ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನವು ಕೊಡಮಾಡುವ ಉತ್ತಮ ಪುಸ್ತಕ ಪ್ರಶಸ್ತಿಗೆ ಗಗೋಚ ಖ್ಯಾತಿಯ ಸಾಹಿತಿ ಗಣಪತಿ ಗೋ ಚಲವಾದಿ ಯವರ ಕಥಾಸಂಕಲನ “ಎದ್ಯಾಗಿನ ಬ್ಯಾನಿ” ಆಯ್ಕೆಯಾಗಿದೆ. 2025ರ ಮೇ 11 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಭಾವಸಂಗಮ ಹನ್ನೊಂದನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.

