ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯಾಳವಾರ ಗ್ರಾಮದ ಶ್ರೀಸೋಮೇಶ್ವರ, ನವಕೋಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ದಿ.೧೮ ರಂದು ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ ಹಾಗೂ ಶ್ರೀಸೋಮೇಶ್ವರನಿಗೆ ಪ್ರಜಾಪತಿ ಸುವರ್ಣ ಬಂಡಿಮಠ ಜಮಖಂಡಿ ಇವರಿಂದ ವಿಶೇಷ ಬುತ್ತಿ ಅಲಂಕಾರ ಪೂಜೆ. ನಂತರ ೧೦ ಗಂಟೆಗೆ ಪಲ್ಲಕ್ಕಿ ಉತ್ಸವದೊಂದಿಗೆ ಅಗ್ನಿಪ್ರವೇಶ. ಇದೇ ಸಂದರ್ಭದಲ್ಲಿ ೧೧ ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ರಕ್ತ ಭಂಡಾರನಿಧಿ ವಿಜಯಪುರ ಹಾಗೂ ಶರಣಮ್ಮಗೌಡತಿ ನಾಡಗೌಡ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಆರಂಭಗೊಳ್ಳಲಿದೆ. ನಂತರ ಮಹಾಪ್ರಸಾದ ಜರುಗಲಿದೆ.
ಸಾಯಂಕಾಲ ೫.೦೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಒಡಹುಟ್ಟಿದವರು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ದಿ.೧೯ ಶನಿವಾರದಂದು ಬೆಳಿಗ್ಗೆ ೧೦ ಗಂಟೆಗೆ ಸಂಗ್ರಾಣಿ, ಗುಂಡುಕಲ್ಲು, ಧಾನ್ಯದ ಚೀಲ ಭಾರ ಎತ್ತುವ ಸ್ಪರ್ಧೆಗಳು ಜರುಗಲಿದ್ದು ಪ್ರಥಮ ಸ್ಥಾನ ಪಡೆದವರಿಗೆ ೧೦ ತೊಲಿ ಬೆಳ್ಳಿ ಖಡೆ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ೫ ತೊಲಿ ಬೆಳ್ಳಿ ಖಡೆ ಬಹುಮಾನ ಘೋಷಿಸಲಾಗಿದೆ ಎಂದು ಜಾತ್ರಾ ಸಮಿತಿಯ ಮುಖ್ಯಸ್ಥ ರಾಜುಗೌಡ ನಾಡಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
