ಉದಯರಶ್ಮಿ ದಿನಪತ್ರಿಕೆ
ಇಂಡಿ : ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರರವರ ಪೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆ ಭೀಮವಾದದ ಕಾರ್ಯಕರ್ತರು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಮತ್ತು ತಹಸೀಲ್ದಾರ ಬಿ.ಎಸ್. ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.
ರಾಜಧಾನಿ ಬೆಂಗಳೂರಿನ ವಿಧಾನಸೌಧ ಎದುರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಪ್ರತಿಸ್ಥಾಪಿಸಿ ವಿಧಾನಸೌಧಕ್ಕೆ ಮೆರಗು ಬಂದಿದೆ.
ಅದೇ ಮಾದರಿಯಲ್ಲಿ ಪಟ್ಟಣದ ಆಡಳಿತಸೌಧದಲ್ಲಿ ಪ್ರತಿಷ್ಠಾಪಿಸಲು ಆಗ್ರಹಿಸಿದರು.
ಮಲ್ಲು ಮಡ್ಡಿಮನಿ, ವಿಕಾಸ ಗುಡಿಮನಿ, ಅಂಬಣ್ಣಾ ರಾಂಪೂರ, ಸಿದರಾಮ ಕೆಂಗಾರ, ಚನ್ನಪ್ಪ ನಡಗಡ್ಡಿ, ಚಂದಪ್ಪ ಸಿಗಣಾಪುರ, ಸಮರ್ಥ ಕೋಳೆಕರ, ಲಕ್ಷ್ಮಣ ಗುಂದವಾನ, ಸಂತೋಷ ಬೋವಿ, ಪ್ರಕಾಶ ಕಾಂಬಳೆ, ಈಶ್ವರ ಮನಗೂಳಿ, ನಾಗರಾಜ, ಬಾಬು ಪವಾರ ಮತ್ತಿತರಿದ್ದರು.

