Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿನ ವಿವಿಧ ಐತಿಹಾಸಿಕ ಬಾವಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ಪುನಶ್ಚೇತನಗೊಳಿಸಿ, ಬಾವಡಿಯಲ್ಲಿರುವ ನೀರನ್ನು ಗೃಹ ಬಳಕೆಗಾಗಿ ಸಾರ್ವಜನಿಕರಿಗೆ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.ವಿಜಯಪುರ ನಗರದಲ್ಲಿರುವ ಗಚ್ಚಿನಕಟ್ಟಿ ಕಾಲನಿ ಬಾವಡಿ, ಫೋಸ್ಟ್ ಆಫೀಸ್ ಆವರಣದಲ್ಲಿರುವ ಬಾವಡಿ, ಭರತ ಬಾವಡಿ, ಚಂದಾಬಾವಡಿ, ಸೈಟಲೈಟ್ ಬಸ್ ನಿಲ್ದಾಣದ ಹತ್ತಿರದ ರೂಮಾಲ ಬಾವಡಿ, ಆಕೃತಿ ಕಾಲನಿ ಬಾವಡಿ, ಕಣಕಿ ಬಜಾರ ಹತ್ತಿರದ ಸಕ್ರಿ ಬಾವಡಿ, ಚಪ್ಪರಬಂದ ಗಲ್ಲಿಯಲ್ಲಿರುವ ಮುಕ್ರಿ ಬಾವಡಿ, ಝಂಡಾ ಕಟ್ಟಾ ಹತ್ತಿರವಿರುವ ಪೇಟಿ ಬಾವಡಿ, ಮನಗೂಳಿ ಅಗಸಿ ಹತ್ತಿರವಿರುವ ಬಸರಿ ಬಾವಡಿ, ಅಂಜುಮನ್ ಕಾಲೇಜ್ ಹತ್ತಿರವಿರುವ ಬಾವಡಿ, ರಂಭಾಪುರ ಬಾವಡಿ, ವಾರ್ಡ ನಂ.೩೨ರ ಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ಬಾವಡಿ ಹಾಗೂ ಶಾಹು ನಗರದ ಗುಂಡ ಬಾವಡಿಯನ್ನು ಪುನಶ್ಚೇತನಗೊಳಿಸಲಾಗಿದೆ. ಈ ಬಾವಡಿಗಳು ನೀರಿನಿಂದ ಸಮೃದ್ಧವಾಗಿದ್ದು, ಈ ಬಾವಡಿಗಳ ಪೈಕಿ ಈಗಾಗಲೇ ೬ ಬಾವಡಿಗಳ ನೀರು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಶ್ರೀ ಬಸವೇಶ್ವರ ಜಯಂತಿಯ ಪ್ರಯುಕ್ತ ಬಸವೇಶ್ವರ ಸರ್ಕಲನಲ್ಲಿ ಜಗಜ್ಯೋತಿ, ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಸವ ಜಯಂತಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಬಸವೇಶ್ವರ ಸರ್ಕಲ್ ಗೆಳೆಯರಾದ ವಿಜಯ ಗಿಡ್ಡಪ್ಪಗೋಳ, ಉಮೇಶ ಗಣಿ, ಹರೀಶ ಸೋಮಶೇಖರ, ಶಿವು ಅರಕೇರಿ, ತೇಜಸ್ ಗಣಿ, ಚಂದ್ರು ಹಡ್ರೋಳಿ, ಬಸು ವಜ್ರಮಟ್ಟಿ, ಸಚೀನ ಮನ್ನಿಕೇರಿ, ಸಾಬು ವಾಲೀಕಾರ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಷ್ಟ್ರೀಯ ಪ್ರಗತಿಗೆ ಶ್ರಮವೇ ಪ್ರಮುಖ, ಕಾರ್ಮಿಕರ ಅವಿರತ ಶ್ರಮದ ಮೂಲಕ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೃಷ್ಟಿಕೋನವನ್ನು ನನಸಾಗಿಸಬಹುದು. ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪನೆಯು ರಾಷ್ಟ್ರ ನಿರ್ಮಾಣದ ಅಡಿಪಾಯವೆಂದು ಎನ್ ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ್ ಝಾ ಹೇಳಿದರು.ತಾಲೂಕಿನ ಕೂಡಗಿ ಎನ್ ಟಿಪಿಸಿಯಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರ ಕಠಿಣ ಪರಿಶ್ರಮದ ಪ್ರಯತ್ನಗಳಿಲ್ಲದೆ ಯಾವುದೇ ರೀತಿಯ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ.ದೇಶದ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಅತ್ಯಗತ್ಯ. ಎನ್‌ಟಿಪಿಸಿಯ ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಬದ್ಧತೆಯು ಕಂಪನಿಯು ತನ್ನ ಧ್ಯೇಯವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ದಿನವು ಕೇವಲ ಆಚರಣೆಯಲ್ಲ, ಆದರೆ ಕಾರ್ಮಿಕರ ಬೆಂಬಲವಿಲ್ಲದೆ, ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ನೆನಪಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜನರಲ್ ಮ್ಯಾನೇಜರ್ ಗಳಾದ ಸಂತೋಷ ತಿವಾರಿ, ಉಮೇಶ ಕುಮಾರ್ ಜೈನ್, ಕಾಲಿಯಾ ಎಸ್ ಮೂರ್ತಿ,…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಕಮರಿಮಠದ ಶರಣಭಸವೇಶ್ವರ ಹಾಗೂ ಸಿದ್ಧಲಿಂಗೇಶ್ವರ ಮಹಾರಾಜರ ರಥೋತ್ಸವ ಸೋಮವಾರ ಸಾಯಂಕಾಲ ಹಳಿಂಗಳಿಯ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.ರಥವನ್ನು ತೆಂಗು, ಬಾಳೆ ಹಣ್ಣು, ಹೂವುಗಳು, ವಿದ್ಯುತ್ ದ್ವೀಪಗಳಿಂದ ಅಲಂಕರಿಸಲಾಗಿತ್ತು, ಭಕ್ತರು ಬೆಂಡು, ಬೆತ್ತಾಸು, ಕಾರಿಖ್, ರಥಕ್ಕೆ ಎಸೆದು ಭಕ್ತಿ ಮೇರೆದರು. ಚೀನಿಕೊಲು, ಕರಡಿ ವಾದ್ಯ, ಡೊಳ್ಳು ವಾದ್ಯ, ಗಮನ ಸೆಳೆದವು.ಚಿಕ್ಕಪಡಸಲಗಿ, ಕವಟಗಿ, ಜನವಾಡ, ಬಿದರಿ, ನಾಗನೂರು, ಹಿರೇಪಡಸಲಗಿ ಮತ್ತಿತರ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಗ್ಗೆ ಸಿದ್ದಲಿಂಗೇಶ್ವರ ಮಹಾರಾಜರ ಅಡ್ಡಪಲ್ಲಕ್ಕಿ ಉತ್ಸವ, ಶರಣ ಬಸವೇಶ್ವರ ಮಹಾರಾಜರ ತೊಟ್ಟಿಲು ತೂಗುವ(ನಾಮಕರಣ) ಕಾರ್ಯಕ್ರಮಗಳು ಜರುಗಿದವು.ಇದೇ ವೇಳೆ ಗ್ರಾಮಸ್ಥರಾದ ರಾವತಪ್ಪ ಕಲ್ಯಾಣಿˌ ಮಲ್ಲು ಪಟ್ಟಣಶೆಟ್ಟಿˌ ಸುರೇಶ ದಾನಗೌಡ, ಮಹಾದೇವ ಕಲ್ಯಾಣಿˌ ಲಕ್ಷ್ಮಣ ಕಲ್ಯಾಣಿˌ ಸಿದ್ದು ಜಂಗಮಶೆಟ್ಟಿˌ ಅಡಿವೇಪ್ಪ ಅಂಬಲಝೇರಿˌ ಪ್ರಭು ಬೋದ್ಲಿˌ ಜೈಪಾಲ್ ಹೊಸಮನಿˌ ಸದಾಶಿವ ಕಲ್ಯಾಣಿ, ಮಲ್ಲಯ್ಯಾ ಹಿರೇಮಠ, ಅಯ್ಯಪ್ಪ ಮಠಪತಿ, ಸಿದ್ಧಲಿಂಗ ಹಿರೇಮಠˌ ಸಿದ್ರಾಮ ಇಟ್ಟಿˌ ಶ್ರೀಶೈಲ ಪಟ್ಟಣಶೆಟ್ಟಿˌ ಹನಮಂತ ಕಾರಜೋಳˌ…
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು, ಸಮಗ್ರವಾದ ಯೋಜನೆ ರೂಪಿಸಿ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಅವರು ಸೂಚನೆ ನೀಡಿದರು.ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕ್ರೀಯಾ ಯೋಜನೆ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು. ನಗರ ಪ್ರದೇಶದ ಎಲ್ಲ ವಾರ್ಡಗಳಿಗೆ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಕೆಗೆ ತಾಂತ್ರಿಕ ಸಮಸ್ಯೆ ಎದುರಾದ ಸಂದರ್ಭಗಳಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಇರ್ತರ್ಥಪಡಿಸಿಕೊಂಡು ಸಕಾಲದಲ್ಲಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುಂತೆ ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐ.ಸಿ.ಎಸ್.ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಜಲನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ ಐ.ಸಿ.ಎಸ್.ಇ ಸ್ಕೂಲ್ ವಿದ್ಯಾರ್ಥಿನಿ ವರ್ಷಾ ಕುಂಬಾರ ನಗರಕ್ಕೆ ದ್ವಿತೀಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಅಲ್ಲದೇ, ಪರೀಕ್ಷೆಗೆ ಹಾಜರಾದ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದು, ಶೇ. 100 ರಷ್ಟು ಫಲಿತಾಂಶ ಬಂದಿದೆ.ಈ ಪರೀಕ್ಷೆಯಲ್ಲಿ ವರ್ಷಾ ಕುಂಬಾರ ಒಟ್ಟು 600 ಅಂಕಗಳ ಪೈಕಿ 559 ಅಂಕ ಪಡೆದಿದ್ದಾಳೆ. ಈ ಮೂಲಕ ವಿಜಯಪುರ ನಗರಕ್ಕೆ ದ್ವಿತೀಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಅದೇ ರೀತಿ ವರ್ಷಾ ಹಿರೇಮಠ 600ಕ್ಕೆ 551 ಅಂಕ ಪಡೆದು ಶಾಲೆಗೆ ದ್ವಿತೀಯ ಮತ್ತು ಮತ್ತು ರೊಮಾ ಭೋಸಲೆ 600ಕ್ಕೆ 542 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ವರ್ಷಾ ಕುಂಬಾರ ಶಾಲೆಯಲ್ಲಿ ಗುರುಗಳು ಮಾಡಿದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ನಾಳೆ ದಿ.2 ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಬೆ.10ಗಂ. ಮ. 12ಗಂ. ವರೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ.ನಂತರ ಸಂ. 4ಗಂ. ವಿಜಯಪುರದಿಂದ ಹೊರಟು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿಯಲ್ಲಿ ಸಂ. 7ಗಂ. ನಡೆಯಲಿರುವ ಸದ್ಧರ್ಮ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ರಾ. 9ಗಂ. ಉಜ್ಜಯಿನಿಯಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಮಾನ್ಯ ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿಶ್ವಗುರು ಬಸವಣ್ಣವರು ಸಮಾಜಉದ್ಧಾರಕರು, ವಿಶ್ವಕ್ಕೆ ಸಮಾನತೆ ಸಾರಿದ ಮಹಾನುಭಾವರು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ತಹಸೀಲ್ದಾರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಎಲ್ಲ ಜಾತಿಗಳ ಸಂತರನ್ನು ಒಂದೆಡೆಗೆ ಸೇರಿಸಿ, ಕಾಂತ್ರಿ ಮಾಡಿದರು. ಅವರ ತತ್ವಾದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಮಾಜಿ ಶಾಸಕ ಆನಂದ ನ್ಯಾಮಗೌಡ, ಓಲೆ ಮಠದ ಆನಂದ ದೇವರು, ಮುಖಂಡರಾದ ಬಸು ಬಳಗಾರ, ಮಲ್ಲು ದಾನಗೌಡ, ನಾಗಪ್ಪ ಸನದಿ, ತಾತಾ ಸಾಹೇಬ ಬಾಂಗಿ, ನ್ಯಾಯವಾದಿ ದೇವರವರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಸದಾಶಿವ ಮಕ್ಕೊಜಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಪ್ರಸ್ತುತ ಬೇಸಿಗೆಯ ಬೀರು ಬಿಸಿಲಿನ ತಾಪಮಾನದಲ್ಲಿ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯದ ಆವರಣದಲ್ಲಿ ಕುಡಿಯುವ ನೀರಿನ ಸಮರ್ಪಕವಾದ ವ್ಯವಸ್ಥೆಗೆ ಬಿಇಒ ಅಶೋಕ ಬಸಣ್ಣವರ ಚಾಲನೆ ನೀಡಿದರು.ಕಚೇರಿ ಆವರಣದಲ್ಲಿ ಬೋರವೆಲ್ ಕೊರೆಸಿ ವಾಟರ್ ಟ್ಯಾಂಕ್ ಯೊಂದನ್ನು ನಿಮಿ೯ಸಿದ್ದು ಅದಕ್ಕೆ ನೂತನ ವಿದ್ಯುತ್ ಮೀಟರ್ ಬೋರ್ಡ್ ಆಳವಡಿಸಿ ವಿದ್ಯುಕ್ತವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಬಿಇಒ ಅಶೋಕ ಬಸಣ್ಣವರ ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು, ಸಂಘ, ಸಂಸ್ಥೆಗಳ ಮುಖಂಡರು, ಗಣ್ಯರು, ಹಲ ಮಹನೀಯರು ಉಪಸ್ಥಿತರಿದ್ದರು.ನೀರು ಚಿಮ್ಮುತ್ತಿದ್ದಂತೆ ಅಲ್ಲಿದ್ದವರ ಮೊಗಭಾವದಲ್ಲಿ ಜಲಸೆಲೆಯ ಹರ್ಷಯುತ ಸಂತಸ ಮೊಳಕೆಯೊಡೆದು ಚಿಮ್ಮಿತು. ಹಷೋ೯ಲ್ಲಾಸದ ಜಲನೊರೆ ಸಂಭ್ರಮ ಕಳೆಗಟ್ಟಿತ್ತು. ಶುಚಿ ಪರಿಸರಕ್ಕಾಗಿ ಕಚೇರಿ ಆವರಣದಲ್ಲಿ ನೆಡಲಾದ ಹಲ ಸಸ್ಯ ಜೀವಗಳಿಗೂ ಈ ನೀರಿನ ವ್ಯವಸ್ಥೆ ಅನುಕೂಲವಾಗಲಿದೆ. ಅಲ್ಲಿನ ಗಿಡಗಳಿಗೆ ಜಲದಾಹ ನೀಗಿಸಿ ಹಸಿರು ತೋರಣ ಸೃಷ್ಟಿಸಿ ತಂಪು ವಾತಾವರಣ ಸೂಸಲಿದೆ. ಮುಂದಿನ ದಿನಮಾನಗಳಲ್ಲಿನ ಬೇಸಿಗೆ ಕಾಲದಲ್ಲಿ ಎದುರುಗೊಳ್ಳಲ್ಲಿರುವ ಸಂಭವನೀಯ ವಿಪರೀತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ವಿದ್ಯಾಭ್ಯಾಸದ ಜತೆಗೆ ಶೈಕ್ಷಣಿಕ ಬೆಳವಣಿಗೆ ಕಾಣಲು ಪಾಲಕ-ಪೋಷಕರ ಪಾತ್ರ ಶಿಕ್ಷಕರಷ್ಟೇ ಮಹತ್ವದ್ದಾಗಿದೆ ಎಂದು ನಾಗಠಾಣ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ ಹೇಳಿದರು.ಬುಧವಾರದಂದು ತಾಲೂಕಿನ ಅಂಕಲಗಿ ಗ್ರಾಮದ ದುಸಂಗರಾಯ ಗುಡಿಯಲ್ಲಿ ನವ ಚೇತನ ವಿದ್ಯಾ ಸಂಸ್ಥೆಯ ಅಡಿಯಲ್ಲಿ ವಿದ್ಯಾಚೇತನ ಕಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಆದ್ದರಿಂದ ಮಕ್ಕಳ ಉತ್ತಮ ಕಲಿಕೆಗೆ ಪಾಲಕರ ಸಹಕಾರ ಅವಶ್ಯವಿದೆಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಕ್ಕಳೇ ದೇವರು ಎಂಬ ಭಾವನೆಯಿದ್ದು, ಅವರಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಬದುಕಿನ ಗುರಿ ಈಡೇರಿಕೆಗಾಗಿ ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಕುಟುಂಬ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಆಹೇರಿ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಪ್ರತಿಯೊಂದು ಹಂತದಲ್ಲಿ, ಶಾಲೆಗೆ ಬಂದು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು…
