Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜೀವನ ಮೌಲ್ಯಗಳನ್ನು ಬೋಧಿಸಿದ ಡಾ.ರಾಜಕುಮಾರ್
(ರಾಜ್ಯ ) ಜಿಲ್ಲೆ

ಜೀವನ ಮೌಲ್ಯಗಳನ್ನು ಬೋಧಿಸಿದ ಡಾ.ರಾಜಕುಮಾರ್

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು, ಡಾ.ರಾಜಕುಮಾರ್ ಅವರ ಸರಳತೆ, ಶ್ರೇಷ್ಠತೆ ಎಲ್ಲರಿಗೂ ಸ್ಪೂರ್ತಿ ಎಂದರು.
ಉಪನ್ಯಾಸ ಮಂಡಿಸಿದ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದು ಬಹುಭಾಷಾ ನಟರಾಗಿ ಮಿಂಚುವ ಅವಕಾಶ ಬಂದರೂ ಸಹ ಅದನ್ನು ನಿರಾಕರಿಸಿ ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವೆ ಎಂಬ ಅವರ ನಿಲುವೇ ಅವರ ಕನ್ನಡಾಭಿಮಾನಕ್ಕೆ ದಿವ್ಯ ನಿದರ್ಶನ ಎಂದರು.
ಗೋಕಾಕ್ ಚಳವಳಿಗೆ ಒಂದು ಹೊಸ ಚೈತನ್ಯ ತುಂಬಿ ಅದರ ಯಶಸ್ವಿ ಹೋರಾಟದಲ್ಲಿಯೂ ಡಾ.ರಾಜ್ ಅವರ ಪಾತ್ರ ಅನನ್ಯ ಎಂದರು.
ಉಪನ್ಯಾಸ ಮಂಡಿಸಿದ ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಡಾ.ರಾಜಕುಮಾರ್ ಅವರದ್ದು ಹೋಲಿಕೆಗೆ ನಿಲುಕದ ವ್ಯಕ್ತಿ, ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ್ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ್ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು, ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ಅವರಿಗೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೀಮರಾವ ಜಿಗಜಿಣಗಿ, ಸೋಮು ಕಲ್ಲೂರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ, ಶರಣು ಸಬರದ ಮೊದಲಾದವರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ವಿರೇಶ ವಾಲಿ ಪ್ರಾರ್ಥಿಸಿದರು. ವಿರೇಶ ವಾಲಿ ಹಾಗೂ ಮಂಜುಳಾ ಹಿಪ್ಪರಗಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ಜನಮನಸೂರೆಗೊಂಡ ಕಲಾವಿದರ ಪ್ರದರ್ಶನ

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು ೭೦ಕ್ಕೂ ಹೆಚ್ಚು ಜನ ಕಲಾವಿದರು ಡಾ.ರಾಜ್ ಕುಮಾರ ಹಾಡು ಹಾಗೂ ಸಂಭಾಷಣೆಗಳನ್ನು ಹೇಳುವ ಮೂಲಕ ಜನಮನಸೂರೆಗೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು.
ಬೆಳಿಗ್ಗೆ ೯ ಗಂಟೆಯಿಂದ ಆರಂಭವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಕಲಾವಿದರಿಂದ ಸ್ಪಂದನೆ ಅದ್ಭುತವಾಗಿತ್ತು..

“ಡಾ.ರಾಜಕುಮಾರ ಕನ್ನಡ ಚಿತ್ರರಂಗದ ಧೃವತಾರೆ. ಎಂತಹ ಪಾತ್ರಗಳನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ಮೇರುನಟರಾಗಿದ್ದರು. ಅವರ ಕನ್ನಡಾಭಿಮಾನ, ಸರಳ ಸಜ್ಜನ ವ್ಯಕ್ತಿತ್ವ ನಮಗೆಲ್ಲ ಮಾದರಿಯಾಗಬೇಕು.”

– ಅಮರೇಶ ದೊಡಮನಿ
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026
    In ದಿನಪತ್ರಿಕೆ
  • ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ
    In (ರಾಜ್ಯ ) ಜಿಲ್ಲೆ
  • ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ
    In (ರಾಜ್ಯ ) ಜಿಲ್ಲೆ
  • ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ
    In (ರಾಜ್ಯ ) ಜಿಲ್ಲೆ
  • ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ
    In (ರಾಜ್ಯ ) ಜಿಲ್ಲೆ
  • ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಅಮೃತ ೨ ಯೋಜನೆಯಡಿ ರೂ.೩.೦೪ಕೋಟಿ ಮಂಜೂರು :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಎಸ್.ಕೆ ಹೂಗಾರಗೆ ಪಿಎಚ್ಡಿ ಪದವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.