Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದೇವರನ್ನು ಅನುಭವಿಸಲು ಸಂಸ್ಕಾರವಂತರಿಗೆ ಸಾಧ್ಯ :ಗುಡಗುಂಟಿ
(ರಾಜ್ಯ ) ಜಿಲ್ಲೆ

ದೇವರನ್ನು ಅನುಭವಿಸಲು ಸಂಸ್ಕಾರವಂತರಿಗೆ ಸಾಧ್ಯ :ಗುಡಗುಂಟಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಜಮಖಂಡಿ: ನಿಸರ್ಗದಲ್ಲಿ ದೇವರಿದ್ದಾನೆ. ಆದರೆ, ಗೋಚರಿಸುವುದಿಲ್ಲ. ಹಾಲಿನಲ್ಲಿ ತುಪ್ಪವಿದ್ದರೂ ಕಾಣುವುದಿಲ್ಲ. ಹಾಲಿಗೆ ಸಂಸ್ಕಾರ ಕೊಟ್ಟಾಗ ತುಪ್ಪವಾಗುವುದು. ಹಾಗೆಯೇ ಸಂಸ್ಕಾರವಂತರಾದರೆ ದೇವರನ್ನು ಅನುಭವಿಸಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಚಿಂತನೆಯ ಮೂಲಕ ಎಲ್ಲರನ್ನೂ ಪುನೀತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸದ್ಭಾವನಾ ಪಾದಯಾತ್ರೆ ಕೈಗೊಂಡು ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಸದ್ಗುಣಗಳ ದೀಕ್ಷೆ ನೀಡುವ ಶ್ರೀಮಠದ ಸತ್ಕಾರ್ಯ ಶ್ಲಾಘನೀಯವಾಗಿದೆ. ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು ಜಮಖಂಡಿ ಮೂಲಕ ಸಾಗುತ್ತವೆ. ಆದ್ದರಿಂದ ಇಂದಿನ ಯುವಕರಿಗೆ ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೆಪಿಸುವ ಶ್ರೀಮಠದ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಇಳಕಲ್‌ನ ವಿಜಯ ಮಹಾಂತೇಶ ಸಂಸ್ಥಾನ ಮಠದ ಮಹಾಂತ ಜೋಳಿಗೆಯ ಪರಿಕಲ್ಪನೆಯನ್ನು ಜಮಖಂಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸಂಗತಿ. ಪುರಾತನ ಮಠವಾಗಿರುವ ಓಲೇಮಠ ಜಮಖಂಡಿ ನಗರಕ್ಕೆ ಕಳಶಪ್ರಾಯವಾಗಿದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ, ಸುಳ್ಳು ಹೇಳುವುದಿಲ್ಲ, ಯಾರೊಂದಿಗೆ ಜಗಳ ಕಾಯುವುದಿಲ್ಲ, ಯಾವುದೇ ದುಶ್ಚಟ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿ ಜೀವನವನ್ನು ಪವಿತ್ರ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಆಶೀರ್ವಚನ ನೀಡಿದರು.
ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಶಿರೋಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ವಕೀಲ ಡಾ.ತಾತಾಸಾಹೇಬ ಬಾಂಗಿ ಮಾತನಾಡಿದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿಗಳನ್ನು ಹೇಳಿದರು. ಗಾಣಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಕೆ. ತುಪ್ಪದ, ಲೆಕ್ಕಪರಿಶೋಧಕ ಗಿರೀಶ ಬಾಂಗಿ ಇದ್ದರು.
ನಿಖಿತಾ ಹಿರೇಮಠ, ಸಾನ್ವಿ, ಬನ್ನಿಗಿಡದ ವಚನ ಪ್ರಾರ್ಥನೆ ಗೀತೆ ಹಾಡಿದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ
    In (ರಾಜ್ಯ ) ಜಿಲ್ಲೆ
  • ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ
    In (ರಾಜ್ಯ ) ಜಿಲ್ಲೆ
  • ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ
    In (ರಾಜ್ಯ ) ಜಿಲ್ಲೆ
  • ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ
    In (ರಾಜ್ಯ ) ಜಿಲ್ಲೆ
  • ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ರಂಗದ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಜಾಯವಾಡಗಿ ಜಾತ್ರೆಯಲ್ಲಿ ಗಮನ ಸೆಳೆದ ಜಾನುವಾರುಗಳ ಜಾತ್ರೆ
    In (ರಾಜ್ಯ ) ಜಿಲ್ಲೆ
  • ರಂಜಾನ್: ಇಂಡಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ
    In (ರಾಜ್ಯ ) ಜಿಲ್ಲೆ
  • ಜಾನಪದ ಸಾಹಿತ್ಯ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಶ್ರೀಮಂತ ಸಾಹಿತ್ಯ
    In (ರಾಜ್ಯ ) ಜಿಲ್ಲೆ
  • ‘ಹುಲಿಮಿತ್ರ’ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ವಾಣಿಜ್ಯ ಬಳಕೆ ಎಲ್ಪಿಜಿ ಹಂಚಿಕೆ ಶೇ.50ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.