ಶೇ.೯೭.೩, ಗುರುರಾಜ ನಂದೂರ ಶೇ.೯೭.೩, ಭರತಸಜ್ಜನ ಶೇ.೯೬.೮, ಚೇತನ ಬಿರಾದಾರ ಶೇ.೯೬.೨, ಶಿವರಾಯ ಮೋಕಾಸಿ ಶೇ.೯೬.೨, ವರ್ಷಾ ಬಿರಾದಾಋ ಶೇ.೯೫.೮, ಅಂಬಿಕಾ ನಾವಿ ಶೇ.೯೫.೭, ಶರಣ ಮ್ಮ ಕುಂಬಾರ ಶೇ.೯೫.೨, ಅಜಯ ಅಂದೋಡಗಿ ಶೇ.೯೫, ಗಂಗಾಧರ ಪೂಜಾರಿ ಶೇ.೯೪.೯, ಶಿವರಾಜ ಕೆಂಚಗೊಂಡ ಶೇ.೯೪.೭, ಯಲ್ಲಾಲಿಂಗ ನಗನೂರ ಶೇ.೯೪.೬, ಶಂಕರಲಿಂಗ ಅರಳಗುಂಡಗಿ ಶೇ.೯೪.೧, ಲಕ್ಷ್ಮಿ ನಾವಿ ಶೇ.೯೩.೮ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕ ಪ್ರಕಾಶ ಚೌಧರಿ, ಆಢಳಿತಾಧಿಖಾರಿ ಮಹಾಂತೇಶ ಚೌಧರಿ, ಮುಖ್ಯಗುರು ವಿಶ್ವನಾಥ ಯಾತನೂರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತ ಪಡೆಸಿದ್ದಾರೆ.

