ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ತಡವಲಗಾ ಗ್ರಾಮಕ್ಕೆ ನೀರನ್ನು ಕಾಲುವೆ ನೀರಿನಿಂದ ತುಂಬುತ್ತಿದ್ದು ರೈತರು ಕೃಷಿ ಪಂಪುಶೆಟ್ಟು ಬಳಸಿ ಮತ್ತು ಕಾಲುವೆ ಒಡೆದು ನೀರು ಹೊಲಗಳಿಗೆ ಮತ್ತು ವಾಲ್ ತಿರುಗಿಸಿ ಹಳ್ಳಕ್ಕೆ ಬಿಟ್ಟು ಅಲ್ಲಿಂದ ಕೃಷಿಗೆ ಬಳಸುತ್ತಿದ್ದಾರೆ ಎಂದು ಭಾರತೀಯ ಕಿಸಾನ ಸಂಘದ ರೈತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಮತ್ತು ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.
ಕಾಲುವೆ ನೀರು ದುರುಪಯೋಗವಾದರೆ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಯಾಗುತ್ತದೆ ಎಂದು ಗುರುನಾಥ ಬಗಲಿ ಆರೋಪಿಸಿದ್ದಾರೆ.
ಕೂಡಲೇ ವಿಶೇಷ ಪೋಲಿಸ ವ್ಯವಸ್ಥೆ ಮಾಡಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ,
ಪ್ರತಿಭಟನೆಯಲ್ಲಿ ಈರಣ್ಣಾ ಗೋಟ್ಯಾಳ, ಶರಣು ಶಹಾಪುರ, ಸಂತೋಷ ಸುರಾಗಡ್ಡೆ, ರಾಜು ಆನೂರ ಮತ್ತಿತರಿದ್ದರು.
ಎಸಿಯವರು ಮಾತನಾಡಿ ಸೂಕ್ತ ಪೋಲಿಸ ಭದ್ರತೆ ನೀಡಿ ಕೃಷ್ಣಾ ಕಾಲುವೆಯವರಿಗೆ ನೀರು ಪೋಲಾಗದಂತೆ ಕ್ರಮ ವಹಿಸಲು ತಿಳಿಸುವದಾಗಿ ತಿಳಿಸಿದರು.

