Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬಸವಣ್ಣನವರ ವಚನ ವಿಶ್ಲೇಷಣೆ
ವಿಶೇಷ ಲೇಖನ

ಬಸವಣ್ಣನವರ ವಚನ ವಿಶ್ಲೇಷಣೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಂತನೆ
– ಡಾ.ಸಂಗಮೇಶ ಕಲಹಾಳ
ಶರಣ ತತ್ವ ಚಿಂತಕರು
ಕೊಪ್ಪಳ

ಉದಯರಶ್ಮಿ ದಿನಪತ್ರಿಕೆ

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,
ಭಕ್ತಿ ಸಾಧ್ಯವಾಗದು ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ,
ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ
ಶರಣೆಂಬೆ ಕೂಡಲಸಂಗಮದೇವಾ.
(ಬಸವಣ್ಣ, ಸಮಗ್ರ ವಚನ ಸಂಪುಟ : 1 ವಚನದ ಸಂಖ್ಯೆ : 511)
ವಚನದಲ್ಲಿನ ಶಬ್ದಾರ್ಥಗಳು
ಅಭ್ಯಾಸ : ಸಾಧನೆ
ವರ್ತನೆ : ನಿರಂತರ ಅನುಕರಣೆ, ಪಾಲಿಸುವ ಕ್ರಮ
ವರ್ತನೆಗಳು : ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಒಳಗೊಂಡಿರುತ್ತವೆ.
ಜಪ : ಸ್ತುತಿ, ಅತೀಂದ್ರಿಯ ಉಚ್ಚಾರಣೆ, ಭಕ್ತಿ ಉದ್ದೇಶಕ್ಕಾಗಿ ಚಿಂತನೆ, ಬಯಸಿದ ವಿಷಯದ ನಿರಂತರ ಚಿಂತನೆ, ಪದೇ ಪದೇ ಪಠಿಸುವುದು.
ತಪ : ಸಾಧನೆಗಾಗಿ ದೃಢತೆ, ಕಠಿಣ ಆಚರಣೆ, ಸಮಚಿತ್ತತೆ, ಆಂತರಿಕ ನೆನಹು.
ಧ್ಯಾನ : ಒಳನೋಟ, ಆಳವಾದ ಏಕಾಗ್ರತೆ, ಪ್ರಾಣದಲ್ಲಿ ಮಗ್ನತೆ.
ಶಿವಯೋಗ : ಪರಶಿವನೇ ಪರತತ್ವವೆಂಬ ಸಾಧಕನ ಮಗ್ನತೆ. ಜೀವಚೈತನ್ಯವು ವಿಶ್ವಚೈತನ್ಯದಲ್ಲಿ ಬೆರೆಯುವುದು, ಜೀವಶಕ್ತಿಯು ವಿಶ್ವಶಕ್ತಿಯೊಂದಿಗೆ ಕೂಡುವುದು, ಪರತತ್ವದಲ್ಲಿ ಒಂದಾಗುವುದು.
ಭಕ್ತಿ : ಶುದ್ಧಅಂತಃಕರಣ, ಪರಶಿವನ ಉಪಾಸನೆ, ಪರತತ್ವದಲ್ಲಿ ನಿಷ್ಠೆ, ದೇವನಲ್ಲಿ ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಏಕತೆ ಸಾಧಿಸುವುದು.
ಮನಂಬೊಗುವನ್ನಕ್ಕ : ಮನಸ್ಸು ಲಯವಾಗುವಿಕೆ.
ವಚನ ವಿಶ್ಲೇಷಣೆ
ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಜೀವನದಲ್ಲಿ ನಿರಂತರ ಅನುಸರಿಸುವ ವರ್ತನೆ ಅಥವಾ ಕ್ರಮಗಳಾಗಿವೆ. ಕೇವಲ ಅಭ್ಯಾಸದಿಂದ ಮಾತ್ರ ಭಕ್ತಿಯು ಸಾಧ್ಯವಿಲ್ಲ ಎಂಬುದು ಇದರ ಭಾವ. ಭಕ್ತಿ ಎಂದರೆ, ನಿಷ್ಠೆ, ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಮಾನಸಿಕ ಏಕತೆಯನ್ನು ಹೊಂದುವುದು. ಭಗವಂತನು ಭಕ್ತನ ಮನಸ್ಸಿಗೆ ಲಯವಾಗಬೇಕು ಮತ್ತು ಭಕ್ತನು ಭಗವಂತನ ಮನಸ್ಸಿಗೆ ಲಯವಾಗಬೇಕು. ಇದು ಭಕ್ತಿಯ ಪರಿಪೂರ್ಣ ರೂಪ. ದೇಹದ ಗುಣಗಳಿಂದ ಮುಕ್ತರಾಗಿರುವವರೇ ನಿಜವಾದ ಶರಣರು. ಲೌಕಿಕ ಸ್ವಾರ್ಥ, ಅಹಂಕಾರ, ದೇಹಭಿಮಾನ ಇವುಗಳಿಂದ ಮುಕ್ತರಾದವರು ನಿಜಶರಣರು. ಇಂತಹ ನಿಜಶರಣರಿಗೆ ಶರಣಾಗತಿ ಆಗುವೆನೆಂಬ ಭಾವ ತುಂಬಿದೆ.
ಸಂಕ್ಷಿಪ್ತ ಭಾವಾರ್ಥ
ನಾವು ಭಗವಂತನನ್ನು ಪ್ರೀತಿಸುತ್ತೇವೆ ಅಂದ್ರೆ, ಕೇವಲ ಜಪ ಅಥವಾ ಧ್ಯಾನ ಮಾಡಿದರೆ ಸಾಕಾಗಲ್ಲ. ನಿಜವಾದ ಭಕ್ತಿಗೆ ಶುದ್ಧ ಮನಸ್ಸು ಬೇಕು. ನಿಜವಾದ ಭಕ್ತನ ಮನಸ್ಸು ಮತ್ತು ಭಗವಂತನ ಮನಸ್ಸು ಒಂದೇ ಆಗಬೇಕು. ಕೇವಲ ದೇಹದಿಂದ ಮಾಡುವ ಆಚರಣೆ ಮಾತ್ರ ಸಾಕಾಗಲ್ಲ. ನಮ್ಮಲ್ಲಿ ಸ್ವಾರ್ಥ, ಅಹಂಕಾರ ಇದ್ದರೆ, ನಿಜವಾದ ಶರಣಾಗತಿ ಸಾಧ್ಯವಿಲ್ಲ. ನಿಜವಾದ ಭಕ್ತರು ಶುದ್ಧ ಮನಸ್ಸಿನಿಂದ ಭಗವಂತನಿಗೆ ಶರಣಾಗಿರುತ್ತಾರೆ. ಅವರಿಗೆ ದೇವರ ಪ್ರೀತಿ ಸಿಗುತ್ತದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.