ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಕಮರಿಮಠದ ಶರಣಭಸವೇಶ್ವರ ಹಾಗೂ ಸಿದ್ಧಲಿಂಗೇಶ್ವರ ಮಹಾರಾಜರ ರಥೋತ್ಸವ ಸೋಮವಾರ ಸಾಯಂಕಾಲ ಹಳಿಂಗಳಿಯ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.
ರಥವನ್ನು ತೆಂಗು, ಬಾಳೆ ಹಣ್ಣು, ಹೂವುಗಳು, ವಿದ್ಯುತ್ ದ್ವೀಪಗಳಿಂದ ಅಲಂಕರಿಸಲಾಗಿತ್ತು, ಭಕ್ತರು ಬೆಂಡು, ಬೆತ್ತಾಸು, ಕಾರಿಖ್, ರಥಕ್ಕೆ ಎಸೆದು ಭಕ್ತಿ ಮೇರೆದರು. ಚೀನಿಕೊಲು, ಕರಡಿ ವಾದ್ಯ, ಡೊಳ್ಳು ವಾದ್ಯ, ಗಮನ ಸೆಳೆದವು.
ಚಿಕ್ಕಪಡಸಲಗಿ, ಕವಟಗಿ, ಜನವಾಡ, ಬಿದರಿ, ನಾಗನೂರು, ಹಿರೇಪಡಸಲಗಿ ಮತ್ತಿತರ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಗ್ಗೆ ಸಿದ್ದಲಿಂಗೇಶ್ವರ ಮಹಾರಾಜರ ಅಡ್ಡಪಲ್ಲಕ್ಕಿ ಉತ್ಸವ, ಶರಣ ಬಸವೇಶ್ವರ ಮಹಾರಾಜರ ತೊಟ್ಟಿಲು ತೂಗುವ(ನಾಮಕರಣ) ಕಾರ್ಯಕ್ರಮಗಳು ಜರುಗಿದವು.
ಇದೇ ವೇಳೆ ಗ್ರಾಮಸ್ಥರಾದ ರಾವತಪ್ಪ ಕಲ್ಯಾಣಿˌ ಮಲ್ಲು ಪಟ್ಟಣಶೆಟ್ಟಿˌ ಸುರೇಶ ದಾನಗೌಡ, ಮಹಾದೇವ ಕಲ್ಯಾಣಿˌ ಲಕ್ಷ್ಮಣ ಕಲ್ಯಾಣಿˌ ಸಿದ್ದು ಜಂಗಮಶೆಟ್ಟಿˌ ಅಡಿವೇಪ್ಪ ಅಂಬಲಝೇರಿˌ ಪ್ರಭು ಬೋದ್ಲಿˌ ಜೈಪಾಲ್ ಹೊಸಮನಿˌ ಸದಾಶಿವ ಕಲ್ಯಾಣಿ, ಮಲ್ಲಯ್ಯಾ ಹಿರೇಮಠ, ಅಯ್ಯಪ್ಪ ಮಠಪತಿ, ಸಿದ್ಧಲಿಂಗ ಹಿರೇಮಠˌ ಸಿದ್ರಾಮ ಇಟ್ಟಿˌ ಶ್ರೀಶೈಲ ಪಟ್ಟಣಶೆಟ್ಟಿˌ ಹನಮಂತ ಕಾರಜೋಳˌ ಪ್ರವೀಣ ನಾವಿˌ ಸೇರಿದಂತೆ ಅನೇಕರಿದ್ದರು.

