ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಗಜ್ಜೋತಿ ಬಸವೇಶ್ವರರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ಹಿಂದೂ ಮುಸ್ಲಿಂ ಎನ್ನದೇ ಸರ್ವ ಸಮಾಜದ ಬಾಂಧವರು ಭಾಗಿಯಾಗಿ ಅದ್ಧೂರಿಯಿಂದ ನಡೆಸಿದರು.
ಪಟ್ಟಣದ ಕಿಲ್ಲಾಗಲ್ಲಿಯ ಹೊಸಮಠದಿಂದ ಶುರುವಾದ ಮೆರವಣಿಗೆ, ಸರಾಫ ಬಜಾರ, ದ್ಯಾಮವ್ವದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ಮಠ, ವಾಲ್ಮೀಕಿ ವೃತ್ತ ಮಾರ್ಗವಾಗಿ ಸಾಗಿ ಬೊಮ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.
ಪ್ರಮುಖರಾದ ದಾನಯ್ಯ ಹಿರೇಮಠ ಅವರು ಬಸವೇಶ್ವರಾಗಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ನಿವೃತ್ತ ಸೈನಿಕ ಆರ್.ಐ.ಹಿರೇಮಠ, ಪುರಸಭೆ ಸದಸ್ಯರಾದ ವಿರೇಶ ಹಡಲಗೇರಿ, ಶಿವು ಶಿವಪೂರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ರಾಜು ಕರಡ್ಡಿ, ಸಂಗಣ್ಣ ಬಿರಾದಾರ(ಜಿಟಿಸಿ), ಸುಧೀರ ನಾವದಗಿ, ಬಿ.ಎ.ಚಿನಿವಾರ ವಕೀಲರು, ಭರತ ಭೋಸಲೆ, ಡಿಎಸ್‌ಎಸ್ ಮುಖಂಡ ಹರೀಶ ನಾಟೆಕಾರ, ಚಂದ್ರಶೇಖರ ಶಿವಯೋಗಿಮಠ, ಜಗದೀಶ ಲಕ್ಷಟ್ಟಿ, ಶಿವು ಬಿರಾದಾರ, ಸಿಕಂದರ ಜಾನ್ವೇಕರ, ಬುಡ್ಡಾ ನಿಡಗುಂದಿ, ಪರಶುರಾಮ ನಾಲತವಾಡ, ಟಿ.ಭಾಸ್ಕರ, ಸಂಗಣ್ಣ ಮೇಲಿನಮನಿ, ಅಶೋಕ ಚಟ್ಟೇರ, ಸದಾಶಿವ ಮಠ, ಶ್ರೀಶೈಲ ಪೂಜಾರಿ, ಅಶೋಕ ನಾಡಗೌಡ, ಅಪ್ಪು ದೇಗಿನಾಳ, ಹುಲಗೇಶ ಈಳಗೇರ, ರವಿ ಅಮರಣ್ಣವರ, ಸಂತೋಷ ಬಾವೂರ, ಶರಣು ಪಡದಾಳಿ, ಗೋಪಿ ಮಡಿವಾಳರ, ರಾಜೇಂದ್ರಗೌಡ ರಾಯಗೊಂಡ, ಮಹಾಂತೇಶ ಮಠಪತಿ, ಮಹಾಂತೇಶ ಬೂದಿಹಾಳಮಠ, ಹರೀಶ ಬೆವೂರ, ಮಹಾಂತೇಶ ಮೋಟಗಿ, ಶಂಕರ ಸಾಲಿಮಠ, ಉಮೇಶ ಜತ್ತಿ ಸೇರಿದಂತೆ ಮಾತೆಯರು ಭಾಗಿಯಾಗಿದ್ದರು. ಕಿಲ್ಲಾ ಗಲ್ಲಿಯಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಪಾನಕ ಸೇವೆ ನೀಡಿ ಭಾವೈಕ್ಯತೆಗೆ ಸಾಕ್ಷಿಯಾದರು.

