ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರಕ್ಕೆ ಶ್ರೀ ಕಲ್ಲಿನಾಥ ದೇವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶ್ರೀಗಳು, ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ, ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಮಹಿಳೆಯರಿಗೆ, ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಅಪಘಾತವಾದವರಿಗೆ ಹೀಗೆ ಹಲವರಿಗೆ ತ್ವರಿತ ರಕ್ತ ಬೇಕಾದಲ್ಲಿ ಸಹಾಯವಾಗುತ್ತದೆ ಇಂತಹ ಕಾರ್ಯಕ್ರಮ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದು ಬಹಳ ಮಹತ್ವದ್ದು ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಆಯುಷ್ ವೈದ್ಯಾಧಿಕಾರಿ ಡಾಕ್ಟರ್ ಎಸ್.ಎಂ. ಪಾಟೀಲ ಮಾತನಾಡಿ ರಕ್ತದಾನದ ಮಹತ್ವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ರಕ್ತದಾನ ಮಾಡುವ ಶಿಬಿರಾರ್ಥಿಗಳಿಗೆ ರಕ್ತದಾನಿಗಳಿಗೆ ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಆರ್.ಕೆ. ಯಾತನೂರ, ಎಲ್.ಎಲ್. ಕಟಗಿ, ಅಶೋಕ ಕೊಲ್ಹಾರ, ಜಗದೀಶ ಬಿ, ಸವಿತಾ ದೊಡ್ಡಮನಿ, ಆಶಾಬಿ ವಾಲಿಕಾರ, ಮಲ್ಲಪ್ಪ ಗಣಿ, ಹಾಗೂ ನೂರಾರು ಭಕ್ತಾದಿಗಳು ಹಾಜರಿದ್ದರು.