Author: editor.udayarashmi@gmail.com

ಲೇಖನ- ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಗುರುತಿಸಿಕೊಳ್ಳುತ್ತೇವೆ ನಾವುನಮ್ಮನ್ನು ಮಂತ್ರಿ ಜೊತೆಗೆಕಂತ್ರಿ ತಂತ್ರಿಗಳ ಜೊತೆಗೆಹಸ್ತ ನೋಡಿ ಸುಳ್ಳು ಹೇಳುವವರಮನೆ ಮುರಿಯುವ ವಾಸ್ತುಗಾರರಹವನ ಹೋಮ ಯಜ್ಞದಲಿಪ್ರಾಣಿ ಕೊಂದು ಸೀರೆ ಸುಡುವವರ ಗುರುತಿಸಿಕೊಳ್ಳುತ್ತೇವೆ ನಾವುವಚನ ತಿದ್ದುವವರ ಜೊತೆಗ್ರಂಥ ಕದಿಯುವವರ ಜೊತೆಮೇಜು ಗುದ್ಧಿ ಕಿರುಚುವಪ್ರವಚನಕಾರರ ಜೊತೆಬುದ್ಧ ಬಸವನ ಹೆಸರು ಹೇಳಿಸೋಗು ಹಾಕುವವರ ಜೊತೆ ಗುರುತಿಸಿಕೊಳ್ಳುತ್ತೇವೆ ನಾವುನೆಲ ಜಲ ನುಂಗುವವರ ಜೊತೆಗಣಿ ಧಣಿ ಧ್ವನಿಯ ಜೊತೆಗೆಮಠ ಹರಾಜು ಹಾಕಿದವರ ಜೊತೆದಲಿತರ ರಕ್ತ ಹೀರಿದವರಜೊತೆಗುರುತಿಸುವುದಿಲ್ಲ ಸತ್ಯ ನ್ಯಾಯದ ಜೊತೆಮೌನದಿ ಮರಗುವ ಆತ್ಮದ ಜೊತೆ

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕಾಮಕ್ಕೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ, ಅರಿವಂತೂ ಮೊದಲೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಕೇವಲ ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ಬರ್ಬರವಾದ ಅತ್ಯಾಚಾರ ಎಸಗಿ ಆಕೆಯ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಸಾಯಿಸಿದ ಆ ಪಾತಕಿಯ ವೈಶಾಚಿಕ ಕೃತ್ಯಕ್ಕೆ ಧಿಕ್ಕಾರವಿರಲಿ.ನವಮಾಸಗಳ ಕಾಲ ತನ್ನ ಉದರದಲ್ಲಿ ಹೊತ್ತು ಹೆತ್ತು ತನ್ನ ಮಗುವಿನ ಭವ್ಯ ಭವಿಷ್ಯದ ಕುರಿತು ಹಲವು ಕನಸುಗಳನ್ನು ಕಂಡ ಆ ತಾಯಿ ಮನೆಯ ಬಳಿ ಆಟವಾಡುತ್ತಿದ್ದ ತನ್ನ ಮಗು ವಿಕೃತನ ಕಾಮ ಪಿಪಾಸೆಗೆ ಬಲಿಯಾಗಿ ಹೋದಳು ಎಂಬುದನ್ನು ಕೇಳಿದಾಗ ಆಕೆಯ ಪರಿಸ್ಥಿತಿ ಏನಾಗಿರಬಹುದು. ತನ್ನ ಮಗುವನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದಾಗ ಅದೆಷ್ಟು ವಿಲವಿಲ ಒದ್ದಾಡಿರಬಹುದು ಆ ತಾಯಿಯ ಜೀವ ಎಂದು ಊಹಿಸಿಕೊಂಡರೆ ಅದೆಷ್ಟೇ ಗಟ್ಟಿ ಗುಂಡಿಗೆಯಾದರೂ ಒಂದು ಕ್ಷಣ ಝಲ್ಲೆನ್ನದೇ ಇರದು.ಕಾನೂನಿನ ಕೈಗಳು ಅದೆಷ್ಟೇ ಉದ್ದ ಚಾಚಿದರೂ ಸಿಗದಂತೆ ತಪ್ಪಿಸಿಕೊಂಡು ಹೋಗುವ, ತಪ್ಪಿಸಿಕೊಳ್ಳಲು ಸಹಾಯ ಮಾಡುವ, ಅದೇ ಕಾನೂನಿನ ಲೋಪ ದೋಷಗಳನ್ನು…

Read More

ಚಿಂತನೆ- ಡಾ.ಶಾರದಾಮಣಿ. ಏಸ್. ಹುನಶಾಳವಿಜಯಪುರವಚನ ಅಧ್ಯಯನ ವೇದಿಕೆಬಸವಾದಿ ಶರಣರ ಚಿಂತನ ಕೂಟ ಉದಯರಶ್ಮಿ ದಿನಪತ್ರಿಕೆ ತಾಯಿ– ಅಕ್ಕನಾಗಲಂಬಿಕೆ .ತಂದೆ– ಶಿವದೇವ.ಹುಟ್ಟಿದ ಸ್ಥಳ – ಇಂಗಳೇಶ್ವರ. ಕಾಲ- ೧೨ನೆಯ ಶತಮಾನ. ಸೋದರಮಾವ – ಗುರುಬಸವಣ್ಣವರು . ಒಟ್ಟು ವಚನಗಳು – ೧೧೭೪ ಬಸವಣ್ಣನವರ ಪ್ರಕಾರ – ಜನ್ಮತಃ ಜ್ಞಾನ ಪರಿಮಳಭರಿತ.ಪ್ರಭುದೇವರ ದೃಷ್ಟಿಯಲ್ಲಿ – ಅವಿರಳ ಜ್ಞಾನಿ, ಸ್ವಯಂಭೂ ಜ್ಞಾನಿ. ಅಕ್ಕಮಹಾದೇವಿಯವರ ದೃಷ್ಟಿಯಲ್ಲಿ* – ಅವಿರಳ ಜ್ಞಾನಿ, ಸಮ್ಯಕ್ ಜ್ಞಾನಿ. ಶರಣರ ದೃಷ್ಟಿಯಲ್ಲಿ – ಷಟ್ ಸ್ಥಲ ಜ್ಞಾನಿ. ಹನ್ನೆರಡನೆಯ ಶತಮಾನದಲ್ಲಿ ಉದಯಿಸಿ, ಕಿರಿದಾದ ವಯಸ್ಸಿನಲ್ಲಿಯೇ ಅತ್ಯುನ್ನತ ಆಧ್ಯಾತ್ಮದ ಶಿಖರಕ್ಕೇರಿ, ಜನರಲ್ಲಿದ್ದ ಅಜ್ಞಾನವನ್ನು ತೊಡೆದು , ಸುಜ್ಞಾನವನ್ನು ನೀಡಲು ಆಗಮಿಸಿದ ಮಹಾ ಚೈತನ್ಯವೇ ಚೆನ್ನಬಸವಣ್ಣನವರು. ಇವರಿಗೆ ತಾಯಿಯ ಹಾಗೂ ಸೋದರ ಮಾವನಾದ ಬಸವಣ್ಣವರ ಗಾಢ ಪ್ರಭಾವ ಆತನನ್ನು ಅವಿರಳ ಜ್ಞಾನಿಯಾಗಿ, ಸಮ್ಯಕ್ ಜ್ಞಾನಿಯಾಗಿ, ಸ್ವಯಂಭೂಜ್ಞಾನಿ, ಷಟ್ ಸ್ಸ್ಥಲ ಚಕ್ರವರ್ತಿ ಎಂದು ಕರೆಸಿಕೊಳ್ಳುವ ಚೆನ್ನಬಸವಣ್ಣನವರು, ಶರಣ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.ಬಸವಣ್ಣನವರೇ “ನಾನೊಂದು ಕಾರಣ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಿಜೆಪಿ ಜನಾಕ್ರೋಶ ಯಾತ್ರೆ ಅಂಗವಾಗಿ ವಿಜಯಪುರ ಜಿಲ್ಲೆಗೆ ಬಾಗಲಕೋಟೆ ಯಿಂದ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕೊಲ್ಹಾರ ಪಟ್ಟಣದ ಯುಕೆಪಿಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಕಾರ್ಯಕರ್ತರು ಸನ್ಮಾನಿಸಿ, ಮಹಿಳೆಯರು ಆರತಿ ಮಾಡಿ, ಜೆಸಿಬಿ ಮೂಲಕ ಹೂ ಮಳೆಗರೆದು ಅದ್ದೂರಿಯಾಗಿ ಜಿಲ್ಲೆಗೆ ಸ್ವಾಗತಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರಕ್ಕೆ ಶ್ರೀ ಕಲ್ಲಿನಾಥ ದೇವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಗಳು, ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ, ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಮ‌ಹಿಳೆಯರಿಗೆ, ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಅಪಘಾತವಾದವರಿಗೆ ಹೀಗೆ ಹಲವರಿಗೆ ತ್ವರಿತ ರಕ್ತ ಬೇಕಾದಲ್ಲಿ ಸಹಾಯವಾಗುತ್ತದೆ ಇಂತಹ ಕಾರ್ಯಕ್ರಮ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದು ಬಹಳ ಮಹತ್ವದ್ದು ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಆಯುಷ್ ವೈದ್ಯಾಧಿಕಾರಿ ಡಾಕ್ಟರ್ ಎಸ್.ಎಂ. ಪಾಟೀಲ ಮಾತನಾಡಿ ರಕ್ತದಾನದ ಮಹತ್ವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ರಕ್ತದಾನ ಮಾಡುವ ಶಿಬಿರಾರ್ಥಿಗಳಿಗೆ ರಕ್ತದಾನಿಗಳಿಗೆ ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಆರ್.ಕೆ. ಯಾತನೂರ, ಎಲ್.ಎಲ್. ಕಟಗಿ, ಅಶೋಕ ಕೊಲ್ಹಾರ, ಜಗದೀಶ ಬಿ, ಸವಿತಾ ದೊಡ್ಡಮನಿ, ಆಶಾಬಿ ವಾಲಿಕಾರ, ಮಲ್ಲಪ್ಪ ಗಣಿ, ಹಾಗೂ ನೂರಾರು ಭಕ್ತಾದಿಗಳು ಹಾಜರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ : ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರರವರ ಪೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆ ಭೀಮವಾದದ ಕಾರ್ಯಕರ್ತರು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಮತ್ತು ತಹಸೀಲ್ದಾರ ಬಿ.ಎಸ್. ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.ರಾಜಧಾನಿ ಬೆಂಗಳೂರಿನ ವಿಧಾನಸೌಧ ಎದುರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಪ್ರತಿಸ್ಥಾಪಿಸಿ ವಿಧಾನಸೌಧಕ್ಕೆ ಮೆರಗು ಬಂದಿದೆ.ಅದೇ ಮಾದರಿಯಲ್ಲಿ ಪಟ್ಟಣದ ಆಡಳಿತಸೌಧದಲ್ಲಿ ಪ್ರತಿಷ್ಠಾಪಿಸಲು ಆಗ್ರಹಿಸಿದರು.ಮಲ್ಲು ಮಡ್ಡಿಮನಿ, ವಿಕಾಸ ಗುಡಿಮನಿ, ಅಂಬಣ್ಣಾ ರಾಂಪೂರ, ಸಿದರಾಮ ಕೆಂಗಾರ, ಚನ್ನಪ್ಪ ನಡಗಡ್ಡಿ, ಚಂದಪ್ಪ ಸಿಗಣಾಪುರ, ಸಮರ್ಥ ಕೋಳೆಕರ, ಲಕ್ಷ್ಮಣ ಗುಂದವಾನ, ಸಂತೋಷ ಬೋವಿ, ಪ್ರಕಾಶ ಕಾಂಬಳೆ, ಈಶ್ವರ ಮನಗೂಳಿ, ನಾಗರಾಜ, ಬಾಬು ಪವಾರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಡವಲಗಾ ಗ್ರಾಮಕ್ಕೆ ನೀರನ್ನು ಕಾಲುವೆ ನೀರಿನಿಂದ ತುಂಬುತ್ತಿದ್ದು ರೈತರು ಕೃಷಿ ಪಂಪುಶೆಟ್ಟು ಬಳಸಿ ಮತ್ತು ಕಾಲುವೆ ಒಡೆದು ನೀರು ಹೊಲಗಳಿಗೆ ಮತ್ತು ವಾಲ್ ತಿರುಗಿಸಿ ಹಳ್ಳಕ್ಕೆ ಬಿಟ್ಟು ಅಲ್ಲಿಂದ ಕೃಷಿಗೆ ಬಳಸುತ್ತಿದ್ದಾರೆ ಎಂದು ಭಾರತೀಯ ಕಿಸಾನ ಸಂಘದ ರೈತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಮತ್ತು ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.ಕಾಲುವೆ ನೀರು ದುರುಪಯೋಗವಾದರೆ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಯಾಗುತ್ತದೆ ಎಂದು ಗುರುನಾಥ ಬಗಲಿ ಆರೋಪಿಸಿದ್ದಾರೆ.ಕೂಡಲೇ ವಿಶೇಷ ಪೋಲಿಸ ವ್ಯವಸ್ಥೆ ಮಾಡಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ,ಪ್ರತಿಭಟನೆಯಲ್ಲಿ ಈರಣ್ಣಾ ಗೋಟ್ಯಾಳ, ಶರಣು ಶಹಾಪುರ, ಸಂತೋಷ ಸುರಾಗಡ್ಡೆ, ರಾಜು ಆನೂರ ಮತ್ತಿತರಿದ್ದರು.ಎಸಿಯವರು ಮಾತನಾಡಿ ಸೂಕ್ತ ಪೋಲಿಸ ಭದ್ರತೆ ನೀಡಿ ಕೃಷ್ಣಾ ಕಾಲುವೆಯವರಿಗೆ ನೀರು ಪೋಲಾಗದಂತೆ ಕ್ರಮ ವಹಿಸಲು ತಿಳಿಸುವದಾಗಿ ತಿಳಿಸಿದರು.

Read More

ಬಿಜೆಪಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.‌ವಿಜಯೇಂದ್ರ ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕೇವಲ ಮುಸಲ್ಮಾನರ ಮುಖ್ಯಮಂತ್ರಿಗಳೋ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.‌ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.ವಿಜಯಪುರ‌ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ವಿಜಯಪುರಕ್ಕೆ ತಲುಪಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳಿಗೆ ವಿದೇಶದಲ್ಲಿ ಕಲಿಯಲು ದೊಡ್ಡ ಪ್ರಮಾಣದಲ್ಲಿ ಶಿಷ್ಯವೇತನ, ಗುತ್ತಿಗೆ ಕಾಮಗಾರಿಯಲ್ಲಿ‌ ಮೀಸಲಾತಿ ಎಲ್ಲವೂ ನೋಡಿದರೆ ನೀವು ಕೇವಲ ಮುಸ್ಲಿಂರ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರ ವರ್ತನೆ ಇದೆ ಎಂದರು.ಹಿಂದೂ ಬಾಂಧವರಲ್ಲಿ ಬಡ ಹೆಣ್ಣು ಮಕ್ಕಳು ವಿದೇಶಕ್ಕೆ ಹೋಗಿ ವ್ಯಾಸಾಂಗ ಮಾಡಬಾರದೇ? ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಇರುವುದನ್ನು ನೋಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗುಂಡಿಗೆ ಗಟ್ಟಿ ಇದ್ದರೆ ವಿಜಯಪುರಕ್ಕೆ ಬಂದು ನೋಡಿ ಎಂದು ಸವಾಲು ಹಾಕಿದರು.ಬೆಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ಮೆಟ್ರಿಕ್ ನಂತರದ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಬಾಲಕಿಯರ ಹಾಗೂ ಬಾಲಕರ ಎರಡು ವಸತಿ ನಿಲಯಕ್ಕೆ ತಲಾ ೧೦೦ ಸಂಖ್ಯಾಬಲಕ್ಕೆ ಅನುಗುಣವಾಗಿ ಹತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯವುಳ್ಳ ಕಟ್ಟಡ ಬಾಡಿಗೆಗಾಗಿ ಅರ್ಜಿ ಆಹ್ವಾನಿಸಿಲಾಗಿದೆ.ವಸತಿ ನಿಲಯಕ್ಕಾಗಿ ಬಾಡಿಗೆ ಕಟ್ಟಡ ಒದಗಿಸಲು ಆಸಕ್ತಿ ಇರುವ ಕಟ್ಟಡ ಮಾಲೀಕರು ದಿನಾಂಕ: ೨೮-೦೪-೨೦೨೫ ರೊಳಗಾಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಡಿ. ದೇವರಾಜ್ ಅರಸು ಭವನ, ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಕನಕದಾಸ ಬಡಾವಣೆ ಇವರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: ೦೮೩೫೨-೨೬೭೯೯೩, ಮೊಬೈಲ್ ೯೬೧೧೫೧೮೪೭೬ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯಾಳವಾರ ಗ್ರಾಮದ ಶ್ರೀಸೋಮೇಶ್ವರ, ನವಕೋಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.ದಿ.೧೮ ರಂದು ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ ಹಾಗೂ ಶ್ರೀಸೋಮೇಶ್ವರನಿಗೆ ಪ್ರಜಾಪತಿ ಸುವರ್ಣ ಬಂಡಿಮಠ ಜಮಖಂಡಿ ಇವರಿಂದ ವಿಶೇಷ ಬುತ್ತಿ ಅಲಂಕಾರ ಪೂಜೆ. ನಂತರ ೧೦ ಗಂಟೆಗೆ ಪಲ್ಲಕ್ಕಿ ಉತ್ಸವದೊಂದಿಗೆ ಅಗ್ನಿಪ್ರವೇಶ. ಇದೇ ಸಂದರ್ಭದಲ್ಲಿ ೧೧ ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ರಕ್ತ ಭಂಡಾರನಿಧಿ ವಿಜಯಪುರ ಹಾಗೂ ಶರಣಮ್ಮಗೌಡತಿ ನಾಡಗೌಡ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಆರಂಭಗೊಳ್ಳಲಿದೆ. ನಂತರ ಮಹಾಪ್ರಸಾದ ಜರುಗಲಿದೆ.ಸಾಯಂಕಾಲ ೫.೦೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಒಡಹುಟ್ಟಿದವರು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.ದಿ.೧೯ ಶನಿವಾರದಂದು ಬೆಳಿಗ್ಗೆ ೧೦ ಗಂಟೆಗೆ ಸಂಗ್ರಾಣಿ, ಗುಂಡುಕಲ್ಲು, ಧಾನ್ಯದ ಚೀಲ ಭಾರ ಎತ್ತುವ ಸ್ಪರ್ಧೆಗಳು ಜರುಗಲಿದ್ದು ಪ್ರಥಮ ಸ್ಥಾನ ಪಡೆದವರಿಗೆ ೧೦ ತೊಲಿ ಬೆಳ್ಳಿ ಖಡೆ ಹಾಗೂ…

Read More