Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂದು (ಸೆಪ್ಟೆಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ನಿಮಿತ್ತ ಈ ವಿಶೇಷ ಲೇಖನ ಲೇಖನ- ಬಸವರಾಜ ಪೂಜಾರಭೂಮಾಪಕರುಯ ಬೂದಿಹಾಳಮೊ: 9535854360 ಉದಯರಶ್ಮಿ ದಿನಪತ್ರಿಕೆ ನಾನಾಗ ಆಗ ತಾನೆ ಆರನೇ ತರಗತಿಯಿಂದ ಏಳನೇ ತರಗತಿಗೆ ಸೇರಿದ ಪ್ರಾರಂಭದ ದಿನಗಳು. ಏನು ತಿಳಿಯದ ಮುಗ್ಧ ಮನಸ್ಸಿನ ಆಟೋಪಾಠಗಳ ಗಮನ ಹರಿಸುವ ಎಳೆ ವಯಸ್ಸು. ಹೊಸ ತರಗತಿಗೆ ಯಾವ ಕೋಣೆಯಲ್ಲಿ ಕೂಡಬೇಕೆಂಬ ಗೊಂದಲದ ನಡುವೆಯೂ ಶಾಲೆಗೆ ಹಾಜರಾದೇವು. ಕಡಿಮೆ ಕೋಣೆಗಳನ್ನೊಳಗೊಂಡ ಒಂದು ಪುಟ್ಟ ಹಳ್ಳಿಯ ಸರ್ಕಾರಿ ಶಾಲೆ. ಮೈದಾನದ ಬೆಂಗಾಳಿ ಮರ, ಬೇವಿನ ಮರದ ಕೆಳಗಡೆ ತರಗತಿಯನ್ನು ನಡೆಸುವ ಎಸಿ ಕ್ಲಾಸ್ ರೂಮಿನ ಕಾಲವದು. ಅಂತಹದರಲ್ಲಿ ನಮ್ಮ ಏಳನೇ ತರಗತಿಗೂ ಮುಖ್ಯೋಪಾಧ್ಯಾಯರ ಕೋಣೆಯ ನಡುವೆ ಟಿಜೂರಿಗಳಷ್ಟೇ (ಕಪಾಟಗಳು) ಅಡ್ಡಲಾಗಿ ನಿಂತಿದವು. ಹೀಗಾಗಿ ಈ ತರಗತಿಗೆ Z+ ಸೆಕ್ಯೂರಿಟಿ ತರ ಮುಖ್ಯೋಪಾಧ್ಯಾಯರ ಮತ್ತು ತರಗತಿ ಶಿಕ್ಷಕರ ಕಣ್ಣು ಸದಾ ನಮ್ಮ ಮೇಲೆಯೇ, ಬಾಯಿ ಬಿಡುವಂತಿಲ್ಲ, ಮಾತನಾಡುವಂತಿಲ್ಲ, ತಿರಗಾಡುವಂತಿಲ್ಲ, ಸುಮ್ಮನೆ ಶಿಕ್ಷಕರೇಳುವ ಪಿನ್ ಡ್ರಾಪ್ ಸೈಲೆಂಟ್ ಖಾಯಂವಾಗಿಬಿಡ್ತು. ಮಕ್ಕಳಾದ…
ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನಡೆದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ವಿದ್ಯುತ್ ಅವಘಢ ಸಂಭವಿಸಿದ ಘಟನೆಗೆ ಯಾರು ಹೊಣೆ? ಎಂದು ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಲ್ಕೈದು ವರ್ಷಗಳ ಹಿಂದೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ನೂರಾರು ಕೋಟಿ ರೂ. ತಂದಿದ್ದೇನೆ ಎಂದು ಜಂಬ ಕೊಚ್ಚಿಕೊಂಡ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕಾರ್ಯ ಮಾಡಿದ್ದರೆ ಜೀವ ಉಳಿಯುತ್ತಿತ್ತಲ್ಲವೇ? ಕೇವಲ ಮಾತನಾಡುವುದು ಮಾತ್ರ ನಮ್ಮ ಶಾಸಕರಿಗೆ ಗೊತ್ತಿದೆ ಎಂದು ಪರಶುರಾಮಸಿಂಗ್ ರಜಪೂತ ಕಿಡಿಕಾರಿದ್ದಾರೆ.ಈ ವಿಷಯದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ, ಆದರೆ ಓರ್ವ ಯುವಕ ಅಸುನೀಗಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ, ಹೆತ್ತ ಮಗುವನ್ನು ಕಳೆದುಕೊಂಡ ಪಾಲಕರ ರೋಧನ ನೋಡಲಾಗುತ್ತಿಲ್ಲ, ಕೇವಲ ಹೇಳಿಕೆ ನೀಡುವಲ್ಲಿಯೇ ನಮ್ಮ ಶಾಸಕರು ಕಾಲಹರಣ ಮಾಡುವಲ್ಲಿ ತೊಡಗಿದ್ದಾರೆ,…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಕ್ರೀಡೆಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬೇಕೆಂದು ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ಕಾರ್ಯಾಧ್ಯಕ್ಷ ವಿದ್ಯಾಧರ ಸವದಿ ಹೇಳಿದರು.ಗ್ರಾಮದ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಲಯ ಮಟ್ಟದ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಕ್ರೀಢೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತಿದ್ದು ಸತತ ಪ್ರಯತ್ನ ಪಟ್ಟಲ್ಲಿ ದೇಶ, ನಾಡಿನ ಉತ್ತಮ ಕ್ರೀಢಾಪಟುವಾಗಿ ಬೆಳೆಯಲಿದ್ದಾರೆಂದರು.ವಲಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ದ್ರಾಕ್ಷಾಯಿಣಿ ಮಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಗುವಿನಲ್ಲಿ ಶಿಸ್ತು, ಶೃಧ್ದೆ, ಪರಸ್ಪರ ಗೌರವ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಬೆಳೆಸಲು ಕ್ರೀಢೆಗಳು ಅತ್ಯಂತ ಅವಶ್ಯಕವೆಂದರು.ತುಂತುರು ಮಳೆಯ ನಡುವೆಯೂ ಕ್ಲಷ್ಟರ ಮಟ್ಟದ ಶಾಲೆಗಳ ವಿದ್ಯಾರ್ಥಿಗಳು ಕ್ರೀಢೆಗಳಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.ಸ್ಥಳಿಯ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ, ಹೆಣ್ಣುಮಕ್ಕಳ ಮಾದರಿ ಶಾಲೆಯ ಮುಖ್ಯ ಗುರು ಎಂ.ಎಸ್. ಬಿರಾದರ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾದ್ಯಾಯರು, ದೈಹಿಕ ಶೀಕ್ಷಕರು ಕಾರ್ಯಕ್ರಮದಲ್ಲಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಡೋಣಿ ತೀರದ ಗ್ರಾಮಗಳ ಜಮೀನುಗಳಲ್ಲಿ ಡೋಣಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಜಂಟಿ ಸಮೀಕ್ಷೆ ಕೈಗೊಂಡು ಒಟ್ಟು ಹಾನಿಗೊಳಗಾದ ಬೆಳೆಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ತಿಳಿಸಿದರು.ಪಟ್ಟಣದಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ತಾಲ್ಲೂಕಿನ ಡೋಣಿ ತೀರದ ಗ್ರಾಮಗಳಾದ ಮಾರ್ಕಬ್ಬಿನಹಳ್ಳಿಯಲ್ಲಿ ೬೯.೦೮ ಹೆಕ್ಟೆರನಲ್ಲಿ ಹತ್ತಿ ಹಾಗೂ ತೊಗರಿ ಬೆಳೆಗಳು ಹಾಗೂ ೩.೬೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ, ಸಾತಿಹಾಳ ಗ್ರಾಮದ ೯೫.೯ ಹೆಕ್ಟೆರ್‌ನಲ್ಲಿ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳು, ಹಾಗೂ ೧.೬೦ ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ, ಭೈರವಾಡಗಿ ಗ್ರಾಮದ ೮೭.೯೩ ಹೆಕ್ಟೆರ್‌ನಲ್ಲಿ ಹತ್ತಿ, ತೊಗರಿ, ಮೆಕ್ಕೆಜೋಳ ಬೆಳೆಗಳು. ೨೧.೩೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಯಾಳವಾರ ಗ್ರಾಮದ ೯೯.೩೨ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಹತ್ತಿ ಬೆಳೆಗಳು. ೨.೭೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಕೊಂಡಗೂಳಿ ಗ್ರಾಮದ ೮೮.೩೪ ಹೆಕ್ಟೆರ್‌ನಲ್ಲಿ ತೊಗರಿ, ಹತ್ತಿ ಬೆಳೆಗಳು. ಕಡಕೋಳ ಗ್ರಾಮದ ೫೫.೨೩ ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಹತ್ತಿ ಬೆಳೆಗಳು. ೦.೫೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ.…
ಕೊಲ್ಹಾರ ತಾಲೂಕು ರಚನೆ ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಕೋಮಾರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮುದ್ದೇಬಿಹಾಳ ಪಟ್ಟಣದಲ್ಲಿ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸರಕಾರ ಮಂಜೂರು ಮಾಡಿರುವದು ಸ್ವಾಗತಾರ್ಹ ವಿಷಯವಾದರೂ ಕೊಲ್ಹಾರ ಕಂದಾಯ ತಾಲೂಕನ್ನು ಯಾವುದೇ ಕಾರಣಕ್ಕೂ ಮುದ್ದೇಬಿಹಾಳ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದು ಎಂದು ಕೊಲ್ಹಾರ ತಾಲೂಕು ರಚನಾ ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಲಯದಿಂದ ಅಖಂಡ ಬಸವನ ಬಾಗೇವಾಡಿ ತಾಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷರಿಗೆ ಕೊಲ್ಹಾರ ಕಂದಾಯ ತಾಲೂಕನ್ನು ಮುದ್ದೇಬಿಹಾಳ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಅಭಿಪ್ರಾಯವನ್ನು ಕೇಳಿದ್ದು ಇದಕ್ಕೆ ಬಸವನ ಬಾಗೇವಾಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಕೊಲ್ಹಾರ ಕಂದಾಯ ತಾಲೂಕನ್ನು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಯಾವುದೇ ಹಳ್ಳಿಯ ಹೆಸರನ್ನು ಕೂಡ ಸೇರಿಸದೇ ಕೊಲ್ಹಾರ ಕಂದಾಯ ತಾಲೂಕನ್ನು ಈಗಿರುವ ವಿಜಯಪೂರ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ…
ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಸಿಂದಗಿ ಪಿಎಸ್‌ಐ ಆರೀಫ್ ಮುಷಾಪುರಿ ಮನವಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿಗಳು ಜಾಗರೂಕತೆಯಿಂದ ಎಚ್ಚರಿಕೆ ವಹಿಸಿ ವಿದ್ಯುತ್ ತಂತಿಯೆಡೆಗೆ ಗಮನ ಹರಿಸಬೇಕು ಎಂದು ಸಿಂದಗಿ ಪಿಎಸ್‌ಐ ಆರೀಫ್ ಮುಷಾಪುರಿ ಮನವಿ ಮಾಡಿಕೊಂಡರು.ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಗಜಾನನ ಯುವಕ ಮಂಡಳಿ, ರಾಗರಂಜಿನಿ ಸಂಗೀತ ಅಕಾಡೆಮಿ, ಎಬಿಸಿಡಿ ನೃತ್ಯ ತರಬೇತಿ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಚತುರ್ಥಿ ಎಂಬುದು ಕೇವಲ ಮನೆಯಲ್ಲಿ ಆಚರಣೆ ಮಾಡುವುದಲ್ಲ. ಸಾರ್ವಜನಿಕವಾಗಿ ಭಾರತದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಚರಣೆ ಮಾಡುವ ಹಬ್ಬ ಎಂದರು.ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸ್ವಾಮಿ ವಿವೇಕಾನಂದ ಗಜಾನನ ಮಂಡಳಿಯ ಅಧ್ಯಕ್ಷ ಮುತ್ತು ಮುಂಡೇವಾಡಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿಗೆ ಸಹಕರಿಸಿದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಗರಂಜಿನಿ ಸಂಗೀತ ಅಕಾಡೆಮಿ, ಎಬಿಸಿಡಿ ನೃತ್ಯ ತರಬೇತಿಯ ಮಕ್ಕಳ ನೃತ್ಯ,…
ಒಳಮೀಸಲಾತಿ ಹಂಚಿಕೆ ವಿಚಾರದಲ್ಲಾದ ತಾರತಮ್ಯಕ್ಕೆ ತೀವ್ರ ಖಂಡನೆ | ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಹಾಗೂ ತಾಲೂಕು ಬಂಜಾರ ಸಂಘದಿಂದ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಸರ್ಕಾರದ ತಾರತಮ್ಯವನ್ನು ಖಂಡಿಸಿ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಬೃಹತ್ ಪ್ರತಿಭಟನೆ ಬಂಜಾರ ಸಮಾಜ ಬಾಂಧವರು ಮಾಡಿದರು.ಪಟ್ಟಣದ ಸಂತ ಸೇವಾಲಾಲ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ಸಮಾಜ ಬಾಂಧವರು ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮಾರ್ಗವಾಗಿ ಗಣಪತಿ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದರು.ಬಸವೇಶ್ವರ ವೃತ್ತದಲ್ಲಿ ಜರುಗಿದ ಪ್ರತಿಭಟನೆ ಸಭೆ ಉದ್ದೇಶಿಸಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ತಾಲೂಕಾಧ್ಯಕ್ಷ ಬಾಳು ರಾಠೋಡ ಮಾತನಾಡಿ, ಒಳಮೀಸಲಾತಿ ಕುರಿತು ನೀಡಿದ ವರದಿ ಅವೈಜ್ಞಾನಿಕ, ದೋಷಪೂರಿತವಾಗಿರುವ ವರದಿಯನ್ನು ಸರ್ಕಾರ ಜಾರಿಗೆ ತರಲು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ದೇಶದ ಉಳಿವಿಗಾಗಿ ನಾವೆಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಶತಮಾನ ಕಂಡ ಸಂತ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೇರೆಯವರಂತೆ, ದೇಶದ ಅನ್ನ ತಿಂದು, ನೀರು ಕುಡಿದು, ಗಾಳಿ ಸೇವಿಸುವ ಯಾವೊಬ್ಬ ಹಿಂದೂ ದೇಶದ್ರೋಹಿ ಕೆಲಸ ಮಾಡಲ್ಲ, ಅದೇ ಸನಾತನ ಧರ್ಮ. ರಾಮಾಯಣ ವಾಲ್ಮೀಕಿ ಬರೆದರು, ಮಹಾಭಾರತ ವೇದ ವ್ಯಾಸರು ಬರೆದರು, ದೇಶದ ಪವಿತ್ರ ಸಂವಿಧಾನ ನಾನು ಬರೆಯುತ್ತಿರುವೆ ಎಂದು ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರೇ ಹೇಳಿಕೊಂಡಿದ್ದಾರೆ. ಎಲ್ಲಿದೆ ಜಾತಿ? ಜಾತಿ ಜಾತಿಯಿಂದ ಹೊರ ಬಂದು ನಾವೆಲ್ಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಜಲನಗರದ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೆ.೦೯ ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ ಎಂದು ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೆಚ್ಚು ಹೆಚ್ಚು ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಡಾ.ಬಿ.ಆರ್.ಅಂಬೆಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಪಠ್ಯದೊಂದಿಗೆ ಕ್ರೀಡೆಗಳಲ್ಲಿಯೂ ಭಾಗಿಯಾಗಿ ಸತತ ಪರಿಶ್ರಮದಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.ಡಾ.ಜಾವೀದ ಜಮಾದಾರ ಅವರು ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಾಧನೆಯ ಬರೆದು ಮೈಲುಗಲ್ಲು ಸ್ಥಾಪಿಸುವ ಮೂಲಕ ಜಿಲ್ಲೆ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಕ್ರೀಡೆಗಳಲ್ಲಿ ಭಾಗಿಯಾಗಿ, ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂಬುದು ಮನವರಿಕೆ ಮಾಡಿಕೊಂಡು…
