ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ದ್ಯಾಮವ್ವ ದೇವಿ ಮತ್ತು ದುರ್ಗಾ ಮಾತೆಯ ಉಡಿತುಂಬುವ ಕಾರ್ಯಕ್ರಮವನ್ನು ಆದ್ದೂರಿಯಾಗಿ ಆಚರಿಸುವ ಸಲುವಾಗಿ ದೇವಸ್ಥಾನದ ಸಭಾಂಗಣದಲ್ಲಿ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.
ಪ್ರತಿ ವರ್ಷದಂತೆ ನಡೆಯುವ ದೇವತೆಗಳ ನಮ್ಮೂರ ಉತ್ಸವವನ್ನು ಬರುವ ಮೇ ತಿಂಗಳ ೧೨,/೧೩/೧೪ ಮೂರು ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದರು.
ಮೇ ತಿಂಗಳ ೧೨ ಸೋಮವಾರ ದಿವಸ ರಾಜ್ಯ ಮಟ್ಟದ ಕ್ರಷಿ ಮೇಳ ರೈತರ ಜಾತ್ರೆಯ ಉದ್ಘಟನೆ ಮತ್ತು ವಿಚಾರ ಸಂರ್ಕೀಣ ೧೩ ಮಂಗಳವಾರ ದೇವಿಗೆ ಉಡಿ ತುಂಬುವದು. ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆ ಹೊಂದಿದ ಸಾಧನೆ ಮಾಡಿದ ಕೊಲ್ಹಾರ ಪಟ್ಟಣದ ವಿಧ್ಯಾರ್ಥಿಗಳನ್ನು ನಾಗರಿಕರನ್ನು ಗೌರವಿಸಲಾಗುವದು.ಮತ್ತು ರಾತ್ರಿ ೧೦/೩೦ ಕ್ಕೆ ವಿಜಯನಗರ ಜಿಲ್ಹೆಯ ಕೂಡ್ಲಗಿ ತಾಲೂಕಿನ ಹೀರೆಹೆಗಡ್ಯಾಳ ಗ್ರಾಮದ ಕಲಾಭಾರತಿ ಕಲಾ ಸಂಘದವರಿಂದ ರಕ್ತ ರಾತ್ರಿ ಎಂಬ ಪೌರಾಣಿಕ ನಾಟಕ ಇರುವದು.
ದಿನಾಂಕ ೧೪ ಬುಧವಾರ ಕ್ರಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದ ಕೊಲ್ಹಾರ ತಾಲೂಕಿನ ರೈತರಿಗೆ ಕ್ರಷಿ ಪ್ರಶಸ್ತಿ ಪ್ರಧಾನ ಹಾಗೂ ಮನರಂಜನಾತ್ಮಕ ವಾದ್ಯಗಳ ವೈಭ್ಹವ ವಿರುವದು ಎಂದರು.
ಈ ಸಂದರ್ಭದಲ್ಲಿ ಶಶಿಧರ ದೇಸಾಯಿ ಈರಯ್ಯ ಮಠಪತಿ ಎಸ್ ಎನ್ ಗಿಡ್ಡಪ್ಪಗೋಳ ಜಗದೀಶ ಸುನಗದ ಮಂಜು ತುಂಬರಮಟ್ಟಿ ಶೇಕಪ್ಪ ಗಾಣಿಗೇರ ಬಸಪ್ಪ ಗಾಜಿ ವಿರಭದ್ರ ಬಾಗಿ ರಾಮಣ್ಣ ಉಪ್ಪಲದಿನ್ನಿ ಬೀಮಪ್ಪ ಬೀಳಗಿ ವಿಶ್ವಕರ್ಮ ಸಮಾಜ ಬಾಂದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
