ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪದವಿ ಕಾಲೇಜುಗಳ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಕಡ್ಡಾಯ ಮಾನ್ಯತೆ ಪಡೆಯಬೇಕು ಎಂದ ಸುರಪುರ ಶ್ರೀ ಪ್ರಭು ಕಾಲೇಜಿನ ಪ್ರಾಂಶುಪಾಲ ಡಾ, ಎಂಡಿ ವಾರಿಸ್ ಹೇಳಿದರು.
ಪಟ್ಟಣದ ಮಾತೋಶ್ರೀ ಗಂಗಾಬಾಯಿ ಶಾಂತಗೌಡ ಪೊಲೀಸ್ .ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳ ನ್ಯಾಕ್ ಮಾನ್ಯತೆ ಪಡೆಯುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನೆರವಾಗುತ್ತದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ಸಿ.ವಿ.ಕಲಬುರ್ಗಿ, ಹಾಗೂ ಡಾ, ಗೌಡಪ್ಪಗೌಡ ಪಾಟೀಲ್ ಈರ್ವರು ವಿಶೇಷ ಉಪನ್ಯಾಸ ನೀಡಿದರು.
ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿಬ್ಬಂದಿ ವರ್ಗ ಮತ್ತು ಸ್ಥಳಿಯ ಮುಖಂಡರ ಸಹಕಾರದೊಂದಿಗೆ ನ್ಯಾಕ್ ದಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ ವ್ಯಕ್ತಪಡಿಸಿದರು.
ದೈಹಿಕ ನಿರ್ದೇಶಕ ಪ್ರಸಾದ್ ಭಂಡಾರಿ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಬಸಮ್ಮ ಎಸ್, ಡಾ. ಪೂಜಾ ಹೊನ್ನುಟಗಿ, ಮಲ್ಲಿಕಾರ್ಜುನ ಮರಡ್ಡಿ, ನಸ್ರೀನ್ ತಾಜ್, ಶಶಿಕುಮಾರ್, ಸುಮಾ ಎಚ್ಚ್, ಡಾ ಮಲ್ಲಣ್ಣ ಬಿಳೇಬಾವಿ, ಡಾ ಶರಣಪ್ಪ ಸಾಹುಕಾರ, ಡಾ ಉಪೇಂದ್ರ ನಾಯಕ್, ಮಾಸುಮಲಿ ನಾಸಿ, ಸಂಗಮೇಶ ಪಟ್ಟಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಡಾ.ಮಂಜುನಾಥ ಚೆಟ್ಟಿ ನಿರೂಪಿಸಿದರು, ಡಾ ಸುರೇಶ ಪಾಟೀಲ ಸ್ವಾಗತಿಸಿದರು ಬಸವರಾಜ ಪಾಟೀಲ್ ವಂದಿಸಿದರು.

