Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ

ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..

ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಸ್ಸೆಸ್ಸೆಲ್ಸಿ: ಆಲಮಟ್ಟಿ ಎಂಎಚ್ಎಂ ಶಾಲೆಗೆ ಶೇ.೯೭.೫೯ ಫಲಿತಾಂಶ
(ರಾಜ್ಯ ) ಜಿಲ್ಲೆ

ಎಸ್ಸೆಸ್ಸೆಲ್ಸಿ: ಆಲಮಟ್ಟಿ ಎಂಎಚ್ಎಂ ಶಾಲೆಗೆ ಶೇ.೯೭.೫೯ ಫಲಿತಾಂಶ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಪ್ರಸಕ್ತ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-೧ರಲ್ಲಿ ಸ್ಥಳೀಯ ಎಸ್.ವಿ.ವಿ. ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಂಎಚ್ಎಂ ಪ್ರೌಢಶಾಲಾ ವಿಭಾಗ ಶೇ.೯೭.೫೯ ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ.
ಪರೀಕ್ಷೆಗೆ ಹಾಜರಾಗಿದ್ದ ೮೩ ವಿದ್ಯಾರ್ಥಿಗಳಲ್ಲಿ ೮೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ ೭, ಪ್ರಥಮ ಶ್ರೇಣಿಯಲ್ಲಿ ೪೬, ದ್ವಿತೀಯ ಶ್ರೇಣಿಯಲ್ಲಿ ೧೭ ಹಾಗೂ ತೃತೀಯ ಶ್ರೇಣಿಯಲ್ಲಿ ೧೧ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶಾಲೆ, ಸಂಸ್ಥೆ ಹಾಗೂ ಆಲಮಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.೯೬.೮೦ ಅಂಕ ಗಳಿಸಿ ಕುಮಾರಿ ಸಂಜನಾ ದಳವಾಯಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ತನುಶ್ರೀ ಧನವೆ ಶೇ.೯೩.೧೨ ಅಂಕಗಳೊಂದಿಗೆ ದ್ವಿತೀಯ, ಕುಮಾರಿ ಸುಂದರಮ್ಮ ಬಡಿಗೇರ ಶೇ.೯೨.೮೦ ಅಂಕಗಳೊಂದಿಗೆ ತೃತೀಯ ಹಾಗೂ ಕುಮಾರಿ ರತ್ನಾ ಜಲ್ಲಿ ಶೇ.೯೦.೪೦ ಅಂಕಗಳೊಂದಿಗೆ ಚತುರ್ಥ ಸ್ಥಾನ ಪಡೆದಿದ್ದಾರೆ. ಶಾಲೆಯ ಟಾಪರ್‌ಗಳೆಲ್ಲ ಬಾಲಕಿಯರೇ ಎಂಬುದು ವಿಶೇಷ.
ಹಿಂದಿ ವಿಷಯದಲ್ಲಿ ತನುಶ್ರೀ ಧನವೆ ಹಾಗೂ ಗೋಪಾಲ ಮನಗೂಳಿ ೧೦೦ಕ್ಕೆ ೧೦೦ ಅಂಕ ಪಡೆದು ಗಮನ ಸೆಳೆದಿದ್ದಾರೆ. ಕರುನಾಡು ಗಾಂಧಿ ಹರ್ಡೇಕರ ಮಂಜಪ್ಪ ಅವರ ಹೆಸರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಹಿನ್ನೆಲೆಯ ಈ ಶಾಲೆಯ ಫಲಿತಾಂಶ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿದೆ.
ಮುಖ್ಯ ಶಿಕ್ಷಕ ಎಸ್.ಐ. ಗಿಡ್ಡಪ್ಪಗೋಳ ಮಾತನಾಡಿ, “ಲಿಂ. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಕನಸನ್ನು ಸಂಸ್ಥೆಯ ಕಾರ್ಯದರ್ಶಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಅವರು ನನಸು ಮಾಡಿದ್ದಾರೆ. ಹೈಟೆಕ್ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ, ೫೦ ಎಕರೆಗೂ ಹೆಚ್ಚು ವಿಸ್ತೀರ್ಣದ ಕಾಂಪೌಂಡ್ ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಈಗಿನ ಪೀಠಾಧ್ಯಕ್ಷ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಸಹ ಲಿಂ. ಶ್ರೀಗಳ ಕನಸುಗಳನ್ನು ಮುಂದುವರಿಸುತ್ತಿದ್ದಾರೆ” ಎಂದರು.
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಳಗಕ್ಕೆ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯ ಎಸ್.ಐ. ಗಿಡ್ಡಪ್ಪಗೋಳ, ಸಿಬ್ಬಂದಿ, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ

ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..

ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಎಸ್ಸೆಸ್ಸೆಲ್ಸಿ: ಚಿಮ್ಮಡ ವಿದ್ಯಾರ್ಥಿಗಳ ಉತ್ತಮ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದ್ಯಾರ್ಥಿ ಜೀವನ ಅಮೂಲ್ಯ, ಅದು ವ್ಯರ್ಥವಾಗದಿರಲಿ
    In ವಿಶೇಷ ಲೇಖನ
  • ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಚಿಮ್ಮಡ ವಿದ್ಯಾರ್ಥಿಗಳ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಆಲಮೇಲ ಗ್ರಾಮೀಣಾಭಿವೃದ್ಧಿ ಶಾಲೆಯ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಮೂಲಾಧಾರ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಕಲಕೇರಿ ಆದರ್ಶ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಪಾವಿತ್ರ್ಯತೆ, ಪರಿಶುದ್ಧತೆ ಕಂಡುಕೊಳ್ಳುವ ಹಜ್ ಯಾತ್ರೆ :ನದಾಫ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಆಲಮಟ್ಟಿ ಎಂಎಚ್ಎಂ ಶಾಲೆಗೆ ಶೇ.೯೭.೫೯ ಫಲಿತಾಂಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.