Author: editor.udayarashmi@gmail.com

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಎಸ್‌ಆರ್ ಅನುದಾನವನ್ನು ಬಳಕೆ ಮಾಡಿಕೊಂಡು ವಿವಿಧ ಸಾಮಾಜಿಕ, ಅಭಿವೃದ್ದಿ ಕಾರ್ಯಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.ಶನಿವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್‌ಆರ್ ಅನುದಾನದಡಿ ಬಬಲೇಶ್ವರ ಮತಕ್ಷೇತ್ರದ ಕೊಟ್ಯಾಳ ಗ್ರಾಮದಲ್ಲಿ ಸರಕಾರಿ ಶಾಲೆಯ ೧೦ ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಮಾಜ ಪ್ರಗತಿಯತ್ತ ಸಾಗಲು ಶಿಕ್ಷಣ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸುಸಜ್ಜಿತ ಶಾಲಾ ಕಟ್ಟಡ, ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯ, ಗುಣಮಟ್ಟ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರು ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ಸಿಂದಗಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಅವರ ಅಭಿವೃದ್ದಿ ಕೆಲಸವನ್ನು ಕ್ಷೇತ್ರದ ಜನ ಯಾವತ್ತು ಮರೆಯುವದಿಲ್ಲ ಎಂದು ಸಿಂದಗಿ ತಾಲೂಕು ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ಮತ್ತು ಪಕ್ಷದ ಸದಸತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅಧಿಕಾರ ಅವದಿಯಲ್ಲಿ ಆಲಮೇಲ ಪಟ್ಟಣದವನ್ನು ತಾಲೂಕು ಕೇಂದ್ರ ಗೋಷಣೆ ಮಾಡಲಾಯಿತು ಮತ್ತು ನೂತನ ತಾಲೂಕು ಕೇಂದ್ರದಲ್ಲಿ ತೋಟಗಾರಿಕೆ ಕಾಲೇಜು ಮಂಜುರು ಮಾಡಿಸಿದ ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತದೆ. ಕುಮಾರಸ್ವಾಮಿ ಅವರ ಅಭಿವೃದ್ದಿ ಕೆಲಸಗಳು ಕ್ಷೇತ್ರದ ಜನರ ಮನಸಿನಲ್ಲಿದ್ದು ಅವರ ಮಾಡಿರುವ ಅಭಿವೃದ್ದಿ ಕೆಲಸಗಳು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡಲಾಗುವದು ಎಂದರು.ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಇಂದಿರಾ ನೂಯಿ ಅವರು 28- 10 -1955 ರಂದು ತಮಿಳುನಾಡಿನಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಇಂದಿರಾ ಕೃಷ್ಣಮೂರ್ತಿ. ಇವರು ಈಗ ನ್ಯೂಯಾರ್ಕ ನ ಪರ್ಚೆಸಿನಲ್ಲಿ ವಾಸಿಸುತ್ತಿದ್ದಾರೆ. ಇವರು ಪೆಪ್ಸಿಕೊ ಕಂಪೆನಿಯ ಅಧ್ಯಕ್ಷೆಯಾಗಿದ್ದರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಸಹ ಆಗಿದ್ದರು.ಇಂದಿರಾ ನೂಯಿ ಅವರು ಬೆಳೆದದ್ದು ಚೆನ್ನೈ ನಲ್ಲಿ. ಇವರು ತಮ್ಮ ಹೈಯರ್ ಸೆಕೆಂಡರಿಯನ್ನು” ಹೋಲಿ ಕ್ರಾಸ್ ” ಶಾಲೆಯಲ್ಲಿ ಮುಗಿಸಿದರು. ಅದರ ನಂತರ ಇವರು 1974ರಲ್ಲಿ ಭೌತಶಾಸ್ತ್ರ ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಮದ್ರಾಸಿನ ಕ್ರಿಶ್ಚನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ ಎಂಬಿಎ ಪದವಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ ಆಫ್ ಮ್ಯಾನೇಜ್ಮೆಂಟ್ ಕಲ್ಕತ್ತಾದಲ್ಲಿ ಮುಗಿಸಿದರು. ಇವರು ಆರಂಭದಲ್ಲಿ ಜಾನ್ಸನ್ ಮತ್ತು ಜಾನ್ಸನ್ ಮತ್ತು ಜವಳಿ ಸಂಸ್ಥೆಯ “ಮೆಟ್ಟೂರ್ ಬರ್ದೇಲ್ಸ್ ” ಉತ್ಪನ್ನದಲ್ಲಿ ನಿರ್ವಾಹಕರಾಗಿ ಕೆಲಸ ಮಾಡಲು ಆರಂಭಿಸಿದರು. ಇವರು 1971 ರಲ್ಲಿ ” ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ” ನಲ್ಲಿ…

Read More

ಚಿಂತನೆ- ಡಾ.ಸಾವಿತ್ರಿ ಕಮಲಾಪೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಹಸಿಮಸಿ ಕೃಷಿ ವಾಣಿಜ್ಯ ಮುಂತಾದಕಾಯಕವ ಮಾಡಿಭಕ್ತರ ಪಡುಗ , ಪಾದತ್ತ್ರಾನ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕಂ ಮಾಡಿಕೊಂಡುವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆಈ ಭಕ್ತನ ಅಂಗಳ ಅವಿಮುಕ್ತಿ ಕ್ಷೇತ್ರಆತನ ಮನೆಯೆ ಆಚಾರವೇ ಪ್ರಾಣವಾದರಾಮೇಶ್ವರ ಲಿಂಗದಾಶ್ರಯ ವಚನಅಸಿ ಎಂದರೆ : ಯುದ್ಧ .ಮಸಿ ಎಂದರೆ : ಸಾಹಿತ್ಯ . ಸಂಪುಟ ೫ವಚನ ಸಂಖ್ಯೆ ೪೪೫ಅಕ್ಕಮ್ಮನವರು 12ನೇ ಶತಮಾನದ ಶರಣೆ. ಅಕ್ಕಮ್ಮನವರಿಗೆ ರೆಮ್ಮವ್ವೆ ಎಂತಲೂ ಶೋಧನೆಗಳಿಂದ ತಿಳಿದು ಬಂದಿದೆ.ಡಾಕ್ಟರ ಫ, ಗು ಹಳಕಟ್ಟಿಯವರ ಶಿವಾನುಭವ ಗ್ರಂಥ ಮಾಲೆ ಏಳೇಶ್ವರ ಲಿಂಗ ಎಂಬ ಅಂಕಿತದಲ್ಲಿ 23 ವಚನಗಳು ಸಿಕ್ಕ ಆಧಾರದ ಮೇಲೆ ಇವುಗಳನ್ನೆಲ್ಲ ಪ್ರತ್ಯೇಕಿಸಿ ಡಾಕ್ಟರ ಆರ್, ಸಿ ಹಿರೇಮಠ ಅವರು ಅಕ್ಕಮ್ಮನ ವಚನಗಳು ಎಂಬ ವಚನಗಳನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಹೀಗಾಗಿ ಏಲೇಶ್ವರದ ಕೇತಯ್ಯ ಮತ್ತು ಎಲೇಶ್ವರದ ಅಕ್ಕಮ್ಮ ಇವರಿಬ್ಬರೂ ದಂಪತಿಗಳೇ ಎನ್ನುವ, ಸಂಶೋಧನೆಯು ಮುಂದುವರಿಯಬೇಕಾಗಿದೆ.ಸ್ಥಳ :- ಯಾದಗಿರಿ ಜಿಲ್ಲೆ ಏಳೇರಿಕಾಯಕ:- ಕೃಷಿ ಕಾಯಕಅಂಕಿತನಾಮ:-…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ದ್ಯಾಮವ್ವ ದೇವಿ ಮತ್ತು ದುರ್ಗಾ ಮಾತೆಯ ಉಡಿತುಂಬುವ ಕಾರ್ಯಕ್ರಮವನ್ನು ಆದ್ದೂರಿಯಾಗಿ ಆಚರಿಸುವ ಸಲುವಾಗಿ ದೇವಸ್ಥಾನದ ಸಭಾಂಗಣದಲ್ಲಿ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.ಪ್ರತಿ ವರ್ಷದಂತೆ ನಡೆಯುವ ದೇವತೆಗಳ ನಮ್ಮೂರ ಉತ್ಸವವನ್ನು ಬರುವ ಮೇ ತಿಂಗಳ ೧೨,/೧೩/೧೪ ಮೂರು ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದರು.ಮೇ ತಿಂಗಳ ೧೨ ಸೋಮವಾರ ದಿವಸ ರಾಜ್ಯ ಮಟ್ಟದ ಕ್ರಷಿ ಮೇಳ ರೈತರ ಜಾತ್ರೆಯ ಉದ್ಘಟನೆ ಮತ್ತು ವಿಚಾರ ಸಂರ್ಕೀಣ ೧೩ ಮಂಗಳವಾರ ದೇವಿಗೆ ಉಡಿ ತುಂಬುವದು. ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆ ಹೊಂದಿದ ಸಾಧನೆ ಮಾಡಿದ ಕೊಲ್ಹಾರ ಪಟ್ಟಣದ ವಿಧ್ಯಾರ್ಥಿಗಳನ್ನು ನಾಗರಿಕರನ್ನು ಗೌರವಿಸಲಾಗುವದು.ಮತ್ತು ರಾತ್ರಿ ೧೦/೩೦ ಕ್ಕೆ ವಿಜಯನಗರ ಜಿಲ್ಹೆಯ ಕೂಡ್ಲಗಿ ತಾಲೂಕಿನ ಹೀರೆಹೆಗಡ್ಯಾಳ ಗ್ರಾಮದ ಕಲಾಭಾರತಿ ಕಲಾ ಸಂಘದವರಿಂದ ರಕ್ತ ರಾತ್ರಿ ಎಂಬ ಪೌರಾಣಿಕ ನಾಟಕ ಇರುವದು.ದಿನಾಂಕ ೧೪ ಬುಧವಾರ ಕ್ರಷಿ ಕ್ಷೇತ್ರದಲ್ಲಿ ಉತ್ತಮ…

Read More

ಚರ್ಚೆ ಸಮಯದಲ್ಲಿ ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ‘ಜಾತಿ ಗಣತಿ’ ಎಂದು ಜನಪ್ರಿಯವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚಿಸಲು ಗುರುವಾರ ಸಂಜೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಯಾರೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.”ನಿನ್ನೆ, ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಯಿತು. ಚರ್ಚೆ ಅಪೂರ್ಣವಾಗಿದೆ ಮತ್ತು ಅದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಯಾರೂ ಅದನ್ನು ವಿರೋಧಿಸಿಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದರು ಎಂಬ ಮಾಧ್ಯಮ ವರದಿ ಸುಳ್ಳು” ಎಂದು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ದೆಹಲಿಯಲ್ಲಿ ಗುರುವಾರ ಹೃದಯಾಘಾತದಿಂದ ವೀರಮರಣ ಹೊಂದಿದ್ದ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ (೫೪) ಅವರ ಅಂತ್ಯಕ್ರಿಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ, ಆಪ್ತರ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಪಾರ್ಥಿವ ಶರೀರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಮೆರವಣಿಗೆಯುದ್ದಕ್ಕೂ ದೇಶದ ಭಾವುಟ ರಾರಾಜಿಸಿದವು. ದೇಶಭಕ್ತಿಗೀತೆಗಳು ಮೊಳಗಿದವು. ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.೧೯೯೦ರ ಡಿಸೆಂಬರ ೧೨ ರಂದು ತಮ್ಮ ೧೯ ನೇ ವಯಸ್ಸಿನಲ್ಲಿ ಸಿಆರ್ಪಿಎಫ್ ಸೇನೆಗೆ ಸೇರ್ಪಡೆಗೊಂಡಿದ್ದ ಯೋಧ ಶ್ರೀಶೈಲ ಹಿರೋಡಗಿ ಅವರು ಹೈದರಾಬಾದ, ಜಮ್ಮು ಮತ್ತು ಕಾಶ್ಮೀರ, ಪಂಜಾಬ, ಆಸ್ಸಾಂ, ತ್ರಿಪುರ, ಮಣಿಪುರದಲ್ಲಿ ಕಳೆದ ೩೪ ವರ್ಷದಿಂದ ಸಿಆರ್ಪಿಎಫ್ನ ಎಸ್ಐ ,ಕ್ವಾಟರ್ ಮಾಸ್ಟರ್ಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಧ್ಯ ದೆಹಲಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಕರ್ತವ್ಯದ ಸಮಯದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ದ ಶಿವಯೋಗಿಗಳವರ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಏ.೧೯ ರಂದು ಸಂಜೆ ೭ ಗಂಟೆಗೆ ಶಿವಾನುಭವ ಚಿಂತನ ಹಾಗೂ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಶಾಸಕರಾದ ರಾಜುಗೌಡ ಪಾಟೀಲ,ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ಶರಣಪ್ಪ ಸುಣಗಾರ ಆಗಮಿಸುವರು. ಸಾನಿಧ್ಯವನ್ನು ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ವೀರಸಿದ್ದ ಸ್ವಾಮೀಜಿ ವಹಿಸುವರು.ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಹಚ್ಯಾಳದ ಶಾಂತಪ್ಪ ನಾಗಪ್ಪ ಶಿರಶ್ಯಾಡ, ಶಿಕ್ಷಣ ಕ್ಷೇತ್ರದಲ್ಲಿ ವಿಜಯಪುರದ ಎನ್.ಎಂ.ಬಿರಾದಾರ, ಸಮಾಜ ಸೇವೆಗೆ ಬಸವನ ಬಾಗೇವಾಡಿಯ ಈರಣ್ಣ ಪಟ್ಟಣಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ವಿಜಯಪುರದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆಯುತ್ತಿರುವ ಶಿರಾಡೋಣ ಲಿಂಗಸೂರು ಕಾಮಗಾರಿಯ ಭಾಗವಾಗಿರುವ ಡಿವೈಡರ್ ಕಾಮಗಾರಿಯು ಅತ್ಯಂತ ಕಳಪೆಯಾಗಿದ್ದು, ಕಾಮಗಾರಿಯ ಗುಣಮಟ್ಟವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಂದಾಜು ಪತ್ರಿಕೆಯಲ್ಲಿರುವಂತೆ ಸರಿಪಡಿಸುವವರೆಗೆ ಈ ಕಾಮಗಾರಿಯ ಬಿಲ್ ನೀಡಬಾರದು ಎಂದು ಯುವ ಮುಖಂಡ ವಿರೇಶ ಆಲಕೊಪ್ಪರ ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.ಪತ್ರದ ಪ್ರತಿಯನ್ನು ಪತ್ರಿಕೆಗೆ ನೀಡಿ ಮಾತನಾಡಿದ ಅವರು ಕಾಮಗಾರಿ ನಡೆಯುವ ಸ್ಥಳದಲ್ಲೇ ಗಮನಿಸುತ್ತಿದ್ದ ನನ್ನ ಕಣ್ಣ ಮುಂದೆಯೇ ಕಾಮಗಾರಿಗೆ ಬಳಸಬೇಕಾದ ಸಿಮೆಂಟ್ ಬ್ಯಾಗ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಯಿತು. ಈ ಬಗ್ಗೆ ಕಾರ್ಮಿಕರನ್ನು ಪ್ರಶ್ನಿಸಲಾಗಿ ನಮಗೆ ಇಷ್ಟೇ ಪ್ರಮಾಣದಲ್ಲಿ ಬಳಸುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನನ್ನಲ್ಲಿ ವಿಡಿಯೋ ದಾಖಲೆಗಳು ಇವೆ. ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಸುವಾಗ ಯಾರೊಬ್ಬ ಅಧಿಕಾರಿ ಸ್ಥಳದಲಲಿ ಇರಲಿಲ್ಲ. ಈ ಬಗ್ಗೆ ಪಿಡಬ್ಲೂಡಿ ಅಧಿಕಾರಿ ಶಿವನಗುತ್ತಿ ಅವರಿಗೂ ಸಹ ಫೋನ್ ಮೂಲಕ ದೂರಿದ್ದೇನೆ. ತನಿಖೆ ನಡೆಸದೇ ಬಿಲ್ ನೀಡಿದಲ್ಲಿ ಲೋಕಾಯುಕ್ತಕ್ಕೆ ದೂರಿ ತಪ್ಪಿತಸ್ಥರಿಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸಮಾಜದ ಅಗತ್ಯಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ತರವಲ್ಲಿ ಇಂದಿನ ಯುವಕರ ಪಾತ್ರ ಮುಖ್ಯವಾಗಿದೆ. ಎನ್ಎಸ್ಎಸ್ ಶಿಬಿರದ ಉದ್ದೇಶ ಮುಖ್ಯ ಉದ್ದೇಶ ಯುವಕರಲ್ಲಿ ದೇಶಾಭಿಮಾನ ಹಾಗೂ ಶ್ರಮ ಜೀವನದ ಕುರಿತು ಅರಿವು ಮೂಡಿಸುವುದಾಗಿದೆ ಎಂದು ಮುಖ್ಯ ಅತಿಥಿ, ಉಪನ್ಯಾಸ ಸದಾನಂದ ಈರನಕೇರಿ ಮಾತನಾಡಿದರು.ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಸಿದ್ದೇಶ್ವರ ಶಿಕ್ಷಕರ ತರಬೇತಿ ಕೇಂದ್ರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಏಳು ದಿನಗಳ ವಿಶೇಷ ಶಿಬಿರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್ಎಂ ಶೆಟ್ಟೆಣ್ಣವರ್ ಹಾಗೂ ರಮೇಶ್ ದಾಯಗೋಡೆ ಪಿಕೆಪಿಎಸ್ ಸದಸ್ಯರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಎಸ್ ಎಸ್ ಈರನಕೇರಿ, ಉಪನ್ಯಾಸಕ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಧೇಯ ಉದ್ದೇಶಗಳನ್ನು ಕುರಿತು ಮಾತನಾಡುತ್ತಾ, ಎನ್ಎಸ್ಎಸ್ ಯೋಜನೆಯೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ಶತಮಾನೋತ್ಸವದ ನಿಮಿತ್ಯವಾಗಿ 1969…

Read More