ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಶ್ರೀ ಬಸವೇಶ್ವರ ಜಯಂತಿಯ ಪ್ರಯುಕ್ತ ಬಸವೇಶ್ವರ ಸರ್ಕಲನಲ್ಲಿ ಜಗಜ್ಯೋತಿ, ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಸವ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವೇಶ್ವರ ಸರ್ಕಲ್ ಗೆಳೆಯರಾದ ವಿಜಯ ಗಿಡ್ಡಪ್ಪಗೋಳ, ಉಮೇಶ ಗಣಿ, ಹರೀಶ ಸೋಮಶೇಖರ, ಶಿವು ಅರಕೇರಿ, ತೇಜಸ್ ಗಣಿ, ಚಂದ್ರು ಹಡ್ರೋಳಿ, ಬಸು ವಜ್ರಮಟ್ಟಿ, ಸಚೀನ ಮನ್ನಿಕೇರಿ, ಸಾಬು ವಾಲೀಕಾರ ಇನ್ನಿತರರು ಇದ್ದರು.

