ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿಶ್ವಗುರು ಬಸವಣ್ಣವರು ಸಮಾಜ
ಉದ್ಧಾರಕರು, ವಿಶ್ವಕ್ಕೆ ಸಮಾನತೆ ಸಾರಿದ ಮಹಾನುಭಾವರು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ತಹಸೀಲ್ದಾರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಎಲ್ಲ ಜಾತಿಗಳ ಸಂತರನ್ನು ಒಂದೆಡೆಗೆ ಸೇರಿಸಿ, ಕಾಂತ್ರಿ ಮಾಡಿದರು. ಅವರ ತತ್ವಾದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಓಲೆ ಮಠದ ಆನಂದ ದೇವರು, ಮುಖಂಡರಾದ ಬಸು ಬಳಗಾರ, ಮಲ್ಲು ದಾನಗೌಡ, ನಾಗಪ್ಪ ಸನದಿ, ತಾತಾ ಸಾಹೇಬ ಬಾಂಗಿ, ನ್ಯಾಯವಾದಿ ದೇವರವರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಸದಾಶಿವ ಮಕ್ಕೊಜಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

