ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವವೊಂದು ಪಟ್ಟಣದ ಕುಂಟೋಜಿ ರಸ್ತೆಯ ಬಳಿಯ ಬಸವ ಇಟರ್‌ನ್ಯಾಶನಲ್ ಶಾಲೆಯ ಬಳಿ ಪತ್ತೆಯಾಗಿದೆ.
ಮೃತ ದುರ್ದೈವಿಯನ್ನು ಶಿವಪ್ಪ ಆರೇಶಂಕರ(೪೫) ಎಂದು ಗುರುತಿಸಲಾಗಿದೆ. ಮೃತರು ಹೆಸ್ಕಾಂ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ, ಪುತ್ರ, ಈರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಏ೨೮ ರಂದು ಈತ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
