Author: editor.udayarashmi@gmail.com

ಜಗ ಬೆಳಗಿದ ಜ್ಯೋತಿಯ ಜನ್ಮಸ್ಥಳ ಇಂಗಳೇಶ್ವರ ಇನ್ನೂ ಕತ್ತಲೆಯಲ್ಲಿ | ಸರ್ಕಾರದ ವಿರುದ್ಧ ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮವು ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಗ್ರಾಮವಾಗಿದ್ದು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಸರ್ಕಾರ ಕೂಡಲೇ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹಾಗೂ ಬಸವಣ್ಣನವರ ವಂಶಸ್ಥರಾದ ಅರವಿಂದ ಕುಲಕರ್ಣಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.ಶನಿವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗತ್ತಿಗೆ ಸಮಾನತೆ ಮತ್ತು ಮಾನವತೆಯ ಸಂದೇಶ ಸಾರಿದ ಬಸವಣ್ಣನವರ ಜನ್ಮಸ್ಥಳದಲ್ಲೇ ಅಭಿವೃದ್ಧಿಯ ಕೊರತೆ ಕಾಡುತ್ತಿದೆ ಎಂದು ಅರವಿಂದ ಕುಲಕರ್ಣಿ ವಿಷಾದ ವ್ಯಕ್ತಪಡಿಸಿದ್ದಾರೆ.ಗ್ರಾಮದಲ್ಲಿ ಇದುವರೆಗೆ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರತಿದಿನ ಬಸವ ಜನ್ಮಸ್ಥಳ ವೀಕ್ಷಣೆಗೆ ಆಗಮಿಸುವ ನೂರಾರು ಭಕ್ತರು ಹಾಗೂ ಪ್ರವಾಸಿಗರು ಬಿಸಿಲು, ಮಳೆ, ಗಾಳಿ ನಡುವೆ ಬಯಲಿನಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಶೌಚಾಲಯದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಯಿ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಸದೃಢ ಮಗುವಿನಆರೋಗ್ಯದ ದೃಷ್ಠಿಯಿಂದ ತಾಯಂದಿರು ನವಜಾತ ಶಿಶುಗಳಿಗೆ ಎದೆಹಾಲು ನೀಡುವಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಲ್ಲನಗೌಡ ಬಿರಾದಾರ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ವಿಜಯಪುರ, ಸುಸೇನಾ ಹೆಲ್ತ್ ಪೌಂಡೇಶನ್, ದಾತ್ರಿ ಮದರ್ಸ ಮಿಲ್ಕ್ ಬ್ಯಾಂಕ್ ಮತ್ತು ಸಿ.ಎಲ್.ಎಮ್.ಸಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ವರ್ಷದ ಘೋಷವಾಕ್ಯದಂತೆ ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನ ಸದೃಢಗೊಳಿಸೋಣ ಎಂಬ ಸಂದೇಶವನ್ನು ಎಲ್ಲ ತಾಯಿಂದರಿಗೆ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ತಾಯಿ ತನ್ನ ಎದೆಹಾಲು ಉಣಿಸುವುದರಿಂದ ಮಗುವಿನ ಆರೋಗ್ಯದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಅಹವಾಲು ಮತ್ತು ಕುಂದು-ಕೊರತೆಗಳನ್ನು ಆಲಿಸಲು ಆ.೩ರಂದು ಸೋಮವಾರ ಮಧ್ಯಾಹ್ನ ೩.೩೦ ರಿಂದ ೪.೩೦ರವರೆಗೆ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದೂರವಾಣಿ ೬೩೬೬೪೨೩೮೮೭ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ, ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು ಸಾರ್ವಜನಿಕರು ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ೨೦೨೬-೨೭ನೇ ಸಾಲಿಗೆ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರವಾಗಿ ಸಾಲ- ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೊಟೇಲ್ ಉದ್ಯಮ (ಕ್ಯಾಟರಿಂಗ್). ಅಂಗಡಿ, ಟೈಲರಿಂಗ್, ಟ್ಯಾಕ್ಸಿ ಹಾಗೂ ಹಸು ಸಾಕಾಣಿಕೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಕನಿಷ್ಠ ೧ ಲಕ್ಷ ರೂ. ಹಾಗೂ ಗರಿಷ್ಠ ೨ ಲಕ್ಷ ರೂ. ಲಕ್ಷ ಆರ್ಥಿಕ ನೆರವು ನೀಡಲಾಗುವುದು.ಆನ್ ಲೈನ್ ಮುಖಾಂತರ ಞsbಜb.ಞಚಿಡಿಟಿಚಿಣಚಿಞಚಿ.gov.iಟಿ, ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಆಗಸ್ಟ್ ೩೧ ಕೊನೆಯ ದಿನಾಂಕ.ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : ೮೭೬೨೨ ೪೯೨೩೦ ಸಂಪರ್ಕಿಸಬಹುದು. ಸ್ಥಳೀಯ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರಪತ್ರ ಬಿಡುಗಡೆ: ಇದೇ ವೇಳೆ ವ್ಯಾಪಕ ಪ್ರಚಾರಕ್ಕಾಗಿ ಕರಪತ್ರಗಳನ್ನು ಪ್ರೊಬೇಷನರಿ ಐಎಎಸ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ೧೬,೬೬,೮೮೨ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ಆನ್ ಲೈನ್ ನಲ್ಲಿ ೪,೦೪೭ ಮತದಾರರು ಗಣತಿ ನಮೂನೆ ಸಲ್ಲಿಸಿದ್ದಾರೆ. ೧,೪೫,೧೬೨ ಶಾಶ್ವತವಾಗಿ ಸ್ಥಳಾಂತರಗೊಂಡರೆ, ೫೩,೫೮೮ ಮತದಾರರು ಮರಣ ಹೊಂದಿದ್ದಾರೆ. ೬೧,೫೦೨ ಮತದಾರರು ಗೈರು-ಸಂಗ್ರಹಿಸಲಾಗದ ಉಳಿದಿದ್ದಾರೆ. ೨೮,೪೯೬ ಮತದಾರರು ನೋಂದಾಯಿಸಿಕೊಂಡಿದ್ದಾರೆ.ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಇಂಡಿ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿ.ಎಲ್.ಒ ಗಳಿಂದ ಪ್ರಕ್ರಿಯೆ ಮುಂದುವರಿದಿದೆ.ಸಾರ್ವಜನಿಕರು ಮತ್ತು ಮತದಾರರು ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್ hಣಣಠಿs://viರಿಚಿಥಿಚಿಠಿuಡಿಚಿ.ಟಿiಛಿ.iಟಿ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮನಗೂಳಿಯಲ್ಲಿ ಯುವನಿಧಿ ಅರಿವು ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳಿಗೆ ಸರ್ಕಾರವು ಅನುಷ್ಟಾನಗೊಳಿಸುವ ಪಂಚಾ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತರ ಬಸವನಬಾಗೇವಾಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮನಗೂಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಜುಲೈ.೩೧ರ ಶುಕ್ರವಾರ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಯುವನಿಧಿ ಯೋಜನೆ’ ಈಗಾಗಲೇ ಸರ್ಕಾರವು ಅನುಷ್ಠಾನಗೊಳಿಸಿದ್ದು. ಈ ಯೋಜನೆಯ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ ಎಂದರು.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗ ಅಧಿಕಾರಿ ಮಹೇಶ. ಜೆ. ಮಾಳವಾಡೇಕರ ಮಾತನಾಡಿ, ಯುವನಿಧಿ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಬಸವನಬಾಗೇವಾಡಿ ತಾಲೂಕಿನ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮಹಿಬೂಬ ನಾಲ್ನೋಡಿ ಮಾತನಾಡಿ, ಯುವನಿಧಿ ಯೋಜನೆಯಡಿ ಪದವೀಧರರಿಗೆ ೩೦೦೦ ಮತ್ತು ಡಿಪ್ಲೋಮಾದಾರರಿಗೆ ೧೫೦೦ ಸರಕಾರ ನಿರುದ್ಯೋಗ ಭತ್ಯೆಯನ್ನು ೨ ವರ್ಷಗಳವರೆಗೆ ನೀಡುತ್ತಿದೆ. ಬಸವನಬಾಗೇವಾಡಿ ತಾಲೂಕಿನ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ಇನ್ನು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿ ಮಧುರಚೆನ್ನರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದ ದಾರ್ಶನಿಕ ಕವಿ ಭೀಮೆಯ ತಟದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಕಾವ್ಯದ ಮೂಲಕ ನಮ್ಮ ನೆಲದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ ಎಂದು ಸಾಹಿತಿ ಸಿ.ಎಂ. ಬಂಡಗಾರ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲಸಂಗಿ ಗೆಳೆಯ ವತಿಯಿಂದ ಪ್ರತಿಷ್ಠಾನ ಹಾಗೂ ಕಲ್ಪವೃಕ್ಷ ಕಲಾವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಧುರಚೆನ್ನರ 123ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿಸರ್ಗದೊಂದಿಗೆ ಕಾವ್ಯದ ಲೇಪನ ಮಾಡಿ ಜಾಗತಿಕ ಆಧ್ಯಾತ್ಮಿಕ ಸಾಹಿತ್ಯಲೋಕದಲ್ಲಿ ಮಧುರಚೆನ್ನರು ವಿಶಿಷ್ಟ ಹೆಸರನ್ನು ಗಳಿಸಿದ್ದು, ಹಲಸಂಗಿಯನ್ನು ನವೋದಯ ಕಾವ್ಯದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಪವೃಕ್ಷ ಕಾಲೇಜಿನ ಪ್ರಾಂಶುಪಾಲ ಎ.ಬಿ. ಸಿಂದಗಿ ಮಾತನಾಡಿ ಮಧುರಚೆನ್ನರ ಸಾಹಿತ್ಯ ಮತ್ತು ಚಿಂತನೆಯ ಮೇಲೆ ಶ್ರೀ ಅರವಿಂದರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ಹಿಂದುಳಿದ ವರ್ಗ (ಅ) ನಿರ್ದೇಶಕ ಸ್ಥಾನಕ್ಕೆ ವಿನಾಯಕ ಬಸವರಾಜ ಪತ್ತಾರ ಅವರು ಅವಿರೋಧವಾಗಿ ಆಯ್ಕೆಯಾದರು.ಈ ವೇಳೆ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಪ್ರತಿಷ್ಠಿತ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಕ್ಕೆ ನಾನು ಚಿರ ಋಣಿ, ಎಲ್ಲ ನಿರ್ದೇಶಕರ, ಗ್ರಾಹಕರ, ಸಿಬ್ಬಂದಿಗಳ ಸಹಾಯ ಸಹಕಾರದೊಂದಿಗೆ ನನಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ, ‌ಬ್ಯಾಂಕಿನ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ವಿನಾಯಕ ಪತ್ತಾರ ಹೇಳಿದರು.ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಸಹಕಾರ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ, ಉಪಾಧ್ಯಕ್ಷ ವಿಕಾಸ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ,ಗೋವಿಂದ ಜೋಶಿ ಶಂಕರ ಕುಲಕರ್ಣಿ, ಪವನ ಕುಲಕರ್ಣಿ, ವೀಣಾ ಟಂಕಸಾಲಿ, ರಾಧಾ ತಾವರಗೇರಿ, ಸಚೀನ್ ಮದ್ದಿಮಠ, ವಿಶ್ವನಾಥ ತಳವಾರ, ಪವನ ಮುರಾಳ, ಅಶೋಕ ಉಪಾಧ್ಯೆ, ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ, ಕಲ್ಯಾಣಿ ಸಂಗಮ, ಕೃಷ್ಣಾ ಜೋಶಿ, ಮಾಜಿ ನಿರ್ದೇಶಕರು,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಆ.೮ ರಿಂದ ೧೦ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಆಗಸ್ಟ್ ೮ರಂದು ಮಧ್ಯಾಹ್ನ ವಿಜಯಪುರಕ್ಕೆ ಆಗಮಿಸುವ ಅವರು, ಮಧ್ಯಾಹ್ನ ೩ ರಿಂದ ೪:೩೦ರವರೆಗೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ,ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.ಸಂಜೆ ೫ ಗಂಟೆಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಸಿಕ್ಯಾಬ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು ಅಂದು ವಾಸ್ತವ್ಯ ಮಾಡುವರು.ಆಗಸ್ಟ್ ೧೦ರಂದು ಮಧ್ಯಾಹ್ನ ೧:೩೦ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More