ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರು ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ಸಿಂದಗಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಅವರ ಅಭಿವೃದ್ದಿ ಕೆಲಸವನ್ನು ಕ್ಷೇತ್ರದ ಜನ ಯಾವತ್ತು ಮರೆಯುವದಿಲ್ಲ ಎಂದು ಸಿಂದಗಿ ತಾಲೂಕು ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ಮತ್ತು ಪಕ್ಷದ ಸದಸತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅಧಿಕಾರ ಅವದಿಯಲ್ಲಿ ಆಲಮೇಲ ಪಟ್ಟಣದವನ್ನು ತಾಲೂಕು ಕೇಂದ್ರ ಗೋಷಣೆ ಮಾಡಲಾಯಿತು ಮತ್ತು ನೂತನ ತಾಲೂಕು ಕೇಂದ್ರದಲ್ಲಿ ತೋಟಗಾರಿಕೆ ಕಾಲೇಜು ಮಂಜುರು ಮಾಡಿಸಿದ ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತದೆ. ಕುಮಾರಸ್ವಾಮಿ ಅವರ ಅಭಿವೃದ್ದಿ ಕೆಲಸಗಳು ಕ್ಷೇತ್ರದ ಜನರ ಮನಸಿನಲ್ಲಿದ್ದು ಅವರ ಮಾಡಿರುವ ಅಭಿವೃದ್ದಿ ಕೆಲಸಗಳು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡಲಾಗುವದು ಎಂದರು.
ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಗಟ್ಟಿಗೊಳಿಸವ ಕೆಸಲ ಪ್ರಾಮಾಣಿಕವಾಗಿ ಮಾಡಲಾಗುತಿದೆ. ಆಲಮೇಲ ತಾಲೂಕಿನ ಅಧ್ಯಕ್ಷ ಮೊಹಮ್ಮದ ಉಸ್ತಾದ ಸಕ್ರೀವಾಗಿ ಕೆಲಸ ಮಾಡದರಿಂದ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅವರನ್ನು ನಿಷ್ಕ್ರೀಯಗೊಳಿಸಿ ಅವರ ಬದಲಿಗೆ ಆಲಮೇಲದ ಗುಂಡು ಕರುಟೆ, ಪಿಂಟು ನಾಯ್ಕೋಡಿ, ಭೀಮಾಶಂಕರ ಬಂಟನೂರ ಅವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲಾಗಿದೆ. ಅವರ ನೇತೃತ್ವದಲ್ಲಿ ಪಕ್ಷದ ಸದಸತ್ವ ಅಭಿಯಾನ ಮಾಡಲಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಭೀಮಾಶಂಕರ ಬಂಟನೂರ ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಮುಖಂಡರಾದ ಗುಂಡು ಕರುಟೆ, ಪಿಂಟು ನಾಯ್ಕೋಡಿ, ಮಲ್ಲಿಕಾರ್ಜುನ ಕುಮಸಗಿ, ರವಿ ಶಿರವಾಳ ಮುಂತಾದವರು ಇದ್ದರು.

