Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಿಸರ್ಗದಲ್ಲಿ ದೇವರಿದ್ದಾನೆ. ಆದರೆ, ಗೋಚರಿಸುವುದಿಲ್ಲ. ಹಾಲಿನಲ್ಲಿ ತುಪ್ಪವಿದ್ದರೂ ಕಾಣುವುದಿಲ್ಲ. ಹಾಲಿಗೆ ಸಂಸ್ಕಾರ ಕೊಟ್ಟಾಗ ತುಪ್ಪವಾಗುವುದು. ಹಾಗೆಯೇ ಸಂಸ್ಕಾರವಂತರಾದರೆ ದೇವರನ್ನು ಅನುಭವಿಸಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಚಿಂತನೆಯ ಮೂಲಕ ಎಲ್ಲರನ್ನೂ ಪುನೀತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸದ್ಭಾವನಾ ಪಾದಯಾತ್ರೆ ಕೈಗೊಂಡು ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಸದ್ಗುಣಗಳ ದೀಕ್ಷೆ ನೀಡುವ ಶ್ರೀಮಠದ ಸತ್ಕಾರ್ಯ ಶ್ಲಾಘನೀಯವಾಗಿದೆ. ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ, ಸಾಮಾಜಿಕ ವೈವಿಧ್ಯತೆಯ ಬೇರುಗಳನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಉದಾರೀಕರಣ, ಖಾಸಗೀಕರಣ, ಜಾಗತಿಕರಣದ ಸವಾಲುಗಳನ್ನು ಎದುರಿಸಿ, ಭಾರತೀಯರಾದ ನಾವು ‘ವಿಶ್ವಪ್ರಜೆ’ ಗಳಾಗಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ಬುಧವಾರದಂದು ಅರಕೇರಿಯ ಜ್ಞಾನ ಜ್ಯೋತಿ ವಸತಿ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಶಾಖೆಯಿಂದ ಶ್ರೀ ರಾಮನವಮಿ ಅಂಗವಾಗಿ ಹಮ್ಮಿಕೊಂಡ ಭಾರತೀಯ ಶಿಕ್ಷಣ ಮಂಡಲದ 56 ನೇ ಸಂಸ್ಥಾಪನ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ, ವಿಶ್ಲೇಷಣಾತ್ಮಕ, ಸೃಜನಶೀಲ ಕೌಶಲ್ಯಗಳ ಜತೆಗೆ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಜ್ಞಾನ, ಶಿಸ್ತು, ಉತ್ಸಾಹ, ನೈತಿಕತೆ ಮೂಲಕ ಆವಿಷ್ಕಾರ, ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.ಮುಖ್ಯ ವಕ್ತಾರ ಸಿದ್ದು ಮದರಖಂಡಿ ಮಾತನಾಡಿ,ಪ್ರಾಚೀನ ಭಾರತದ ಶಿಕ್ಷಣವು ವೇದಗಳಿಂದ ಪ್ರಭಾವಿತವಾಗಿದೆ. ಉದ್ಯೋಗ ಪಡೆಯುವದಕ್ಕಾಗಿ ಮಾತ್ರ ಓದು-ಬರಹ ಬೇಡ. ದೇಶದ ಬೇರು ಗಟ್ಟಿಗೊಳಿಸಲು ಜ್ಞಾನಾರ್ಜನೆ ಅಗತ್ಯ. ಹಿರಿಯರನ್ನು ಗೌರವಿಸುವ ಜತೆಗೆ ಎಲ್ಲರನ್ನು ನಿರಂತರವಾಗಿ ಪ್ರೀತಿಸುವ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪದವಿ ಕಾಲೇಜುಗಳ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಕಡ್ಡಾಯ ಮಾನ್ಯತೆ ಪಡೆಯಬೇಕು ಎಂದ ಸುರಪುರ ಶ್ರೀ ಪ್ರಭು ಕಾಲೇಜಿನ ಪ್ರಾಂಶುಪಾಲ ಡಾ, ಎಂಡಿ ವಾರಿಸ್ ಹೇಳಿದರು.ಪಟ್ಟಣದ ಮಾತೋಶ್ರೀ ಗಂಗಾಬಾಯಿ ಶಾಂತಗೌಡ ಪೊಲೀಸ್ .ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳ ನ್ಯಾಕ್ ಮಾನ್ಯತೆ ಪಡೆಯುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನೆರವಾಗುತ್ತದೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ಸಿ.ವಿ.ಕಲಬುರ್ಗಿ, ಹಾಗೂ ಡಾ, ಗೌಡಪ್ಪಗೌಡ ಪಾಟೀಲ್ ಈರ್ವರು ವಿಶೇಷ ಉಪನ್ಯಾಸ ನೀಡಿದರು.ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿಬ್ಬಂದಿ ವರ್ಗ ಮತ್ತು ಸ್ಥಳಿಯ ಮುಖಂಡರ ಸಹಕಾರದೊಂದಿಗೆ ನ್ಯಾಕ್ ದಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ ವ್ಯಕ್ತಪಡಿಸಿದರು.ದೈಹಿಕ ನಿರ್ದೇಶಕ ಪ್ರಸಾದ್ ಭಂಡಾರಿ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಬಸಮ್ಮ ಎಸ್, ಡಾ. ಪೂಜಾ ಹೊನ್ನುಟಗಿ, ಮಲ್ಲಿಕಾರ್ಜುನ ಮರಡ್ಡಿ, ನಸ್ರೀನ್ ತಾಜ್,…
ದಾವಣಗೆರೆಯಲ್ಲಿ ಪುಟ್ಟರಾಜರ ಅಭಿಮಾನಿ ಭಕ್ತರ ೩ನೆಯ ಸಮಾವೇಶ ಉದಯರಶ್ಮಿ ದಿನಪತ್ರಿಕೆ ದಾವಣಗೆರೆ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಕರ್ನಾಟಕ ಮಾತ್ರ ಸೀಮಿತವಾಗದೆ ತಮ್ಮ ಸಂಗೀತದ ಮೂಲಕ ಇಡೀ ವಿಶ್ವಕ್ಕೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ ಅವರು ಸಂಗೀತದ ಎಲ್ಲಾ ಪ್ರಕಾರಗಳಲ್ಲಿ ಅಪಾರವಾದ ಜ್ಞಾನ ಮತ್ತು ಪ್ರೌಢಿಮೆಯನ್ನು ಸಾಧಿಸಿದ್ದರು ಎಂದು ಸಂಗೀತ ಭಾರತಿ ಸಂಸ್ಥಾಪಕ ಹೆಚ್. ಪಿ. ಕಲ್ಲಂಭಟ್ ಬಣ್ಣಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಾ. ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಗದಗ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂಜ್ಯ ಗುರು ಡಾ. ಪಂಡಿತ ಪುಟ್ಟರಾಜರ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿವರು ಅವರು ಮಾತನಾಡಿದರು.ಗವಾಯಿಗಳ ಸಂಗೀತ ಕೇವಲ ಮನರಂಜನೆಯನ್ನು ನೀಡದೆ ಒಂದು ರೀತಿಯ ದಿವ್ಯ ಅನುಭೂತಿಯನ್ನು ನೀಡುವ ಶಕ್ತಿಯನ್ನು ಹೊಂದಿತ್ತು. ಹೀಗಾಗಿಯೇ ಅವರ ಕೀರ್ತಿ ವಿಶ್ವದಾದ್ಯಂತ ಪ್ರಸರಿಸಿದೆ. ಪ್ರಸ್ತುತ ರಾಜ್ಯದ ಪ್ರತಿ ಗ್ರಾಮ ತಾಲೂಕು ಮತ್ತು ಜಿಲ್ಲೆಗಳಲ್ಲಿ ಪುಟ್ಟರಾಜ ಗವಾಯಿಗಳವರ ಹೆಸರಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿರುವುದು ಅವರ ಹಿರಿಮೆ ಸಾಕ್ಷಿಯಾಗಿದೆ.…
ಚಿಂತನೆ- ಡಾ.ಸಂಗಮೇಶ ಕಲಹಾಳಶರಣ ತತ್ವ ಚಿಂತಕರುಕೊಪ್ಪಳ ಉದಯರಶ್ಮಿ ದಿನಪತ್ರಿಕೆ ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,ಭಕ್ತಿ ಸಾಧ್ಯವಾಗದು ನಾನೇವೆನಯ್ಯಾಅನು ನಿಮ್ಮ ಮನಂಬೊಗುವನ್ನಕ್ಕ,ನೀವೆನ್ನ ಮನಂಬೊಗುವನ್ನಕ್ಕಕಾಯಗುಣಂಗಳ ಕಳೆದವರಿಗೆಶರಣೆಂಬೆ ಕೂಡಲಸಂಗಮದೇವಾ.(ಬಸವಣ್ಣ, ಸಮಗ್ರ ವಚನ ಸಂಪುಟ : 1 ವಚನದ ಸಂಖ್ಯೆ : 511)ವಚನದಲ್ಲಿನ ಶಬ್ದಾರ್ಥಗಳುಅಭ್ಯಾಸ : ಸಾಧನೆವರ್ತನೆ : ನಿರಂತರ ಅನುಕರಣೆ, ಪಾಲಿಸುವ ಕ್ರಮವರ್ತನೆಗಳು : ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಒಳಗೊಂಡಿರುತ್ತವೆ.ಜಪ : ಸ್ತುತಿ, ಅತೀಂದ್ರಿಯ ಉಚ್ಚಾರಣೆ, ಭಕ್ತಿ ಉದ್ದೇಶಕ್ಕಾಗಿ ಚಿಂತನೆ, ಬಯಸಿದ ವಿಷಯದ ನಿರಂತರ ಚಿಂತನೆ, ಪದೇ ಪದೇ ಪಠಿಸುವುದು.ತಪ : ಸಾಧನೆಗಾಗಿ ದೃಢತೆ, ಕಠಿಣ ಆಚರಣೆ, ಸಮಚಿತ್ತತೆ, ಆಂತರಿಕ ನೆನಹು.ಧ್ಯಾನ : ಒಳನೋಟ, ಆಳವಾದ ಏಕಾಗ್ರತೆ, ಪ್ರಾಣದಲ್ಲಿ ಮಗ್ನತೆ.ಶಿವಯೋಗ : ಪರಶಿವನೇ ಪರತತ್ವವೆಂಬ ಸಾಧಕನ ಮಗ್ನತೆ. ಜೀವಚೈತನ್ಯವು ವಿಶ್ವಚೈತನ್ಯದಲ್ಲಿ ಬೆರೆಯುವುದು, ಜೀವಶಕ್ತಿಯು ವಿಶ್ವಶಕ್ತಿಯೊಂದಿಗೆ ಕೂಡುವುದು, ಪರತತ್ವದಲ್ಲಿ ಒಂದಾಗುವುದು.ಭಕ್ತಿ : ಶುದ್ಧಅಂತಃಕರಣ, ಪರಶಿವನ ಉಪಾಸನೆ, ಪರತತ್ವದಲ್ಲಿ ನಿಷ್ಠೆ, ದೇವನಲ್ಲಿ ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಏಕತೆ ಸಾಧಿಸುವುದು.ಮನಂಬೊಗುವನ್ನಕ್ಕ : ಮನಸ್ಸು ಲಯವಾಗುವಿಕೆ.ವಚನ ವಿಶ್ಲೇಷಣೆಅಭ್ಯಾಸ…
ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಮಿರ್ಜಿ ಅಣ್ಣಾರಾಯ ಎಂಬುದು ಹೊಸಗನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು. ಅನುಭವಿ ಶಿಕ್ಷಕ, ಮಿತಭಾಷಿ, ಆದರ್ಶಜೀವಿ, ಸತತಾಭ್ಯಾಸಿ, ಸಾಹಿತ್ಯಕಾರ – ಈ ಪಂಚ ಸೂತ್ರಗಳಲ್ಲಿ ಹಿರಿಯ ಸಾಹಿತಿ ಮಿರ್ಜಿ ಅಣ್ಣಾರಾಯರ ಒಟ್ಟು ವ್ಯಕ್ತಿತ್ವ ಹರಳುಗೊಳ್ಳುತ್ತದೆ.ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 125 ಕಿ.ಮೀ ದೂರದ ಹಳ್ಳಿ ಸೇಡಬಾಳ ಮಿರ್ಜಿ ಅಣ್ಣಾರಾಯರ ಕಾರ್ಯಕ್ಷೇತ್ರ. ಅಣ್ಣಾರಾಯರ ಹೆಸರಿನಲ್ಲಿರುವ ಮಿರ್ಜಿ ಎಂಬುದು ಅಣ್ಣಾರಾಯರ ಪೂರ್ವಜರಿದ್ದ ಊರು. ಸೇಡಬಾಳ ಕರ್ನಾಟಕದ ಜನಮನದ ನೆನಪಿನಲ್ಲಿ ನಿಂತಿರುವುದು ಮಿರ್ಜಿ ಅಣ್ಣಾರಾಯರಿಂದ. ಬೆಳಗಾವಿಯಂತೆಯೇ, ಆ ಜಿಲ್ಲೆಗೆ ಸೇರಿದ ಸೇಡಬಾಳವೂ ಕರ್ನಾಟಕದ ಗಡಿಯಲ್ಲಿದೆ. ಈ ಗಡಿಯನ್ನು ಕರ್ನಾಟಕದ ಸೆರಗಿನೊಳಗೇ ನಿಲ್ಲುವಂತೆ ಮೂರುವರೆ ದಶಕಗಳ ಕಾಲ ದುಡಿದವರು, ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸಿದವರು ಅಣ್ಣಾರಾಯರು.ತಮ್ಮ ಹಡೆದವರನ್ನು ಕುರಿತು ಅಣ್ಣಾರಾಯರು ಹೇಳುತ್ತಾರೆ, “ನನ್ನ ತಂದೆ ತಾಯಂದಿರು ಅಕ್ಷರಗಳನ್ನು ಕಲಿತವರಲ್ಲ, ಆದರೆ ತುಂಬಾ ಸುಸಂಸ್ಕೃತರು”. ಹೀಗೆ ಶ್ರೀಸಾಮಾನ್ಯರ ಮನೆತನದಲ್ಲಿ 1918ರ ಆಗಸ್ಟ್ 25ರಂದು ಜನಿಸಿದ ಅಣ್ಣಾರಾಯರು ತಮ್ಮ 57 ವರ್ಷಗಳ ಜೀವಿತ ಕಾಲದಲ್ಲಿ ಮಾಡಿದ್ದು ಮಾತ್ರ…
ರಚನೆಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಐವತ್ತು ವರ್ಷದ ಹಿಂದೆಶಾಲೆ ಬಿಟ್ಟು ನಾನುಸಂಜೆ ಮನೆಗೆ ಬರುವಾಗಹಾವಾಡಿಗ ಪುಂಗಿ ಊದಿತಟ್ಟೆಯೊಡ್ಡಿ ಭಿಕ್ಷೆ ಬೇಡುತ್ತಿದ್ದುದುನನಗಿನ್ನೂ ನೆನಪಿದೆ ಬೆಳಿಗ್ಗೆ ಮನೆ ಮುಂದೆದುರುಗ ಮುರುಗಿ ಚಾಟಿ ಬೀಸಿಮೈ ಮೇಲೆ ಬಾಸು೦ಡೆ ಎಬ್ಬಿಸಿಬಗ್ಗಿ ದೇವತೆಗೆ ಕೈಮುಗಿದುಜೋಳ ಕಾಳು ಮರದ ತುಂಬಾಅಕ್ಕಿ ಗೋದಿಗೆ ಜೋಳಿಗೆ ಒಡ್ಡಿದ್ದುನನಗಿನ್ನೂ ನೆನಪಿದೆ ಹೆಣ್ಣು ಮಕ್ಕಳಿಗೆ ಮುತ್ತು ಕಟ್ಟಿಬೇವಿನ ಸೊಪ್ಪು ಹೊದಿಸಿಕೋಣ ಕಡೆದು ಊಟ ಹಾಕಿದೇವಿಯ ಹೆಸರಿನಲ್ಲಿಶ್ರೀಮಂತರ ತೋಟದ ಮನೆಗೆಹಾದರಕ್ಕೆ ತಳ್ಳುವುದುನನಗಿನ್ನೂ ನೆನಪಿದೆ ಗುಡಿಯ ಮುಂದೆ ಮುಳ್ಳಾವುಗೆ ಹತ್ತಿಗಲ್ಲದಲ್ಲಿ ಮೈಗೆ ಅಸ್ತ್ರವ ಹಾಕಿದೇಹದಲ್ಲಿ ಚುಚ್ಚಿ ರಕ್ತ ಸುರಿಸಿಕೆಂಡದ ಗುಂಡದಲ್ಲಿ ಬರಿಗಾಲಿನಲಿದೇವರ ಹೊತ್ತು ಪಾದ ಸುಡಿಸಿಉನ್ಮಾದ ಉತ್ಸಾಹದಿ ಕುಣಿದದ್ದುನನಗಿನ್ನೂ ನೆನಪಿದೆ ಜಾತ್ರೆ ದೇವರ ಉತ್ಸವದ ನೆಪದಲ್ಲಿತೇರು ಎಳೆದು ಕಾಯಿ ತುರಾಡಿದುಡ್ಡು ಎತ್ತಿ ಅಡ್ಡ ಪಲ್ಲಕ್ಕಿಸಾರೊಟಗಿ ಮೆರವಣಿಗೆನಾಟಕ ಮೋಜು ಮಸ್ತಿಓಕುಳಿ ಕುಸ್ತಿ ಎತ್ತಿನ ಓಟನನಗಿನ್ನೂ ನೆನಪಿದೆ ಬದಲಾವಣೆ ಪರಿವರ್ತನೆಭರವಸೆಯ ಭಾಷಣಬಡವರ ಬಗೆಗಿನ ಕಾಳಜಿಉದ್ಯೋಗ ಖಾತ್ರಿ ಹಲವು ಯೋಜನೆಸಬ್ ಕಾ ಸಾಥ್ ಸಬ್ ಕಾ ವಿಕಾಸಗರೀಭಿ ಹಠಾವೊ ಘೋಷಣೆನನಗಿನ್ನೂ ನೆನಪಿದೆ
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಹಾಗೂ ದೀ ಪ್ರೆಸಿಡೆನ್ಸಿ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ವತಿಯಿಂದ ನಗರದ ಜ್ಞಾನ ಯೋಗಾಶ್ರಮದಲ್ಲಿ ಗುಬ್ಬಚ್ಚಿ ಉಳಿಸಿ ಎಂಬ ಅಭಿಯಾನವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಡಾ.ಸುಮಾ ಬೋಳ ರೆಡ್ಡಿ ಮಾತನಾಡಿ ವಿದ್ಯಾರ್ಥಿಗಳ ಅಭಿವೃದ್ಧಿ (ಎಸ್‌ಎಫ್‌ಡಿ) ೧೯೯೦ ರಲ್ಲಿ ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ಅದರ ಸರಿಯಾದ ರೂಪದಲ್ಲಿ ಉತ್ತೇಜಿಸಲು ಪ್ರಾರಂಭಿಸಿತು. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ, ಪ್ಲಾಸ್ಟಿಕ್ ಮರುಬಳಕೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಅರಣ್ಯ ಸಂರಕ್ಷಣೆ ಇತ್ಯಾದಿಗಳಂತಹ ಪರಿಸರ ಸಮಸ್ಯೆಗಳಲ್ಲದೆ, ವ್ಯಕ್ತಿ, ಸಮಾಜ, ರಾಷ್ಟ್ರ ಮತ್ತು ಮಾನವಕುಲದ ಸಾಂಸ್ಕೃತಿಕ, ಆರ್ಥಿಕ ಮತ್ತು ಭೌತಿಕ (ಭೌತಿಕ) ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸುವ ಸಮಗ್ರ ಅರ್ಥದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳೂ ಸಹ ವ್ಯವಹರಿಸಲ್ಪಡುತ್ತವೆ, ಇದರಿಂದಾಗಿ ಅಭಿವೃದ್ಧಿಯ ಅರ್ಥವು ಅದರ ಸರಿಯಾದ ಚೈತನ್ಯದಲ್ಲಿ ಅರ್ಥೈಸಲ್ಪಟ್ಟಿದೆ. ಆಗ ಪ್ರಶ್ನೆ ಉದ್ಭವಿಸುತ್ತದೆ: ಅಭಿವೃದ್ಧಿ ಎಂದರೇನು? ಅಭಿವೃದ್ಧಿ ಯ ಸರಿಯಾದ ಅರ್ಥವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಅಭಿವೃದ್ಧಿ ಯ ಸರಿಯಾದ ಪರಿಕಲ್ಪನೆಯನ್ನು ಸಾಮಾನ್ಯವಾಗಿ…
ಕನ್ನಡದ ಅನನ್ಯ ಕೈಂಕರ್ಯ ಗೈಯುತ್ತಿರುವ ತೊದಲಬಾಗಿ ಶಿಕ್ಷಕ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಕರುನಾಡು ಕನ್ನಡ ಕಲಾ ಸಿರಿ ಬಳಗ(ರಿ), ಎ.ಜಿ.ಎಸ್.ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರು ಕೊಡಮಾಡುವ “ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ” ಕನ್ನಡ ಪಂಡಿತ ಕ್ರಿಯಾಶೀಲ ಶಿಕ್ಷಕ ಶಿವಾನಂದ ಡಿ.ತೇಲಿ ಅವರಿಗೆ ಲಭಿಸಿದೆ.ಪ್ರಶಸ್ತಿ ಪುರಸ್ಕೃತ ಶಿವಾನಂದ ತೇಲಿ ಸಮೀಪದ ತೊದಲಬಾಗಿಯ ಶ್ರೀ ಮಲ್ಲಿಕಾರ್ಜುನ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ) ದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ ಭಾಷೆಯ ಉಳಿವನ್ನೇ ತಮ್ಮ ಉಸಿರಾಗಿಸಿಕೊಂಡು ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹಲವಾರು ಕನ್ನಡಪರ ಅಭಿವೃದ್ಧಿ ಕೈಂಕರ್ಯಗಳನ್ನು ಗೈಯುತ್ತಾ ಬಂದಿರುವ ಇವರು ಕನ್ನಡ ಕ್ರಿಯಾಶೀಲ ಶಿಕ್ಷಕರಾಗಿ ಮಿನುಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡತನದ ಸವಿರಸಗವಳವನ್ನು ಸೃಜಿಸಿದ್ದಾರೆ. ಶಿವಾನಂದ ತೇಲಿ ಅವರು ಅನನ್ಯತೆಯಿಂದ ಸಲ್ಲಿಸಿರುವ ಅಮೋಘಯುತ ಅನುಪಮ ಸೇವೆಯನ್ನು ಸಂಘಟನೆ ಗುರುತಿಸಿ ಗೌರವಪೂರ್ವಕವಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.ಈಚೆಗೆ ಕರುನಾಡು ಕನ್ನಡ ಕಲಾಸಿರಿ ಬಳಗ, ಎ.ಜಿ.ಎಸ್.ಚಾರಿಟೇಬಲ್ ಟ್ರಸ್ಟಿನ ನಾಲ್ಕನೇ ವರ್ಷದ…
ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ | ನಂದಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಏ.೧೮ ರಿಂದ ೨೦ ರವರೆಗೆ ಪುರಾಣ ಮಹಾಮಂಗಲ, ಶಿವಾನುಭವ ಚಿಂತನ, ನಂದಿಸಿರಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ನಂದಿಮಠದ ವೀರಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ.೧೮ ರಂದು ಬೆಳಗ್ಗೆ ೮ ಗಂಟೆಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಗುವದು. ಜಾತ್ರಾಮಹೋತ್ಸವದಂಗವಾಗಿ ಮಾ.೩೦ ರಿಂದ ಚಡಚಣದ ಷಡಕ್ಷರ ಸ್ವಾಮೀಜಿಯವರಿಂದ ಪ್ರತಿದಿನ ಸಂಜೆ ಹಮ್ಮಿಕೊಂಡಿದ್ದ ಬಸವ ಮಹಾಪುರಾಣದ ಮಹಾಮಂಗಲತೋತ್ಸವ ಸಂಜೆ ೭ ಗಂಟೆಗೆ ಜರುಗಲಿದೆ. ಸಾನಿಧ್ಯವನ್ನು ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ವೀರಸಿದ್ದ ಸ್ವಾಮೀಜಿ ವಹಿಸುವರು. ಬಸವನಬಾಗೇವಾಡಿಯ…
